ನಮ್ಮ ಭಾರತೀಯ ಸಂಸ್ಕೃತಿಯೇ ಶ್ರೇಷ್ಠ

| Published : Jan 08 2024, 01:45 AM IST

ಸಾರಾಂಶ

ನಮ್ಮ ಭಾರತೀಯ ಸಂಸ್ಕೃತಿಯೇ ಶ್ರೇಷ್ಠ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಭಾರತದ ಸಂಸ್ಕೃತಿ ಜಗತ್ತಿನ ಎಲ್ಲ ಸಂಸ್ಕೃತಿಗಳಿಗಿಂತ ವಿಭಿನ್ನವಾಗಿದೆ. ಹೀಗಾಗಿ ನಮ್ಮದು ಶ್ರೇಷ್ಠ ಸಂಸ್ಕೃತಿ ಎಂದು ಕಸಾಪ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಹೇಳಿದರು.

ಸ್ಥಳೀಯ ಬಸ್ ನಿಲ್ದಾಣದ ಹತ್ತಿರವಿರುವ ಮಾಧವಾನಂದ ಆಶ್ರಮದಲ್ಲಿ ನಡೆದ ಜ್ಞಾನ ಯೋಗಿ, ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿಗಳ ಪ್ರಥಮ ಪುಣ್ಯರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಸ್ವಾಮಿ ವಿವೇಕಾನಂದರನ್ನು ಕಂಡಿಲ್ಲ. ಸಿದ್ದಾರೂಢರನ್ನು ಕಂಡಿಲ್ಲ. ಆದರೆ, ಆ ಇಬ್ಬರನ್ನು ಒಬ್ಬರಲ್ಲೇ ಕಂಡಿದ್ದೇವೆ. ಅವರೇ ಜ್ಞಾನ ಯೋಗಿ ನಡೆದಾಡುವ ವಿಶ್ವ ವಿಧ್ಯಾಲಯ ವಿಜಯಪುರದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಅಧ್ಯಾತ್ಮ ಲೋಕದ ಸೂರ್ಯ ತೇಜ, ಮುಳುಗದ ಸೂರ್ಯ, ಪ್ರಖರ ವಾಗ್ಮಿಗಳು ಅವರು ಪ್ರವಚನಗಳಿಂದ ಜನರಲ್ಲಿ ಪರಿವರ್ತನೆ ಮಾಡಿದ ಮಹಾನ ಸಂತ. ಅವರ ಪ್ರವಚನ ಕೇಳಲು ಲಕ್ಷ ಲಕ್ಷ ಜನ ಸೇರುತ್ತಿದುದ್ದೆ ಸಾಕ್ಷಿಯಾಗಿದೆ. ಇಂತಹ ಮಹಾತ್ಮರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ನುಡಿ ನಮನ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದರು.

ನಂತರ ಮಾತನಾಡಿದ ಮಾರಾಪುರ ಶ್ರೀಮಂತ ಮಹಾರಾಜರು ಸಿದ್ದೇಶ್ವರ ಶ್ರೀಗಳು ಭಾರತ ಅಷ್ಟೇ ಅಲ್ಲ ಅಮೇರಿಕಾ, ಜಪಾನ ದೇಶಗಳಲ್ಲಿ ಪ್ರವಚನ ಮಾಡಿ ಅಲ್ಲಿನ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಇಂತಹ ಸಂತರ ಇರುವುದರಿಂದಲೇ ನಮ್ಮ ದೇಶದ ಸಂಸ್ಕೃತಿ ಉಳಿದಿದೆ. ಇಂದಿನ ಯುವ ಜನತೆ ಮೊಬೈಲ್ ಹಾಗೂ ಇನಿತರ ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದು. ಇಂದಿನ ಯುವ ಜನತೆಗೆ ಇಂತವರ ಮಾರ್ಗದರ್ಶನ ಬಹಳ ಅವಶ್ಯಕತೆ ಇದೆ. ಅವರು ನಮ್ಮನ್ನಗಲಿದ್ದು ಇಡೀ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ ಎಂದರು.

