ನಮ್ಮ ಸಂಸ್ಕೃತಿ ನಮಗೆ ಹೆಮ್ಮೆ: ಮಹೇಶ ಟೆಂಗಿನಕಾಯಿ

| Published : Jul 19 2025, 02:00 AM IST

ಸಾರಾಂಶ

ಮಹಿಳಾ ಮಂಡಳದ ಎಲ್ಲರೂ ಅದ್ಭುತವಾಗಿ ಅಭಿನಯ ಮಾಡುತ್ತಾ ಹಾಡಿದಿರಿ ಎಂದು ಮೆಚ್ಚುಗೆ

ಹುಬ್ಬಳ್ಳಿ: ಜಾನಪದ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿನ ಉಣಕಲ್‌ ಸಾಯಿನಗರದ ಸಭಾಭವನದಲ್ಲಿ ನಡೆದ ಮೂಲ ಜನಪದ ಹಾಡುಗಾರಿಕೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಾನಗರ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಮಹಿಳಾ ಮಂಡಳದ ಎಲ್ಲರೂ ಅದ್ಭುತವಾಗಿ ಅಭಿನಯ ಮಾಡುತ್ತಾ ಹಾಡಿದಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಯಾಗಿ ಶಿವಣ್ಣ ಕೋರಿ, ಅಶೋಕ ಇರಗಾರ, ಈಶ್ವರಗೌಡ ಬಮ್ಮನಗೌಡರ, ಡಾ. ಲಿಂಗರಾಜ ಮುಳ್ಳಳ್ಳಿ, ಗುರುಸಿದ್ದಪ್ಪ ಬಡಿಗೇರ, ಫಕ್ಕಿರಪ್ಪ ಕುಂಬಾರ, ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನದಾಫ ಎಚ್.ಎಚ್., ಶಾಂತಾ ಬ್ಯಾಹಟ್ಟಿ ಸೇರಿದಂತೆ ಹಲವರಿದ್ದರು.

ಇದೇ ಸಂದರ್ಭದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಹೇಮರಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ನಾಗಲಾಂಬಿಕೆ ತಂಡದವರಿಂದ ವಿವಿಧ ಮೂಲ ಜನಪದ ಹಾಡುಗಳನ್ನು ಹಾಡುವುದರೊಂದಿಗೆ ನೃತ್ಯ ಪ್ರದರ್ಶನ ನೀಡಿದರು.

ಪ್ರೀತಿ ಕಡಕೋಳ ನಿರೂಪಿಸಿದರು. ಡಾ. ರಾಮು ಮೂಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಮಳ್ಳಳ್ಳಿ ಸ್ವಾಗತಿಸಿದರು. ಗೀತಾ ಅಂಗಡಿ ವಂದಿಸಿದರು.