ಸಮಾಜದ ಅಭಿವೃದ್ಧಿಗೆ ಸಂಘಟಿತ ಹೋರಾಟ ಮುಖ್ಯ: ಜಗದೀಶ ಶೆಟ್ಟರ್

| Published : Sep 30 2024, 01:16 AM IST

ಸಾರಾಂಶ

ಬಣಜಿಗ ಸಮಾಜ ಸ್ವಾಭಿಮಾನದ ಸಂಸ್ಕೃತಿ ಹೊಂದಿದ್ದು, ಕಾಯಕವನ್ನೇ ನಂಬಿ ಸಾಗಿರುವ ಈ ಸಮಾಜ ಇನ್ನಷ್ಟು ಬಲಿಷ್ಠವಾಗಬೇಕೆಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬಣಜಿಗ ಸಮಾಜ ಸ್ವಾಭಿಮಾನದ ಸಂಸ್ಕೃತಿ ಹೊಂದಿದ್ದು, ಕಾಯಕವನ್ನೇ ನಂಬಿ ಸಾಗಿರುವ ಈ ಸಮಾಜ ಇನ್ನಷ್ಟು ಬಲಿಷ್ಠವಾಗಬೇಕೆಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ ಇಂಚಲ ಕ್ರಾಸ್‌ನ ಶಿವಬಸವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ತಾಲೂಕು ಬಣಜಿಗ ಸಂಘಟನೆಯ ಆಶ್ರಯದಲ್ಲಿ ಬಾನುವಾರ ಜರುಗಿದ ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಘಟನೆ ಮಾಡುವಲ್ಲಿ ಸೇವಾಭಾವನೆ ಇದ್ದರೆ, ಮಾಡುವ ಕಾರ್ಯಗಳು ಯಶಸ್ವಿಯಾಗಲಿವೆ. ಬಣಜಿಗ ಸಮಾಜ ವಿಧಾಯಕತೆಯಿಂದ ಇಡೀ ರಾಜ್ಯ, ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಬಸವರಾಜ ಮೆಟಗುಡ್ಡ ಮಾತನಾಡಿ, ಬಣಜಿಗ ಸಮುದಾಯ ಸಾಮಾಜಿಕ ಕಳಿಕಳಿ ಹೊದಿದ್ದು, ಎಲ್ಲ ಧರ್ಮವನ್ನು ಬೆಂಬಲಿಸಿ ಪ್ರೀತಿಸುವ ಗುಣ ಹೊಂದಿದೆ ಎಂದರು.

ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ತಾಲೂಕು ಘಟಕದ ಕಾರ್ಯಾಧ್ಯಕ್ಷ ಶಂಕರ ಬಾಳಿ, ಉಪಾಧ್ಯಕ್ಷ ಮಹಾಂತೇಶ ಅವರಾದಿ, ಕಾರ್ಯದರ್ಶಿ ನಾಗರಾಜ ಪಾಟೀಲ, ಖಜಾಂಚಿ ಬಸವರಾಜ ಕನ್ನೂರು, ವಿಲಾಸ ವಾಲಿ, ಮಹಾಂತೇಶ ವಾಲಿ, ವಕೀಲ ರಾಜೇಂದ್ರ ಅಂಗಡಿ, ಮಹೇಶ ಅವಟಗಿ, ಯುವ ಘಟಕ ಅಧ್ಯಕ್ಷ ಶಿವಕುಮಾರ ಹಂಪಣ್ಣವರ, ಶಿವಲಿಂಗಪ್ಪ ಶೆಟ್ಟರ, ಮಹಿಳಾ ಗೌರವಾಧ್ಯಕ್ಷೆ ಮಹಾದೇವಕ್ಕ ಅಂಗಡಿ, ಅಧ್ಯಕ್ಷೆ ಹೇಮಜ್ಯೋತಿ ದೇಶನೂರ, ಉಪಾಧ್ಯಕ್ಷ್ಯೆ ಸ್ನೇಹಲತಾ ಮೆಟಗುಡ್ಡ, ಕಾರ್ಯದರ್ಶಿ ನಂದಾ ಜಿಗಜಿನ್ನಿ, ಖಜಾಂಚಿ ಗೌರಮ್ಮ ಕರ್ಕಿ ಹಾಗೂ ಬಣಜಿಗ ಸಂಘಟಣೆಯ ತಾಲೂಕು ಪಧಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ನಿವೃತ್ತ ಶಿಕ್ಷಕಿ ಗೌರಮ್ಮ ಕರ್ಕಿ ಬಣಜಿಗ ಸಮಾಜದ ಹಾಗೂ ಬಸವಾದಿ ಶರಣರ ಕುರಿತು ಉಪನ್ಯಾಸ ನೀಡಿದರು. ಪುರಸಭೆ ನೂತನ ಅಧ್ಯಕ್ಷ ವಿಜಯ ಬೋಳಣ್ಣವರ, ಮಹಿಳಾ ರತ್ನ ಪ್ರಶಸ್ತಿ ಪುರಸ್ಕ್ರತೆ ಪ್ರೇಮಾ ಅಂಗಡಿ, ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರಿನ ಕಾರ್ಯನಿರ್ವಾಹಕ ಸಮಿತಿ ನಿರ್ದೇಶಕ ಗುರಪ್ಪ ಮೆಟಗುಡ್ಡ ಸೇರಿದಂತೆ ಶೈಕ್ಷಣಿಕ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಸಂಘಟನೆಯ ಖಜಾಂಚಿ ಬಸವರಾಜ ಕನ್ನೂರು ಸ್ವಾಗತಿಸಿದರು. ಬಸವರಾಜ ತುಪ್ಪದ, ವೀರಣ್ಣ ಅಡಕಿ ನಿರೂಪಿಸಿದರು. ಶಿಕ್ಷಕ ಮಹಾಂತೇಶ ಉಪ್ಪಿನ ವಂದಿಸಿದರು. ಇದಕ್ಕೂ ಮುಂಚೆ ಗಣ್ಯರು ಗುರು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

--- ಕೋಟ್

ಲಿಂಗಾಯತ ಧರ್ಮ ವಿಶ್ವಧರ್ಮವಾಗಿದ್ದು, 12ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಪಿಸಿದ ಸಂಸ್ಕಾರ, ಸಂಸ್ಕ್ರತಿ, ವಚನ ಸಾಹಿತ್ಯವನ್ನು ಮಕ್ಕಳಿಗೆ ತಿಳಿ ಹೇಳಿದರೆ ಸಮುದಾಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಸಹಕಾರ, ಸಂಘಟನೆ ಇದ್ದರೆ ಮಾತ್ರ ಧರ್ಮ ಉಳಿಯಲಿದ್ದು, ಪ್ರತಿ ಕಾರ್ಯಗಳು ಉನ್ನತೀಕರಣಕ್ಕೆ ಪೂರಕವಾಗಿರಬೇಕು.

-ಪ್ರಭು ನೀಲಕಂಠ ಸ್ವಾಮೀಜಿ ಶಾಖಾ ಮೂರುಸಾವಿರಮಠ ಬೈಲಹೊಂಗಲ

ಪೋಟೋ ಶೀರ್ಷಿಕೆ-29ಬಿಎಲ್‌ಎಚ್1ಬಿ