ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನ

| Published : Nov 23 2024, 12:31 AM IST

ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮವಾಗಿ ರೈತರ, ಮಠ-ಮಂದಿರಗಳ ಆಸ್ತಿ ಕಬಳಿಸುತ್ತಿರುವ ವಕ್ಫ್ ಬೋರ್ಡ್‌ ತಿದ್ದುಪಡಿ ತರದೇ ಬೋರ್ಡ್‌ ರದ್ದುಗೊಳಿಸಬೇಕು. ಒಂದು ಧರ್ಮದವರನ್ನು ಓಲೈಸಲು ಮಾತ್ರ ದೇಶದಲ್ಲಿ ಕಾಂಗ್ರೆಸ್ ವಕ್ಫ್ ಬೋರ್ಡ್‌ ಪ್ರಾರಂಭ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಸ್ತಿ ಕಬಳಿಸುತ್ತಿರುವ ವಕ್ಫ್ ಬೋರ್ಡ್‌ ವಿರುದ್ಧ ಜಿಲ್ಲಾ ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಆಂದೋಲನ ಪ್ರತಿಭಟನೆ ನಡೆಯಿತು. ನವನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಜಿಲ್ಲಾಡಳಿತದ ಎದುರು ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತರಲಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆ ರಾಜ್ಯದ ರೈತರ, ಮಠಮಾನ್ಯ, ದೇವಸ್ಥಾನ, ಸಾರ್ವಜನಿಕ ಆಸ್ತಿಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದು ಮಾಡುತ್ತಿದ್ದಾರೆ. ಬಿಲ್ ಪಾಸ್ ಆದರೆ, ವಕ್ಫ್ ಮಂಡಳಿಗೆ ಆಸ್ತಿಗಳು ಸಿಗುವುದಿಲ್ಲ ಎಂಬ ಹುನ್ನಾರದಿಂದ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ವಕ್ಫ್‌ನಿಂದ ನೋಟಿಸ್ ನೀಡುವ ಕೆಲಸವಾಗುತ್ತಿದೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಅಕ್ರಮವಾಗಿ ರೈತರ, ಮಠ-ಮಂದಿರಗಳ ಆಸ್ತಿ ಕಬಳಿಸುತ್ತಿರುವ ವಕ್ಫ್ ಬೋರ್ಡ್‌ ತಿದ್ದುಪಡಿ ತರದೇ ಬೋರ್ಡ್‌ ರದ್ದುಗೊಳಿಸಬೇಕು. ಒಂದು ಧರ್ಮದವರನ್ನು ಓಲೈಸಲು ಮಾತ್ರ ದೇಶದಲ್ಲಿ ಕಾಂಗ್ರೆಸ್ ವಕ್ಫ್ ಬೋರ್ಡ್‌ ಪ್ರಾರಂಭಿಸಿತು. ಇದರಿಂದ ಅವರ ಸಮುದಾಯದವರಿಗೂ ತೊಂದರೆಯಾಗುತ್ತಿದೆ. ಎಲ್ಲಿಯವರೆಗೆ ಕಾಂಗ್ರೆಸ್ ಅಧಿಕಾರದಲ್ಲಿರುತ್ತದ್ದೆಯೋ ಅಲ್ಲಿಯವರೆಗೆ ದೇಶದ್ರೋಹದ ಕೆಲಸಗಳು ನಡೆಯುತ್ತವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಮುಸ್ಲಿಮ ರಾಷ್ಟ್ರದಲ್ಲೇ ವಕ್ಫ್ ಬೋರ್ಡ್‌ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ ತಿದ್ದುಪಡಿ ತರುತ್ತಾರೆ ಎಂದು ತಿಳಿದು ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡುತ್ತಿದೆ ಎಂದರು.

ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ, ಗುಳೇದಗುಡ್ಡದ ಕಾಶಿನಾಥ ಸ್ವಾಮೀಜಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸೇರಿದಂತೆ ಇತರರು ಮಾತನಾಡಿದರು. ಕಮತಗಿಯ ಪ್ರಭು ರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಗುರುಸಿದ್ದೇಶ್ವರ ಶ್ರೀಗಳು, ದಿಗಂಬರೇಶ್ವರ ಸ್ವಾಮೀಜಿ, ವಿರುಪಾಕ್ಷ್ಯ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ, ಕರಬಸಯ್ಯ ಹಿರೇಮಠ, ಅಜಯ ಕಡಪಟ್ಟಿ, ಅರವಿಂದ ಗೌಡರ, ಶ್ರೀಶೈಲ ಬೀಳಗಿ, ಈರಣ್ಣ ಗಿಡ್ಡಪ್ಪಗೋಳ, ನಾಗಪ್ಪ ಅಂಬಿ, ಮುತ್ತಣ್ಣ ಬೆಣ್ಣೂರ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ಸಿ.ಟಿ.ಉಪಾಧ್ಯ, ವಿಜಯಲಕ್ಷ್ಮೀ ತುಂಗಳ, ಶಶಿಕಲಾ ಮಜ್ಜಗಿ, ಪ್ರಭು ಹಡಗಲಿ ಇತರರಿದ್ದರು.