ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಯುನಿವರ್ಸಲ್ ಬೇಸಿಕ್ ಇನ್‌ಕಮ್ ತತ್ವದಡಿ ರೂಪುಗೊಂಡಿದ್ದು, ಇವುಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಮತ್ತು ಜೀವನಮಟ್ಟ ಸುಧಾರಿಸಿದೆ.
ಕನ್ನಡಪ್ರಭ ವಾರ್ತೆ ಕೋಲಾರವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಸಂವಿಧಾನವು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಭದ್ರ ಬುನಾದಿಯ ಮೇಲೆ ನಿಂತಿದೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಮೂಲಕ ಹಸಿವು ಮುಕ್ತ ಹಾಗೂ ಮೌಢ್ಯಮುಕ್ತ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಪಣತೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.ನಗರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.ಗ್ಯಾರಂಟಿ ಯೋಜನೆಗಳ ಯಶಸ್ಸು:ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಯುನಿವರ್ಸಲ್ ಬೇಸಿಕ್ ಇನ್‌ಕಮ್ ತತ್ವದಡಿ ರೂಪುಗೊಂಡಿದ್ದು, ಇವುಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಮತ್ತು ಜೀವನಮಟ್ಟ ಸುಧಾರಿಸಿದೆ. ಗ್ಯಾರಂಟಿ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಕಿಂಗ್ಸ್ ಕಾಲೇಜ್ ಲಂಡನ್‌ನಂತಹ ಜಾಗತಿಕ ಸಂಸ್ಥೆಗಳು ಅಧ್ಯಯನ ನಡೆಸುತ್ತಿವೆ. ಇದರೊಂದಿಗೆ ಇ-ಖಾತಾ ಮತ್ತು ಭೂ ಗ್ಯಾರಂಟಿಯಂತಹ ಹೊಸ ಉಪಕ್ರಮಗಳ ಮೂಲಕ ಆಸ್ತಿ ಸುರಕ್ಷತೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ರೈತರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಕೋಲಾರದ ರೈತರು ಮರುಭೂಮಿಯಂತಹ ನೆಲದಲ್ಲಿ ಚಿನ್ನದ ಬೆಳೆ ಬೆಳೆಯುವ ಕಷ್ಟ ಸಹಿಷ್ಣುಗಳು. ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ ಇಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಅತ್ಯಂತ ವಿರಳವಾಗಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, 3500 ಕೋಟಿ ರು. ವೆಚ್ಚದ ಇಂಡಸ್ಟ್ರಿಯಲ್ ಕಾರಿಡಾರ್ ಮತ್ತು ರಸ್ತೆ ನಿರ್ಮಾಣಕ್ಕೆ ನಾಂದಿ ಹಾಡಲಾಗಿದೆ. 94 ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಅಂತರಗಂಗೆಯಿಂದ ಕೋಲಾರಮ್ಮನ ಕೆರೆಯವರೆಗಿನ ರಾಜಕಾಲುವೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಮಾವು ಬೆಳೆಗಾರರಿಗೆ ಸಂಕಷ್ಟ ಬಂದಾಗ 41 ಕೋಟಿ ಪರಿಹಾರ ಬಿಡುಗಡೆ ಮಾಡಿರುವುದು ಸರ್ಕಾರದ ಬದ್ಧತೆಗೆ ಸಾಕ್ಷಿ ಎಂದು ತಿಳಿಸಿದರು.ನಂತರ ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಕೆಳಗಿನ ಸಾಧಕರನ್ನು ಸನ್ಮಾನಿಸಿದರು.
ನಗರ ಸ್ವಚ್ಛತೆ ಪೌರಕಾರ್ಮಿಕರು:ವಿ. ಕುಮಾರ್ (ಸ್ಯಾನಿಟರಿ ಸೂಪರ್‌ವೈಸರ್, ಕೋಲಾರ). ಕೆ.ವಿ. ರಾಜಣ್ಣ (ಕೋಲಾರ). ಶ್ರೀನಿವಾಸ್ (ಕೆ.ಜಿ.ಎಫ್)ವಿ.ಶ್ರೀನಿವಾಸ್ (ಮುಳಬಾಗಿಲು). ಎಂ.ರಾಜು (ಮಾಲೂರು).ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿ.ಮುನಿಕೃಷ್ಣ. ಭೂಮಿಕಾ.ಬಿ (ಮಾಲೂರು).ಸಾಗರ್ ಎಸ್.ಎಸ್.ಆರೋಗ್ಯ ಇಲಾಖೆಯ ಎಂ.ಕೆ.ಸುರೇಶ್ (ಫಾರ್ಮಸಿ ಅಧಿಕಾರಿ). ನಾರಾಯಣಸ್ವಾಮಿ (ಮುಳಬಾಗಿಲು). ನಾಗನಾಳದ ಶಿಲ್ಪಾ ಅವರ ಕುಟುಂಬ.ಕೆ.ಎಸ್.ಆರ್.ಟಿ.ಸಿ ಕೋಲಾರ ವಿಭಾಗದ ಎನ್.ರವಿಕುಮಾರ್ (ಕೋಲಾರ). ಸಿ.ಗೋಪಾಲ ಕೃಷ್ಣ ರೆಡ್ಡಿ (ಕೋಲಾರ), ಕೆ.ನಾಗರಾಜು (ಕೆ.ಜಿ.ಎಫ್), ನರೇಂದ್ರ ಕುಮಾರ್ ಡಿ. (ಕೆ.ಜಿ.ಎಫ್). ಡಿ.ವೆಂಕಟರಾಮ (ಶ್ರೀನಿವಾಸಪುರ). ಶ್ರೀ ಎಸ್.ಡಿ. ನಾರಾಯಣಸ್ವಾಮಿ (ಮಾಲೂರು). ದಶರಥ (ಮುಳಬಾಗಿಲು).ಎನ್.ಸಿ.ಸಿ ವಿಭಾಗದ ಸುಬೇದಾರ್ ಜಗದಾಲೆ ಕೆ.ಬಿ., ಹವಿಲ್ದಾರ್ ಮೊಬಿನ್ ಎಂರಾಜನ್. ವಿಶ್ವನಾಥ್.ಕೆ. ಮೊಹಮ್ಮದ್ ಹಿದಾಯತ್ ಉಲ್ಲಾ. ಹರ್ಷಿತ್ ಗಾಂಧಿ ವಿ.ಎಸ್. ಆನಂದ್ ರಾಜ್ ಕುಮಾರ್. ಎ.ಎ.ಒಗಳಾದ ಮಾರಿಯಾ ಸಿಂಥಿಯಾ ಎಸ್. ಕುಮಾರ ಎಂ., ಮತ್ತು ಕೆಡೆಟ್‌ಗಳಾದ ಅವಿನಾಶ್ ಎಸ್. ಮತ್ತು ಹರಣಿ.ಆರ್ ಸಾಧಕರನ್ನು ಸನ್ಮಾನಿಸಿದರು.ಸಮಾರಂಭದಲ್ಲಿ ಶಾಸಕ ಡಾ.ಕೊತ್ತೂರು ಮಂಜುನಾಥ್, ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದ ರಾಜು, ಕುಡಾ ಅಧ್ಯಕ್ಷ ಮಹಮದ್ ಹನೀಫ್, ಜಿಲ್ಲಾ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್.ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ನೂತನ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ತಹಸೀಲ್ದಾರ್ ಡಾ.ನಯನ ಇದ್ದರು.