ಸಾರಾಂಶ
ಶಿರಸಿ: ಹಚ್ಚೇವು ದೃಶ್ಯಕಲೆ ದೀಪ ಎನ್ನುವುದೇ ನಮ್ಮ ಮುಂದಿನ ಗುರಿ ಎಂದು ರಾಜ್ಯ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.
ನಗರದ ರಂಗಧಾಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಸುವರ್ಣ ಕೋ ಆಪರೇಟಿವ್ ಸೊಸೈಟಿಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ನಿಮ್ಮೊಂದಿಗೆ ನಾವು ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಕಲಾವಿಮರ್ಶೆ, ಶಾಲಾ ಮಕ್ಕಳ ಚಿತ್ರಕಲಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲಾವಿದರ ಚಿತ್ರಗಳನ್ನು ಸಮಾಜ, ದೇಗುಲ, ಸಂಘ-ಸಂಸ್ಥೆಗಳು ಖರೀದಿಸಿ ಪೋಷಣೆ ನೀಡಬೇಕು. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದೂ ಹೇಳಿದ ಅವರು ಬರಲಿರುವ ಆರ್ಥಿಕ ವರ್ಷದಲ್ಲಿ ಇನ್ನಷ್ಟು ಕಾರ್ಯಕ್ರಮ ನಡೆಸುವುದು ನಮ್ಮ ಗುರಿ ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಮಾತನಾಡಿ, ಯುವ ಸಮುದಾಯದಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಅವಶ್ಯಕತೆಯಿದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಲಲಿತಕಲಾ ಅಕಾಡೆಮಿಯ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರು.
ಹಿರಿಯ ಕಲಾವಿದ ನಿರ್ನಳ್ಳಿ ಗಣಪತಿ ಮಾತನಾಡಿ, ಕಲಾವಿದರ ಜತೆಯಲ್ಲಿ ಕಲಾಭಿರುಚಿ, ಕಲಾಪ್ರಜ್ಞೆ, ಕಲಾಸಕ್ತಿ ಹೊಂದಿದವರು ಹೆಚ್ಚಬೇಕು. ಕಲೆ ಬಗ್ಗೆ ಎಷ್ಟೂ ಪ್ರಸಾರ ಆದರೂ ಕಡಿಮೆ. ಕಲೆ ಇಲ್ಲದಿದ್ದರೆ ಜೀವನವಿಲ್ಲ. ಸಂಸ್ಕೃತಿ ಉಳಿದಿರುವುದು ಕಲೆಯಿಂದ, ಕಲೆಯನ್ನು ಅನುಭವಿಸುವುದರಿಂದ ಶಿಸ್ತು, ಕ್ರಮಬದ್ಧತೆ, ಅಚ್ಚುಕಟ್ಟುತನ ಜತೆ ಕಲಾತಪಸ್ವಿಗಳಲ್ಲಿ ಏಕಾಗ್ರತೆ ಮೂಡುತ್ತದೆ. ಏಕಾಗ್ರತೆ ಸಿದ್ಧಿ ಮಾಡಿಕೊಳ್ಳಲು ಕಲೆಯೂ ಅವಶ್ಯಕ ಎಂದರು.ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಜಿ.ಟಿ. ಭಟ್ಟ ಮಾತನಾಡಿ, ಕಲೆಯು ಕಲಾವಿದರ ಸ್ವತ್ತಲ್ಲ. ಜವಾಬ್ದಾರಿಯೂ ಅಲ್ಲ. ಕಲೆಯ ಸಂರಕ್ಷಣೆ ಮತ್ತು ಬೆಳವಣಿಗೆ ಜವಾಬ್ದಾರಿ ಸಾರ್ವಜನಿಕರದ್ದೂ ಇದೆ. ಕಲಾವಿದರ ಸಂಖ್ಯೆ ಹೆಚ್ಚಳಬೇಕಾದರೆ ಮಕ್ಕಳಲ್ಲಿ ಅಭಿರುಚಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ಸುವರ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ ಶೇಟ್, ಚಿತ್ರ ಕಲಾವಿದರಾದ ಜಿ.ಎಂ. ಹೆಗಡೆ ತಾರಗೋಡ, ಜಿ.