ಸಾರಾಂಶ
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಡೂರು ತಾಲೂಕಿನ ಸಖರಾಯಪಟ್ಟಣದ ನಿಡಘಟ್ಟ ಗ್ರಾಮಕ್ಕೆ ಭೇಟಿ.
ಕನ್ನಡಪ್ರಭ ವಾರ್ತೆ , ಕಡೂರುಭಾವನೆಗಳು ಬಡವರ ಹೊಟ್ಟೆ ತುಂಬಿಸುವುದಿಲ್ಲ ಎಲ್ಲ ಧರ್ಮದಲ್ಲೂ ಬಡವರಿದ್ದಾರೆ. ಬಡವರು ಶೋಷಿತ ವರ್ಗದವರ ಚಿಂತನೆ ನಡೆಸುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಳ್ಳು ಹೇಳದೆ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್ .ಡಿ.ತಮ್ಮಯ್ಯ ಹೇಳಿದರು.
ಶುಕ್ರವಾರ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಡೂರು ತಾಲೂಕಿನ ಸಖರಾಯಪಟ್ಟಣದ ನಿಡಘಟ್ಟ ಗ್ರಾಮದಲ್ಲಿ ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡಿದರು. ಸರಳ ವ್ಯಕ್ತಿತ್ವದ ಜಯಪ್ರಕಾಶ್ ಹೆಗಡೆಯವರು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಸಚಿವರಾದ ಜಾರ್ಜ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆದು ಪಕ್ಷ ಸಂಘಟನೆ ಮತ್ತು ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಪ್ರಚಾರ ಆರಂಭಿಸಿದ್ದು, ಏ 8ರ ಬಳಿಕ ಮನೆ ಮನೆಗೆ ತೆರಳಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಕುರಿತು ವಿವರಿಸಿ ಮತ ಕೇಳುತ್ತೇವೆ ಎಂದರು. ಗ್ಯಾರಂಟಿಗಳ ಬಗ್ಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿ ನಮ್ಮ ಅಭ್ಯರ್ಥಿಗೆ ಮತ ಕೊಡಲು ಸಿದ್ಧರಿದ್ದಾರೆ. ಬಡವರ ಅಭಿವೃದ್ಧಿ ಜೊತೆ ಕ್ಷೇತ್ರದ ಅಭಿವೃದ್ದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಚುನಾವಣೆ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಅದರಲ್ಲಿ 4 ಕೋಟಿ ರು. ಚಿಕ್ಕಮಗಳೂರು ಕ್ಷೇತ್ರದ ಮುಜರಾಯಿ ದೇವಾಲಯಗಳಿಗೆ, 3 ಕೋಟಿ ಹಿಂದುಳಿದ ವರ್ಗಗಳಿಗೆ, 3 ಕೋಟಿ ಚೆಕ್ ಡ್ಯಾಂ ನಿರ್ಮಾಣ ಮತ್ತಿತರ ಅಭಿವೃದ್ಧಿಗೆ ನೀಡಿದ್ದು, 15 ಕೋಟಿ ಅನುದಾನವನ್ನು ಗ್ರಾಮೀಣ ಅಭಿವೃದ್ಧಿಗೆ ನೀಡಲಾಗಿದೆ. ಈ ಎಲ್ಲ ಕೆಲಸಗಳಿಗೆ ಚುನಾವಣೆ ಬಳಿಕ ಚಾಲನೆ ನೀಡಲಾಗುವುದು ಎಂದರು.