ಸಾರಾಂಶ
ಊರಿನ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂಬ ಧ್ಯೇಯದಿಂದ ಪಂಚಾಯಿತಿ ಪ್ರತಿನಿಧಿಗಳಾಗಿ ಆಯ್ಕೆಯಾದವರಿಗೆ ಹಲವು ಬಗೆಯ ಸಮಸ್ಯೆಗಳು ಕಾಡುತ್ತಿದ್ದು, ಗ್ರಾಮದ ಯಾವ ಸಮಸ್ಯೆಗಳಿಗೂ ಸ್ಪಂದಿಸಲಾಗದ ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿ ಒದಗಿದೆ.
ಕುಮಟಾ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ಮೂಲಕ ಸಂಘಟಿತ ಶಕ್ತಿ ಸಂವರ್ಧನೆಯ ಜತೆಗೆ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗ್ರಾಮ ಪಂಚಾಯಿತಿಗಳನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಶಕ್ತಿಶಾಲಿ ಮಾಡಲು ಸಾಧ್ಯವಿದೆ ಎಂದು ತಾಲೂಕು ಗ್ರಾಪಂ ಸದಸ್ಯರ ನೂತನ ಒಕ್ಕೂಟದ ಅಧ್ಯಕ್ಷ ಗಣೇಶ ಅಂಬಿಗ ಮಿರ್ಜಾನ ತಿಳಿಸಿದರು.
ಸೋಮವಾರ ತಾಪಂ ಸಭಾಭವನದಲ್ಲಿ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ನೂತನ ಒಕ್ಕೂಟ ರಚನೆಯ ಸಭೆ ಉದ್ದೇಶಿಸಿ ಮಾತನಾಡಿದರು. ಊರಿನ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂಬ ಧ್ಯೇಯದಿಂದ ಪಂಚಾಯಿತಿ ಪ್ರತಿನಿಧಿಗಳಾಗಿ ಆಯ್ಕೆಯಾದವರಿಗೆ ಹಲವು ಬಗೆಯ ಸಮಸ್ಯೆಗಳು ಕಾಡುತ್ತಿದ್ದು, ಗ್ರಾಮದ ಯಾವ ಸಮಸ್ಯೆಗಳಿಗೂ ಸ್ಪಂದಿಸಲಾಗದ ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿ ಒದಗಿದೆ. ಇ- ಸ್ವತ್ತು ಸಮಸ್ಯೆ ಬಗೆಹರಿಯದಿದ್ದು, ಇದಕ್ಕೆ ಸೂಕ್ತ ತರಬೇತಿ ಹೊಂದಿದ ಸಿಬ್ಬಂದಿ ಲಭ್ಯವಿಲ್ಲದಂತಾಗಿದೆ. ಒಂದೊಂದು ಪಂಚಾಯಿತಿಯಲ್ಲಿ ಒಂದೊಂದು ಬಗೆಯ ಮಾಹಿತಿ ಎಂಬಂತಾಗಿದೆ. ಪಂಚಾಯಿತಿ ಕಾರ್ಯಗಳು ವಿಳಂಬವಾಗುತ್ತಿದೆ ಎಂದರು. ಒಕ್ಕೂಟದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ದೇವಗಿರಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ, ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರ ಮೊಟಕುಗೊಳಿಸುವ ಜತೆಗೆ ಪಂಚಾಯತ್ ರಾಜ್ ವ್ಯವಸ್ಥೆಯ ಕ್ರಿಯಾಯೋಜನೆಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ₹೧ ಲಕ್ಷ ಮೇಲ್ಪಟ್ಟು ಕಾಮಗಾರಿಗೆ ಅಗ್ರಿಮೆಂಟ್ ಅಧಿಕಾರವೂ ಇಲ್ಲದಂತಾಗಿದೆ. ಇಂಥ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಘಟಿತ ಪ್ರಯತ್ನ ಬೇಕು ಎಂಬ ಕಾರಣದಿಂದ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ರಚಿಸಲಾಗಿದ್ದು, ಸಂಘಟನೆಯ ಮೂಲಕ ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.ಸಭೆಯಲ್ಲಿ ನೂತನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಾರಾಮ ನಾಯ್ಕ ಹೆಗಡೆ, ಸಹ ಕಾರ್ಯದರ್ಶಿಗಳಾದ ರಮಾಕಾಂತ ಹರಿಕಂತ್ರ ಹಿರೇಗುತ್ತಿ, ಗಂಗೆ ಪಟಗಾರ ವಾಲಗಳ್ಳಿ, ಕೋಶಾಧ್ಯಕ್ಷ ಫ್ರೆಂಕಿ ಫರ್ನಾಂಡೀಸ್ ದಿವಗಿ, ಉಪಾಧ್ಯಕ್ಷರಾಗಿ ದತ್ತ ಪಟಗಾರ, ಬಾಡ, ಶ್ರೀಧರ ಪೈ ಅಳಕೋಡ, ಚಂದ್ರಶೇಖರ ನಾಯ್ಕ ಗೋಕರ್ಣ, ವಿರೂಪಾಕ್ಷ ನಾಯ್ಕ ಕಲಭಾಗ, ಆನಂದು ನಾಯಕ ಮಿರ್ಜಾನ, ಶೈಲಾ ನಾಯ್ಕ, ವೀಣಾ ನಾಯ್ಕ, ನಿರ್ದೇಶಕರಾದ ಪ್ರಕಾಶ ಶಾನಭಾಗ ವಾಲಗಳ್ಳಿ, ಸಣ್ಣು ಗೌಡ ಹನೇಹಳ್ಳಿ, ಇಸ್ಮಾಯಿಲ್ ಉಪ್ಪರಕರ ಕಾಗಾಲ, ಆರ್.ವಿ. ಹೆಗಡೆ ಮೂರೂರು, ಚಂದ್ರಹಾಸ ನಾಯ್ಕ ಹೊಲನಗದ್ದೆ, ನವೀನ ಪಟಗಾರ ಬರ್ಗಿ, ಮಹೇಶ ನಾಯಕ ತೊರ್ಕೆ, ಮುರ್ಕುಂಡಿ ನಾಯ್ಕ ಕೊಡ್ಕಣಿ, ಸತೀಶ ಭಂಡಾರಿ ಗೋಕರ್ಣ, ಸುಬ್ರಹ್ಮಣ್ಯ ಹೆಗಡೆ ಕಲ್ಲಬ್ಬೆ ಹಾಗೂ ಮಹಿಳಾ ನಿರ್ದೇಶಕರಾದ ನಾಗವೇಣಿ ಮುಕ್ರಿ, ಶಾಂತಿ ಮಡಿವಾಳ, ವೀಣಾ ದುರ್ಗೇಕರ, ಭಾರತಿ ಪಟಗಾರ ಇತರರು ಉಪಸ್ಥಿತರಿದ್ದರು. ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನಯಲ್ಲಾಪುರ: ತಾಲೂಕಿನ ಬೋಮಡಿಕೊಪ್ಪ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾಲು ಸಹಿತ ಪೊಲೀಸರು ಬಂಧಿಸಿದ್ದಾರೆ.ಹಳಿಯಾಳ ತಾಲೂಕಿನ ಅಂಬಿಕಾನಗರದ ಕೇದದಾಳದ ಜೋಸೆಫ್ ಪ್ರಾಸಿಸ್ ಸಿದ್ದಿ(೩೭) ಈತನು ಸುಮಾರು ೨೪೯.೪ ಗ್ರಾಂ ಗಾಂಜಾ ಹಾಗೂ ಮಾರಾಟ ಮಾಡಿದ ₹೩೦೦ ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಎಡಜಿ ಚವ್ಹಾಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.