ಸಾರಾಂಶ
ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಪ್ರೇರಣೆ ಕೊಡಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸರ್ಕಾರಿ ನೌಕರಿಗೆ ಸೇರಬೇಕು. ಆಗ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಸೌಥ್ ಆ್ಯಂಡ್ ವೆಸ್ಟ್ ಲಿ. ಮುದ್ದಾಪುರ ಪ್ರಧಾನ ವ್ಯವಸ್ಥಾಪಕ ಚಿದಾನಂದ ಪಡದಪ್ಪನವರ ಹೇಳಿದರು.
ಲೋಕಾಪುರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ಶ್ರಮಿಸಲಿದೆ ಎಂದು ಸೌಥ್ ಆ್ಯಂಡ್ ವೆಸ್ಟ್ ಲಿ. ಮುದ್ದಾಪುರ ಪ್ರಧಾನ ವ್ಯವಸ್ಥಾಪಕ ಚಿದಾನಂದ ಪಡದಪ್ಪನವರ ಹೇಳಿದರು.
ಸಮೀಪದ ಬೊಮ್ಮನಬುದ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹೊರಾಂಗಣ ಎಂಟು ಆಟದ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಪ್ರೇರಣೆ ಕೊಡಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸರ್ಕಾರಿ ನೌಕರಿಗೆ ಸೇರಬೇಕು. ಆಗ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.ಗ್ರಾಮದ ಮುಖಂಡ ವಿಷ್ಣು ತುಳಸಿಗೇರಿ ಮಾತನಾಡಿ, ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು. ಅಲ್ಲದೆ, ಪೋಷಕರದ್ದು ಆಗಿದೆ. ಜತೆಗೆ ತಂದೆ ತಾಯಂದಿರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡಬೇಕು ಎಂದ ಅವರು, ಸರ್ಕಾರಿ ಶಾಲೆಗೆ ಆಟದ ಸಾಮಗ್ರಿಗಳನ್ನು ನೀಡಿದ ಸೌಥ್ ಆ್ಯಂಡ್ ವೆಸ್ಟ್ ಲಿ. ಮುದ್ದಾಪುರ ಇವರಿಗೆ ಗ್ರಾಮದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಗಿರಿಯಪ್ಪಗೌಡ ಪಾಟೀಲ, ರವಿಗೌಡ ಪಾಟೀಲ, ಯಲ್ಲಪ್ಪಗೌಡ ಪಾಟೀಲ, ಅಶೋಕ ಕಿವಡಿ, ವೆಂಕನಗೌಡ ಪಾಟೀಲ, ಈರಣ್ಣ ಯಾದವಾಡ, ಬಾವಲತ್ತಿ, ಗ್ರಾಪಂ ಸದಸ್ಯ ಬಸವರಾಜ ಯಾವಗಲ್, ಅಂಗನವಾಡಿ ಶಿಕ್ಷಕಿ ಜಯಶ್ರೀ ನಂದಗಾಂವ, ಮುಖ್ಯ ಗುರು ವಿ.ಎಸ್.ಕೊಪ್ಪದ, ಸಹ ಶಿಕ್ಷಕ ಮುತ್ತು ತುಂಗಳ ಹಾಗೂ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ, ಗ್ರಾಮಸ್ಥರು ಇದ್ದರು.