ಸಾರಾಂಶ
ನೇಕಾರ ಸಮುದಾಯ ಕ್ರೀಡೆಯಲ್ಲಿ ಉತ್ಸಾಹದ ಶಕ್ತಿ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ನೇಕಾರ ಸಮುದಾಯದ ಯುವಕರ ಕ್ರೀಡಾತಂಡ ಕಲೆಹಾಕಿ ತಂದಿರುವುದು ಕಿಕ್ಕೇರಿ ನೇಕಾರ ಬಳಗದ ಸಾಧನೆಯಾಗಿದೆ. ನೇಕಾರ ಯುವಕರು ಕ್ರೀಡೆ ಜೊತೆಗೆ ಕಡ್ಡಾಯವಾಗಿ ಶಿಕ್ಷಣವನ್ನು ಭವಿಷ್ಯದ ಅಸ್ತ್ರವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶಿಸಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕ್ರೀಡಾಕೂಟಗಳು ಹೆಚ್ಚು ಹೆಚ್ಚು ಆಯೋಜನೆಯಿಂದ ಯುವಕರಲ್ಲಿ ಸಂಘಟನಾ ಶಕ್ತಿ ಹೆಚ್ಚಲಿದೆ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ರಾಯಲ್‌ಶೆಟ್ಟಿ ನೇಕಾರ ಕ್ರಿಕೆಟರ್ ಬಳಗ ಆಯೋಜಿಸಿದ್ದ 3 ದಿನಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿ, ಯುವಕರು ಕ್ರೀಡೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುವುದರಿಂದ ಸಂಘಟನಾ ಶಕ್ತಿ ಹೆಚ್ಚುವ ಜೊತೆಗೆ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲು ನೆರವಾಗಲಿದೆ ಎಂದರು.
ಯುವಕರು ಸಂಘಟನೆ ಶಕ್ತಿಯನ್ನು ರಕ್ತಗತವಾಗಿ ರೂಪಿಸಿಕೊಂಡಲ್ಲಿ ನೇಕಾರ ಸಮುದಾಯದ ಶಕ್ತಿ ಬಲಿಷ್ಟವಾಗಲಿದೆ. ನೇಕಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಪಟ್ಟಣದಲ್ಲಿ ನೇಕಾರ ಸಮಾಜ ಜನಸಂಖ್ಯೆ ಬಲುದೊಡ್ಡದಿತ್ತು. ಜೀವನ ಕಷ್ಟವಾಗಿ ಬದುಕು ಕಟ್ಟಿಕೊಳ್ಳಲು ಬಹುತೇಕ ಉದ್ಯೋಗ ಹರಿಸಿ ನಗರ ಪ್ರದೇಶಕ್ಕೆ ಹೋಗಿದ್ದಾರೆ ಎಂದರು.ನೇಕಾರ ಸಮುದಾಯ ಕ್ರೀಡೆಯಲ್ಲಿ ಉತ್ಸಾಹದ ಶಕ್ತಿ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ನೇಕಾರ ಸಮುದಾಯದ ಯುವಕರ ಕ್ರೀಡಾತಂಡ ಕಲೆಹಾಕಿ ತಂದಿರುವುದು ಕಿಕ್ಕೇರಿ ನೇಕಾರ ಬಳಗದ ಸಾಧನೆಯಾಗಿದೆ. ನೇಕಾರ ಯುವಕರು ಕ್ರೀಡೆ ಜೊತೆಗೆ ಕಡ್ಡಾಯವಾಗಿ ಶಿಕ್ಷಣವನ್ನು ಭವಿಷ್ಯದ ಅಸ್ತ್ರವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಇದೆ. ಹೊರ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಕಿರುಪರಿಚಯ ಮಾಡಿಕೊಳ್ಳಬೇಕು ಎಂದರು.
ಬೆಂಗಳೂರು, ಮೈಸೂರು, ಹಾಸನ, ಗದಗ್, ದಾವಣಗೆರೆ, ಹೊಸಪೇಟೆ, ವಿಜಯನಗರ, ಕೋಲಾರ, ಮೇಲುಕೋಟೆ, ಹೊಸಹೊಳಲು ಸರಿದಂತೆ ವಿವಿಧೆಡೆಯಿಂದ ಸುಮಾರು 22ಕ್ಕೂ ಹೆಚ್ಚು ಕ್ರೀಡಾತಂಡಗಳು ಆಗಮಿಸಿದ್ದವು. ನೇಕಾರ ಸಮಾಜದ ಕ್ರೀಡಾಪಟುಗಳು ಪರಸ್ಪರ ಪರಿಚಯ ಮಾಡಿಕೊಂಡು ಖುಷಿಪಟ್ಟರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲರನ್ನು ಕಲೆಹಾಕುವ ಕೆಲಸ ಮಾಡುತ್ತಿರುವ ಪ್ರಯೋಜಕರ ಶ್ರಮಕ್ಕೆ ಪ್ರಶಂಸಿದರು.ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ವಿ.ಅರುಣಕುಮಾರ್, ಕೆ.ಆರ್. ರಾಜೇಶ್, ಕೆ.ಪಿ.ಮಂಜುನಾಥ್, ಮುಖಂಡರಾದ ಕಿರಣ್‌ಕುಮಾರ್, ಗಿರೀಶ್, ಗೋವಿಂದ ಮತ್ತಿತರರಿದ್ದರು.