ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಪೊಲೀಸ್ ನಮ್ಮ ಹೆಮ್ಮೆ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ಸ್ಟೇಟ್ ಪೊಲೀಸ್ ರನ್- 2025 ಮ್ಯಾರಾಥಾನ್ ನಲ್ಲಿಸಾರ್ವಜನಿಕರು, ಪೊಲೀಸ್ ಇಲಾಖೆ ಮತ್ತು ಇತರೆ ವಿಶೇಷ ಘಟಕಗಳಿಂದ 9 ಸಾವಿರ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು.
ಮೈಸೂರು ಅರಮನೆ ಆವರಣದಲ್ಲಿ 5 ಕಿ.ಮೀ ಮತ್ತು 10 ಕಿ.ಮೀ. ಎರಡು ವಿಭಾಗಗಳಲ್ಲಿ ನಡೆದ ಈ ಮ್ಯಾರಾಥಾನ್ ಗೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್ ಅವರು ಹಸಿರು ನಿಶಾನೆ ತೋರಿದರು.5 ಕಿ.ಮೀ ಮ್ಯಾರಾಥಾನ್ ಅರಮನೆ ಆವರಣದಿಂದ ಆರಂಭವಾಗಿ ಕೆ.ಆರ್. ವೃತ್ತ- ಡಿ. ದೇವರಾಜ ಅರಸು ರಸ್ತೆ- ಜೆಎಲ್ ಬಿ ಜಂಕ್ಷನ್- ಮೂಡಾ ಜಂಕ್ಷನ್- ರಾಮಸ್ವಾಮಿ ವೃತ್ತ- ತಾತಯ್ಯ ವೃತ್ತ- ಗನ್ ಹೌಸ್ ವೃತ್ತ- ಹಾರ್ಡಿಂಜ್ ವೃತ್ತ- ಕೋಟೆ ಅಂಜನೇಯ ದೇವಸ್ಥಾನ- ಬಲರಾಮ ದ್ವಾರ ಬಳಿ ಅಂತ್ಯವಾಯಿತು.
ಹಾಗೆಯೇ, 10 ಕಿ.ಮೀ ಮ್ಯಾರಾಥಾನ್ ಅರಮನೆ ಆವರಣದಿಂದ ಆರಂಭವಾಗಿ ಕೆ.ಆರ್. ವೃತ್ತ- ಡಿ. ದೇವರಾಜ ಅರಸು ರಸ್ತೆ- ಜೆಎಲ್ ಬಿ ಜಂಕ್ಷನ್- ಮೆಟ್ರೋಪೋಲ್ ಜಂಕ್ಷನ್- ಹುಣಸೂರು ರಸ್ತೆ- ಕಲಾಮಂದಿರ ಜಂಕ್ಷನ್- ಪಡುವಾರಳ್ಳಿ ಜಂಕ್ಷನ್- ಬಯಲು ರಂಗ ಮಂದಿರ ರಸ್ತೆ- ಸೆನೆಟ್ ಭವನ ಜಂಕ್ಷನ್- ಕ್ಲಾಕ್ ಟವರ್ ರಸ್ತೆ- ಕುವೆಂಪು ಪ್ರತಿಮೆ ಜಂಕ್ಷನ್- ಬೋಗಾದಿ ರಸ್ತೆ- ವಿಎಂಡಿ ಜಂಕ್ಷನ್- ಪದ್ಮ ಜಂಕ್ಷನ್- ಫೈರ್ ಬ್ರಿಗೇಡ್ ಜಂಕ್ಷನ್- ಏಕಲವ್ಯ ವೃತ್ತ- ರಾಮಸ್ವಾಮಿ ವೃತ್ತ- ತಾತಯ್ಯ ವೃತ್ತ- ಬಸವೇಶ್ವರ ವೃತ್ತ- ಗನ್ ಹೌಸ್ ವೃತ್ತ- ಹಾರ್ಡಿಂಜ್ ವೃತ್ತ- ಕೋಟೆ ಅಂಜನೇಯ ದೇವಸ್ಥಾನ- ಬಲರಾಮ ದ್ವಾರದ ಬಳಿ ಮುಕ್ತಾಯವಾಯಿತು.ಈ ಮ್ಯಾರಾಥಾನ್ ನಲ್ಲಿ ಕೆಎಸ್‌ಐಎಸ್‌ಎ, ಸಿಐಎಸ್‌ಎ, ರೈಲ್ವೆ, ಎನ್ ಸಿಸಿ, ಹೋಂಗಾಡ್ಸ್, ಶ್ರೀ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ಸಿಬ್ಬಂದಿ, ಮೈಸೂರು ವಿವಿ ಬಿಪಿಎಡ್ ವಿದ್ಯಾರ್ಥಿಗಳು, ಯೂತ್ ಸರ್ವೀಸ್, ಪೊಲೀಸ್ ಬ್ಯಾಂಡ್ ತಂಡದವರು ಭಾಗವಹಿಸಿದ್ದರು.
ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಮಾರುತಿ, ಹೆಚ್ಚುವರಿ ಎಸ್ಪಿ ಮಲ್ಲಿಕ್ ಮೊದಲಾದವರು ಇದ್ದರು.----
ಬಾಕ್ಸ್...-- ಬಹುಮಾನ ವಿತರಣೆ--
ವಿಜೇತರಿಗೆ ಮೈಸೂರು ಅರಮನೆ ಆವರಣದ ತ್ರಿಣೇಶ್ವರ ದೇವಸ್ಥಾನ ಬಳಿ ಪದಕ ವಿತರಿಸಲಾಯಿತು.ಸಾರ್ವಜನಿಕ ಮ್ಯಾರಾಥಾನ್- 10 ಕಿ.ಮೀ. ವಿಭಾಗದಲ್ಲಿ ಸುಮೀತ್ ಪಾಲ್(ಪ್ರಥಮ), ವೈ.ಎಸ್. ದೀಕ್ಷಿತ್ (ದ್ವಿತೀಯ), ತನುಜ್ ಕುಮಾರ್ (ತೃತೀಯ) ಹಾಗೂ 14 ಸ್ಪರ್ಧಿಗಳಿಗೆ ಪದಕ ನೀಡಲಾಯಿತು. ಫ್ರಾನ್ಸ್ ದೇಶದ ಮೂವರು ಭಾಗವಹಿಸಿದ್ದು, ಕೋಟ್ಟಿನ್ ಎಂಬವರಿಗೆ ಬಹುಮಾನ ನೀಡಲಾಯಿತು. 5 ಕಿ.ಮೀ. ವಿಭಾಗದಲ್ಲಿ ಸುಮಂತ್ (ಪ್ರಥಮ), ಎನ್. ದೊರೆಸ್ವಾಮಿ (ದ್ವಿತೀಯ), ಬಿ. ಮಹದೇವಸ್ವಾಮಿ (ತೃತೀಯ) ಹಾಗೂ 6 ಸ್ಪರ್ಧಿಗಳಿಗೆ ಪದಕ ನೀಡಲಾಯಿತು.
ಪೊಲೀಸ್ ಮ್ಯಾರಾಥಾನ್- 10 ಕಿ.ಮೀ. ವಿಭಾಗದಲ್ಲಿ ಅಮರ್ ಮುಲ್ಲಾ (ಪ್ರಥಮ), ಪ್ರಭು ಜಮ್ಕಂಡಿ(ದ್ವಿತೀಯ), ಎನ್. ಗೋಪಾಲ್ (ತೃತೀಯ) ಹಾಗೂ 13 ಸ್ಪರ್ಧಿಗಳಿಗೆ ಪದಕ ವಿತರಿಸಲಾಯಿತು. ಹಾಗೆಯೇ, 5 ಕಿ.ಮೀ. ವಿಭಾಗದಲ್ಲಿ ಎಂ.ಎಸ್. ರವೀಶ್ (ಪ್ರಥಮ), ಮಲ್ಲಪ್ಪ (ದ್ವಿತೀಯ), ನಾಗೇಂದ್ರ (ತೃತೀಯ) ಹಾಗೂ 5 ಸ್ಪರ್ಧಿಗಳಿಗೆ ಪದಕ ನೀಡಲಾಯಿತು.