ಸಂಘಟನೆಗಳು ಸಾಮಾಜಿಕ ತುಡಿತ ಹೊಂದಿರಬೇಕು: ಶಾಸಕ ಕೊಡ್ಗಿ

| Published : Jul 29 2024, 12:54 AM IST

ಸಾರಾಂಶ

ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಅಂಚೆ ಜನ ಸಂಪರ್ಕ - ಆಧಾರ್ ನೋಂದಣಿ - ತಿದ್ದುಪಡಿ ಅಭಿಯಾನ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಸಂಘ ಸಂಸ್ಥೆಗಳು ಸಾಮಾಜಿಕ ತುಡಿತ ಹೊಂದಿರಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಶನಿವಾರ ಇಲ್ಲಿನ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ನವೋದಯ ಫ್ರೆಂಡ್ಸ್ ಹರ್ತಟ್ಟು ನೇತೃತ್ವದಲ್ಲಿ ಕೋಟ ಗ್ರಾ.ಪಂ., ದೇವಳದ ವ್ಯವಸ್ಥಾಪನ ಸಮಿತಿ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ - ಆಧಾರ್ ನೋಂದಣಿ - ತಿದ್ದುಪಡಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರದ ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಜನಪ್ರತಿನಿಧಿಗಳಿಗೆ ಸೀಮಿತವಾಗದೇ ಸಂಘ ಸಂಸ್ಥೆಗಳು ಮಾಡಬೇಕು. ಈ ದಿಸೆಯಲ್ಲಿ ನವೋದಯ ಫ್ರೆಂಡ್ಸ್‌ನ ಸಾಮಾಜಿಕ ಕಾರ್ಯಗಳು ಪ್ರಶಂಸನೀಯ ಎಂದರು.

ನಿವೃತ್ತ ಪೋಸ್ಟ್ ಮ್ಯಾನ್ ರಮೇಶ್ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅಭಿಯಾನವನ್ನು ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನವೋದಯ ಫ್ರೆಂಡ್ಸ್ ಗೌರವಾಧ್ಯಕ್ಷ ಮಹೇಶ್ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಕೋಟ ಗ್ರಾಮ ಲೆಕ್ಕಿಗ ರಾಘವೇಂದ್ರ ಹಕ್ಲಾಡಿ, ಕೋಟ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಶಿವರಾಮ ಶೆಟ್ಟಿ, ಅಜಿತ್ ದೇವಾಡಿಗ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಎಚ್. ಕುಂದರ್, ಉಡುಪಿ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಪಿ.ಎನ್. ಸತೀಶ್, ಭಾರತೀಯ ಜನೌಷಧ ಕೇಂದ್ರ ಬ್ರಹ್ಮಾವರ ಇದರ ಮುಖ್ಯಸ್ಥ ಮಧುಸೂಧನ ಹೇರೂರು, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಸುಂದರ್ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿಲಾ ಪೂಜಾರಿ, ಜಯಂಟ್ಸ್ ಯೂನಿಟ್ ನಿರ್ದೇಶಕ ವಿವೇಕ್ ಕಾಮತ್ ಉಪಸ್ಥಿತರಿದ್ದರು. ನವೋದಯ ಫ್ರೆಂಡ್ಸ್ ಸದಸ್ಯ ಕೀರ್ತಿಶ ಪೂಜಾರಿ ಸ್ವಾಗತಿಸಿ ನಿರೂಪಿದರು. ನವೋದಯ ಫ್ರೆಂಡ್ಸ್ ಕಾರ್ಯದರ್ಶಿ ಭರತ್ ಕೋಟ ವಂದಿಸಿದರು. ಪ್ರಸನ್ನ ಕಾರಂತ್ ಸಹರಿಸಿದರು. ಕಾರ್ಯಕ್ರಮವನ್ನು ನವೋದಯ ಫ್ರೆಂಡ್ಸ್ ಮಾಜಿ ಅಧ್ಯಕ್ಷ ಶ್ರೀನಾಥ್ ಕೋಟ ಸಂಯೋಜಿಸಿದರು.