ತರೀಕೆರೆ: ನಮ್ಮ ಸಂವಿಧಾನ 12 ಭಾಗಗಳು, 25 ಪರಿಚ್ಛೇದಗಳು ಮತ್ತು 448 ವಿಧಿಗಳನ್ನು ಹೊಂದುವ ಮೂಲಕ ಎದುರಾಗುವ ಎಲ್ಲ ಆಡಳಿತಾತ್ಮಕ ಸಮಸ್ಯೆಗಳಿಗೆ ದಾರಿದೀಪವಾಗಿದೆ ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ. ಹೇಳಿದರು.
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ
ತರೀಕೆರೆ: ನಮ್ಮ ಸಂವಿಧಾನ 12 ಭಾಗಗಳು, 25 ಪರಿಚ್ಛೇದಗಳು ಮತ್ತು 448 ವಿಧಿಗಳನ್ನು ಹೊಂದುವ ಮೂಲಕ ಎದುರಾಗುವ ಎಲ್ಲ ಆಡಳಿತಾತ್ಮಕ ಸಮಸ್ಯೆಗಳಿಗೆ ದಾರಿದೀಪವಾಗಿದೆ ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ. ಹೇಳಿದರು.ನೇರಲಕೆರೆಯ ಶ್ರೀ ಅಮೃತೇಶ್ವರ ಪ್ರೌಢಶಾಲಾ ಆವರಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.ಸ್ವಾತಂತ್ರ್ಯಾ ನಂತರ ದೇಶದ ಆಡಳಿತಕ್ಕೆ ದಿಗ್ದರ್ಶನ ಮಾಡಲು ಅವಶ್ಯಕವಾಗಿ ಬೇಕಾಗಿದ್ದ ಸಂವಿಧಾನವನ್ನು ಹೇಗೆ ರಚಿಸಲಾಯಿತು ಎಂಬ ಬಗ್ಗೆ ತಿಳಿಸಿ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸಂವಿಧಾನ ಯಶಸ್ವಿಯಾಗಿ ರಚಿಸಿದರ ಬಗ್ಗೆ ತಿಳಿಸಿದರು.ಈ ಸಂವಿಧಾನದಿಂದಲೇ ನಮ್ಮ ದೇಶದ ಆಡಳಿತ ವ್ಯವಸ್ಥೆ ಇನ್ನೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. 1949 ನ.26 ರಂದು ನಮ್ಮ ಸಂವಿಧಾನ ಅಂಗೀಕರಿಸಿದರ ಸವಿನೆನಪಿಗೆ ಈ ಸಂವಿಧಾನ ದಿನಾಚರಣೆ ಆಚರಿಸುತ್ತಿದ್ದು, ಅಂದು ಅಂಗೀಕರಿಸಿದ ಸಂವಿಧಾನ ಜ.1950 ಜನವರಿ 26 ರಂದೇ ಏಕೆ ಜಾರಿಗೆ ತರಲಾಯಿತು ಎಂಬ ಬಗ್ಗೆ ಮೊಟ್ಟಮೊದಲಿಗೆ ಭಾರತದಲ್ಲಿ ತ್ರಿವರ್ಣ ಧ್ವಜ ಹಾರಿಸಿದುದನ್ನು ಸ್ಮರಿಸಿದರು.ನಮ್ಮ ಸಂವಿಧಾನ ಪೂರ್ವ ಪೀಠಿಕೆ ಹೊಂದಿರುವ ಸಾರ್ವಭೌಮ, ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯಾತೀತ ಮತ್ತು ಗಣರಾಜ್ಯ ಕಲ್ಪನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಅಂದು ರಚಿಸಿ, ಜಾರಿಗೆ ತಂದ ನಮ್ಮ ದೇಶದ ಸಂವಿಧಾನ ಹೇಗೆ ರಾಷ್ಟ್ರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಸಹಾಯಕ ವಾಗಿದೆ. ನಿಶ್ಚಿತ ಗುರಿಯೆಡೆಗೆ ಸಾಗುತ್ತಿರುವುದೇ ಈ ಸಂವಿಧಾನದ ಸಹಾಯದಿಂದ ಎಂಬುದರ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಮತ್ತು ಚಿತ್ರಕಲಾ ಸ್ಪರ್ಧೆ ನಡೆಸುವ ಮೂಲಕ ವಿಜೇತ ಮಕ್ಕಳಿಗೆ ಪುರಸ್ಕರಿಸಲಾಯಿತು. ಶಾಲೆಯ ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸವಿತಮ್ಮ ಬಿ, ಸತೀಶ್ ನಂದಿಹಳ್ಳಿ, ಮಂಜುಳ ಮಲ್ಲಿಗವಾಡ, ಪ್ರಭಾಕರ್ ಎ. ಎಚ್ ಮತ್ತು ದೈಹಿಕ ಶಿಕ್ಷಕ ಪಂಚಾಕ್ಷರಪ್ಪ ಭಾಗವಹಿಸಿದ್ದರು.-27ಕೆಟಿಆರ್.ಕೆ.2ಃ
ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಡಶಾಲೆಯಲ್ಲಿ ಸಂವಿಧಾನ ದಿನಾಚರಣೆ ಏರ್ಪಡಿಸಲಾಗಿತ್ತು.