ವ್ಯಕ್ತಿ ಹೆಸರು ಹೇಳಿ ಅಥವಾ ಭಾವನೆಗಳ ಮೂಲಕ ನಾವು ಜನರಲ್ಲಿ ಮತ ಕೇಳಲ್ಲ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಬಡವರ ಬದುಕಿಗೆ ನಮ್ಮ ಸರ್ಕಾರ ಎಂಬ ಧ್ಯೇಯದೊಂದಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಆಧಾರದ ಮೇಲೆ ಜನರಲ್ಲಿ ಮತ ಕೇಳುತ್ತೇವೆ ಯಾವುದೇ ಅಂಜಿಕೆಯಲ್ಲ ಎಂದರು.ಮುಖ್ಯಮಂತ್ರಿಗಳು ಕಳೆದ ಸರ್ಕಾರದ ಅವಧಿಯಲ್ಲಿ ಕೇವಲ ಮಂಜೂರಾಗಿದ್ದ ಯೋಜನೆಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು 29 ಕೋಟಿ ರು ಅನುದಾನ ಸಖರಾಯಪಟ್ಟಣ ಬ್ಲಾಕಿಗೆ ಮಂಜೂರು ಮಾಡಿಸಿ ಈಗಾಗಲೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಖರಾಯಪಟ್ಟಣ- ಬಾಣಾವರ ರಸ್ತೆ, ದೇವನೂರು- ಗುಬ್ಬಿ ಹಳ್ಳಿ- ದೇವನೂರಿ ನವರೆಗೆ, ಬೀರನಹಳ್ಳಿ- ಮೇಲನಹಳ್ಳಿ- ಜೋಡಿಹೋಚೀಹಳ್ಳಿ ಗೇಟಿನವರೆಗೆ 9 ಕೋಟಿ ರು. ಸೇರಿ ಒಟ್ಟು 29 ಕೋಟಿ ರು. ಅನುದಾನ ಕೊಟ್ಟಿದ್ದು ಕೆಲಸ ಪ್ರಾರಂಭವಾಗಿದೆ. ಎಸ್ ಎಚ್ ಐ ಡಿ ಪಿ ಯಲ್ಲಿ 20 ಕೋಟಿ ಮಂಜೂರು ಮಾಡಿದ್ದು, ಚುನಾವಣೆ ನೀತಿ ಸಂಹಿತೆ ಕಾರಣ ಟೆಂಡರ್ ಮುಂದಕ್ಕೆ ಹೋಗಿದೆ. ಅಲ್ಲದೆ 999 ಲಕ್ಷ ರು.ಗಳಲ್ಲಿ ಅಯ್ಯನಕೆರೆಯಿಂದ ವ್ಯರ್ಥವಾಗಿ ಪೋಲಾಗುತ್ತಿದ್ದ ನೀರನ್ನು ಬೆರಟೀಕೆರೆಗೆ ಹರಿಸಲು ಕ್ರಮ ವಹಿಸಲಾಗಿದೆ ಎಂದರು.ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು10 ವರ್ಷವಾದರೂ ಉದ್ಯೋಗ ಸೃಷ್ಟಿಯಾಗಲಿಲ್ಲ ಬಿಜೆಪಿ ಗೆ ಪರೋಕ್ಷವಾಗಿ ಟೀಕಿಸಿದರು. ಚಿಕ್ಕಮಗಳೂರು ನಗರದಲ್ಲಿ ತಾವು ಶಾಸಕರಾಗಿ ಒಂದು ವರ್ಷ ಪೂರ್ಣವಾಗುವ ಹಿನ್ನೆಲೆಯಲ್ಲಿ ಜೂನ್ 5ರ ನಂತರ ಪತ್ರಿಕಾಗೋಷ್ಠಿ ಕರೆದು ಎಲ್ಲದಕ್ಕೂ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ಮೈತ್ರಿ ಕುರಿತ ಪ್ರಶ್ನೆಗೆ ಶಾಸಕರು ಜೆಡಿಎಸ್ ಮತದಾರರು ಹೊರಗಡೆ ಇದ್ದಾರೆ ಅವರು. ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಹಿಂದಿನ ಸಂಸದೆ ಶೋಭಾ ಯಾವ ರೈತನ ಮನೆಗೂ ಹೋಗಿಲ್ಲ. ಸಚಿವರಾದರೂ ಬಡವರನ್ನು ಭೇಟಿಯಾಗಲಿಲ್ಲ. ರೈಲು ಬಿಟ್ಟಿದ್ದು ಸಾಧನೆ ಎಂದು ವ್ಯಂಗ್ಯವಾಡಿದರು. ಅವರ ಸಾಧನೆಗೆ ಅವರ ಬಿಜೆಪಿ ಪಕ್ಷವೇ ಗೋ ಬ್ಯಾಕ್ ಶೋಭಾ ಎಂಬ ನಿಲುವು ತೆಗೆದುಕೊಂಡು ಓಡಿಸಿತು ಎಂದರು--- ಬಾಕ್ಸ್ ಸುದ್ದಿಗೆ-----
ಸಿ.ಟಿ ರವಿ ಗ್ಯಾರಂಟಿಗಳ ಬಗ್ಗೆ ಪಿಕ್ ಪಾಕೆಟ್ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ತಮ್ಮಯ್ಯ ಸದ್ಯಕ್ಕೆ ಸಿ.ಟಿ ರವಿ ಪ್ರಶ್ನೆಗಳಿಗೆ ಉತ್ತರಿಸಲ್ಲ. ಅವರ ಆರೋಪಗಳೆಲ್ಲ ಸುಳ್ಳು ಎಂಬುದಕ್ಕೆ ಅವರ ಪಕ್ಷವೇ ಅವರಿಗೆ ಯಾವ ರೀತಿ ಗೌರವ ಕೊಡಬೇಕು ಹಾಗೆ ಕೊಟ್ಟಿದೆ. ಹಾಗಾಗಿ ನಾನು ಅವರ ಯಾವುದೇ ಪ್ರಶ್ನೆಗೆ ಉತ್ತರಿಸಲ್ಲ.ಸಿ.ಟಿ ರವಿಯವರ ಭಾವನ ಹೆಸರಿನಲ್ಲಿ ಗುತ್ತಿಗೆದಾರಿಕೆ ನಡೆಯುತ್ತಿದ್ದು ನಾವು ದ್ವೇಷದ ರಾಜಕಾರಣ ಮಾಡದೆ ಕೆಲಸ ಮಾಡಲು ಬಿಟ್ಟಿದ್ದೇವೆ. ಉಳಿದ ಗುತ್ತಿಗೆದಾರರು ಎಲ್ಲಿದ್ದಾರೆ ಎಂದು ಅವರಿಗೆ ಕೇಳಬೇಕು. ಇದಕ್ಕಿಂತ ಯಾವ ರೀತಿ ಉದಾಹರಣೆ ನೀಡಬೇಕು. ಬೇಕಿದ್ದರೆ ನಮ್ಮ ಅವಧಿಯ ರಸ್ತೆ ಪರಿಶೀಲನೆ ಮಾಡಲಿ. 1947ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದಿನ ಸರ್ಕಾರದ ಬಜೆಟ್ 197 ಕೋಟಿ ಮಾತ್ರ. ಕಾಂಗ್ರೆಸ್ ಆಡಳಿತಕ್ಕೆ ಬಂದಾಗ 65 ವರ್ಷದಲ್ಲಿ ಅಂದಿನಿಂದ ಆಡಳಿತ ನಡೆಸಿದ ಸರ್ಕಾರದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಜಿಲ್ಲಾ ಆಸ್ಪತ್ರೆ ಐಡಿಎಸ್ ಜಿ ಕಾಲೇಜು ಇಂಜಿನಿಯರಿಂಗ್ ಕಾಲೇಜ್, ಯಗಚಿ, ಭದ್ರಾ ಉಪ ಕಣಿವೆ, ಲಕ್ಕವಳ್ಳಿ ಡ್ಯಾಮ್ ಮಾಡಿವೆ. ಬಿಜೆಪಿ ಈ ರೀತಿ ನೆನಪಿನಲ್ಲಿ ಉಳಿಯುವ ಕೆಲಸಗಳಲ್ಲಿ ಒಂದನ್ನು ತಿಳಿಸಲಿ ಎಂದು ಸವಾಲ್ ಹಾಕಿದರು. ಕಾಂಗ್ರೆಸ್ ಮುಖಂಡರಾದ ಹರೀಶ್, ಮಹಡಿ ಮನೆ ಸತೀಶ್, ಹೇಮಾವತಿ, ಎನ್. ಪಿ ಉಮೇಶ್, ಅಶೋಕ್ , ಸ್ವಾಮಿ ಕುಮಾರ, ರಾಜಣ್ಣ, ಸುರೇಶ್, ಸತೀಶ್, ನಟರಾಜ್ ಮತ್ತಿತರರು ಇದ್ದರು.5ಕೆಕೆಡಿಯು1.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))