ಸಾರಾಂಶ
ಭಾರತೀ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಲಭ್ಯವಿದೆ. ತಂದೆ ದಿ.ಜಿ.ಮಾದೇಗೌಡರು ಕೊಟ್ಟಂತಹ ಜವಾಬ್ದಾರಿಯನ್ನು ಅವರ ಹಾದಿಯಲ್ಲೇ ನಿರ್ವಹಿಸುತ್ತಿದ್ದೇನೆ. , ವಿದ್ಯಾರ್ಥಿ ದಿಸೆಯಲ್ಲಿ ದೊಡ್ಡ ಉದ್ಯಮಿಯಾಗಬೇಕೆಂಬ ಆಸೆ ನನ್ನಲ್ಲಿತ್ತು. ರೇಷ್ಮೆ ಉದ್ಯಮಿಯಾಗಿ ಬೆಳೆದು ಇಂದು ಆರ್ಥಿಕವಾಗಿ ಸದೃಢಗೊಂಡಿದ್ದೇನೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸಲು ಭಾರತಿ ವಿದ್ಯಾಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ಹಾಗೂ ಬಿಇಟಿ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದರು.ಭಾರತೀಕಾಲೇಜಿನ ಆವರಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ವತಿಯಿಂದ ಮಕ್ಕಳಿಗೆ ಆಯೋಜಿಸಿದ್ದ ವ್ಯಾಪಾರ ಭಾರತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ವ್ಯಾಪಾರದ ಅರಿವು ಇದ್ದರೆ ಜ್ಞಾನವು ವೃದ್ದಿಸುತ್ತದೆ. ಇದರಿಂದ ಉದ್ಯಮಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಭಾರತೀ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಲಭ್ಯವಿದೆ. ತಂದೆ ದಿ.ಜಿ.ಮಾದೇಗೌಡರು ಕೊಟ್ಟಂತಹ ಜವಾಬ್ದಾರಿಯನ್ನು ಅವರ ಹಾದಿಯಲ್ಲೇ ನಿರ್ವಹಿಸುತ್ತಿದ್ದೇನೆ ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರಣಗೆರೆ ಜಗದೀಶ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ದೊಡ್ಡ ಉದ್ಯಮಿಯಾಗಬೇಕೆಂಬ ಆಸೆ ನನ್ನಲ್ಲಿತ್ತು. ರೇಷ್ಮೆ ಉದ್ಯಮಿಯಾಗಿ ಬೆಳೆದು ಇಂದು ಆರ್ಥಿಕವಾಗಿ ಸದೃಢಗೊಂಡಿದ್ದೇನೆ ಎಂದರು.
ಇದೇ ವೇಳೆ ಮಕ್ಕಳು ಪ್ರತ್ಯೇಕವಾಗಿ ಅಂಗಡಿಗಳನ್ನು ತೆರೆದು ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಲಾಭ ನಷ್ಟದ ಬಗ್ಗೆ ಚರ್ಚೆ ನಡೆಸಿದರು. ವೇದಿಕೆಯಲ್ಲಿ ಹೆಲ್ತ್ ಸೈನ್ಸ್‌ನ ನಿರ್ದೇಶಕ ತಮಿಜ್‌ಮಣಿ, ಬಿಇಡಿ ಪ್ರಾಂಶುಪಾಲ ಡಾ.ಸುರೇಶ್, ಸಂಯುಕ್ತ ಕಾಲೇಜಿನ ಪ್ರಾಂಶುಪಾಲ ಪುಟ್ಟಸ್ವಾಮಿ, ಪ್ರಾಂಶುಪಾಲ ಉದ್ಯಮಿಗಾಳದ ಮೈಸೂರು ವೈಭವ್, ಸಜನ್, ಹರೀಶ್, ಮುಖ್ಯ ಶಿಕ್ಷಕಿ ಎಚ್.ಪಿ.ಪ್ರತಿಮಾ, ಶಿಕ್ಷಕರಾದ ಇಂದ್ರಾಣಿ, ಮಂಗಳಗೌರಿ, ರೇಖಾ, ಸಿಂಧೂ ಹಾಜರಿದ್ದರು.