ಎಂ. ಬೊಮ್ನಳ್ಳಿ, ಪ್ರಕಾಶ ನಾಯಕ, ಸತೀಶ ಯಲ್ಲಾಪುರ ಮತ್ತಿತರರು ಇದ್ದರು. ಸವಿತಾ ಜನ್ನು ಪ್ರಾರ್ಥಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಸ್ವಾಗತಿಸಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಸಂಚಾಲಕಿ ಶಾಂತಾ ಪ್ರವೀಣ ಕೊಲ್ಲೆ ಪ್ರಾಸ್ತಾವಿಕ ಮಾತನಾಡಿದರು. ಆನಂತರ ಚಿತ್ರಕಲಾವಿದ ನಾಗರಾಜ ಹನೇಹಳ್ಳಿ ಪ್ರಾತ್ಯಕ್ಷಿಕೆ ನಡೆಸಿದರು. ಕಲೆ ಮತ್ತು ಸಂಸ್ಕೃತಿ ಹಾಗೂ ಕಲಾವಿದನ ಬದುಕು ಕುರಿತು ಚಿತ್ರಕಲಾವಿದ ಶ್ರೀಧರ ಶೇಟ್ ವಿಮರ್ಶೆ ಮಾಡಿದರು. ರೇಖಾ ಭಟ್ಟ ನಾಡ್ಗುಳಿ ಗಾಯನ ಪ್ರಸ್ತುತಗೊಳಿಸಿದರು.ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆಗೋಕರ್ಣ: ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ಶಾಲಾ- ಕೊಠಡಿ ನಿರ್ಮಾಣ, ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು ಮಾಡಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಶನಿವಾರ ಸಂಜೆ ಇಲ್ಲಿನ ಆಡುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿಯಲ್ಲಿ ಎರಡನೇ ಆದ್ಯತೆ ಆರೋಗ್ಯ ಕ್ಷೇತ್ರ. ನಂತರ ರಸ್ತೆ ಮತ್ತಿತರ ಕೆಲಸಕ್ಕೆ ಸಾಕಷ್ಟು ಯೋಜನೆ ತಂದು ಕ್ಷೇತ್ರದ ಎಲ್ಲೆಡೆ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಕುಮಾರ ಮಾರ್ಕಾಂಡೆ ಮಾತನಾಡಿ, ಆಡುಕಟ್ಟೆಯ ಶಾಲೆಯ ಅಭಿವೃದ್ಧಿಪಡಿಸಿದ ಬಗ್ಗೆ ವಿವರಿಸಿದರು.ಈ ವೇಳೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ನಾಯ್ಕ, ಗ್ರಾಪಂ ಸದಸ್ಯ ರಮೇಶ ಪ್ರಸಾದ, ಲಯನ್ಸ್ ಕ್ಲಬ್‌ನ ಅನಿಲ ಶೇಟ್, ಶಾಲಾ ಅಭಿವೃದ್ಧಿ ಸಮಿತಿಯ ಸ್ವಾತಿ ಗೋಪಿ, ಶಾಲಾ ಮುಖ್ಯಾಧ್ಯಾಪಕರಾದ ಪಿ.ಎಂ. ಮುಕ್ರಿ ಹಾಗೂ ಶಿಕ್ಷಕ ವೃಂದದವರು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.
ನಂತರ ಎರಡು ತಾಸಿಗೂ ಅಧಿಕ ಕಾಲ ನಡೆದ ವಿದ್ಯಾರ್ಥಿಗಳ ಸಾಂಸಕೃತಿಕ ಕಾರ್ಯಕ್ರಮ ಎಲ್ಲರನ್ನು ಮನರಂಜಿಸಿತು. ಬೆಳಗ್ಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗ್ರಾಪಂ ಉಪಾಧ್ಯಕ್ಷೆ ನಾತಲಾ ದಿನ್ನಿ ರೆಬೆಲೂ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯಾಧಿಕಾರಿ ರೇಖಾ ನಾಯ್ಕ ವಿದ್ಯಾರ್ಥಿಗಳು ರಚಿಸಿದ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು.ತಾಲೂಕು ಅಕ್ಷರ ದಾಸೋಹ ಅಧಿಕಾರಿ ವಿನಾಯಕ ವೈದ್ಯ ಇಸಿಒ ದೀಪಾ ಕಾಮತ್, ಬಿಆರ್‌ಪಿ ವಿಜಯಲಕ್ಷ್ಮಿ ಹೆಗಡೆ , ಬಿಐಇ ಆರ್.ಟಿ. ಕೇಶವ ನಾಯ್ಕ, ಸಿಆರ್‌ಪಿ ಮೋಹಿನಿ ಗೌಡ, ಗ್ರಾಪಂ ಸದಸ್ಯೆ ಸ್ಮೀತಾ ಅಡಿ, ಭಾರತೀ ದೇವತೆ, ವನಿತಾ ಎಂ. ಗೌಡ, ನಾಗರತ್ನ ಹಾವಗೋಡಿ, ಅನೀಲ್ ಶೇಟ್, ಮುಖ್ಯಾಧ್ಯಾಪಕರು ಪಿ.ಎಂ. ಮುಕ್ರಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ನಿರ್ವಹಿಸಿದರು.