ನಂತರ ಮಾತನಾಡಿದ ಕಂಕನವಾಡಿಯ ಶರಣರಾದ ಮಾರುತಿ ಶರಣರು ಅವರು ಸಿದ್ದೇಶ್ವರ ಸ್ವಾಮಿಗಳು ನುಡಿದಂತೆ ನಡೆದ ಮಹಾನ್‌ ಸಂತ. ನಮ್ಮ ನಾಡಿನ ಹೆಮ್ಮೆಯ ಪುತ್ರ. ಅವರನ್ನು ಕಳೆದುಕೊಂಡು ನಾಡು ಬದ್ಧವಾಗಿದೆ. ಮಹಾಲಿಂಗಪುರದಲ್ಲಿ 2002ರಲ್ಲಿ ಒಂದು ತಿಂಗಳ ಕಾಲ ನಡೆದ ಶ್ರೀಗಳ ಪ್ರವಚನ ಕೇಳಿದ ನಾವು ಪುಣ್ಯವಂತರು. ಇಂತಹ ಮಹಾನ್‌ ವ್ಯಕ್ತಿಗಳು ಶತಮಾನಕ್ಕೆ ಒಬ್ಬರು ಹುಟ್ಟುತ್ತಾರೆ. ಅವರ ಪುಣ್ಯರಾಧನೆ ಮಾಡಿ ನಾವು ಎಲ್ಲರೂ ಅವರು ಕೃಪೆಗೆ ಪಾತ್ರರಾಗೋಣ. ಅವರಂತೆ ನಮ್ಮ ನಾಡಿನ ಸೂಫಿ ಸಂತ ಇಬ್ರಾಹಿಂ ಸುತಾರ ಅವರು ಕೂಡಾ ನಾಡು ಕಂಡ ಶ್ರೇಷ್ಠ ವಾಗ್ಮಿಗಳು. ಅವರಿಗೆ ಕನ್ನಡದ ಕಬೀರ ಎಂದೇ ಖ್ಯಾತರದವರು. ಅಂತಹವರ ಪುಣ್ಯರಾಧನೆ ಮಾಡುವುದು ಪುಣ್ಯದ ಕೆಲಸ ಎಂದರು.

ಈ ಸಂಧರ್ಭದಲ್ಲಿ ಶ್ರೀಶೈಲ ರೊಡ್ಡಣ್ಣವರ, ಸತ್ಯಪ್ಪ ಮಹಾರಾಜರು, ಸಂಗಮೇಶ ಹಿಡಕಲ್, ಮಹಾದೇವ ಕದ್ದಿಮನಿ, ಮಹೇಶ ಇಟಕನ್ನವರ, ಅರ್ಜುನ ಸಣ್ಣಕ್ಕಿ ಮಾತನಾಡಿದರು. ಮುಖಂಡರಾದ, ಚಂದ್ರಪ್ಪ ದೋಣಿ, ಚಂದ್ರಶೇಖರ ಕೊಳಕಿ, ಸಿದ್ದಾರೂಢ ಮುಗಳಖೊಡ, ಹಣಮಂತ ಮೀರಾಪಟ್ಟಿ, ಗುರುಸಿದ್ದ ಅಂಬಿ, ಡಾ. ರಾಚಪ್ಪ ಚಿಮ್ಮಡ, ಪ್ರಕಾಶ ಗೋಕಾವಿ, ಗುರುಪಾದ ಉರಗಿನವರ, ಗಿರೀಶ ಜಾಧವ, ಗುರು ಕದ್ದಿಮನಿ, ಷಣ್ಮುಖ ಕದ್ದಿಮನಿ, ಡಾ.ಗಂಗಾಧರ ಮಗದುಮ್, ಗುರಪ್ಪ ಪಂಕಿ, ಬಾಬು ಜಾಡರ, ನಾಗಪ್ಪ ದೋಣಿ, ಸಿದ್ದರಾಮ ಜಗದಾಳ, ಸುಹಾಸಿನಿ ಕದ್ದಿಮನಿ, ಮೈತ್ರಾದೇವಿ ಕದ್ದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹಾಪ್ರಸಾದ ವ್ಯವಸ್ಥೆಯನ್ನು ಲಕ್ಷ್ಮಣ ಬೀಳಗಿ ಮಾಡಿಸಿದ್ದರು. ಕಾರ್ಯಕ್ರಮವನ್ನು ಎಸ್.ಆರ್.ಹಿಡಕಲ್ ನಿರೂಪಿಸಿ ವಂದಿಸಿದರು.