ಸಾರಾಂಶ
ರಾಮನಗರ: ನಿಮ್ಮ ಆಧಾರ್ ಕಾರ್ಡ್‌ನಿಂದ ದೇಶದ್ರೇಹಿ ಚಟುವಟಿಕೆ ನಡೆಯುತ್ತಿದ್ದು, ಆ ಕೇಸಿನಿಂದ ನಿಮ್ಮನ್ನು ಹೊರ ತರುತ್ತೇನೆಂದು ವಂಚಕರು ನಂಬಿಸಿ ಮಹಿಳೆಗೆ 15 ಲಕ್ಷ ರುಪಾಯಿ ಮೋಸ ಮಾಡಿರುವ ಘಟನೆ ನಡೆದಿದೆ.
ರಾಮನಗರ: ನಿಮ್ಮ ಆಧಾರ್ ಕಾರ್ಡ್‌ನಿಂದ ದೇಶದ್ರೇಹಿ ಚಟುವಟಿಕೆ ನಡೆಯುತ್ತಿದ್ದು, ಆ ಕೇಸಿನಿಂದ ನಿಮ್ಮನ್ನು ಹೊರ ತರುತ್ತೇನೆಂದು ವಂಚಕರು ನಂಬಿಸಿ ಮಹಿಳೆಗೆ 15 ಲಕ್ಷ ರುಪಾಯಿ ಮೋಸ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರಹಳ್ಳಿ ಹೋಬಳಿ ಕಗ್ಗಲೀಪುರದ ಶ್ರೀನಿಧಿ ಗಾರ್ಡೆನ್ ನಿವಾಸಿ 38 ವರ್ಷದ ಎಂ.ಶಿಲ್ಪಾ ವಂಚನೆಗೊಳಗಾದವರು. ಕಳೆದ ಅ.3ರಂದು ಶಿಲ್ಪಾ ಮೊಬೈಲ್ ಗೆ ವ್ಯಕ್ತಿಯೊಬ್ಬ ಫೋನ್ ಮಾಡಿ ನಿಮ್ಮ ಪಾರ್ಸಲ್ ರಿಟರ್ನ್ ಆಗಿದ್ದು, ಸದರಿ ಪಾರ್ಸಲ್ ಏರ್‌ಪೋರ್ಟ್‌ನಲ್ಲಿ ಹೋಲ್ಡ್ ಆಗಿದೆ. ಅದರಲ್ಲಿ ಕಾನೂನು ಬಾಹಿರ ವಸ್ತುಗಳು ಪತ್ತೆಯಾಗಿದೆ. ಈ ವಿಚಾರವಾಗಿ ನೀವು ಸೈಬರ್ ಪೊಲೀಸರಿಗೆ ಕರೆ ಮಾಡುವಂತೆ ಹೇಳಿ ಆತನೇ ಕರೆಯನ್ನು ಸೈಬರ್ ಪೊಲೀಸರಿಗೆ ಕನೆಕ್ಟ್ ಮಾಡಿದ್ದಾನೆ.ಆಗ ಶಿಲ್ಪಾ ನನ್ನ ಆಧಾರ್ ಕಾರ್ಡನ್ನು ಮಿಸ್ ಯೂಸ್ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದು, ಆತನು ನನ್ನ ಆಧಾರ್ ಕಾರ್ಡ್ ಪರಿಶೀಲಿಸಿ, ನಿಮ್ಮ ಆಧಾರ್ ಕಾರ್ಡ್ ನಿಂದ ದೇಶದ್ರೋಹ ಚಟುವಟಿಕೆ ನಡೆಯುತ್ತಿದೆ ಎಂದು ಸ್ಕೈಪ್ ಆಪ್ ಮೂಲಕ ವಿಡಿಯೋ ಮತ್ತು ಆಡಿಯೋ ಕಾಲ್ ಮಾಡಿ ಬೆದರಿಸಿದ್ದಾನೆ.
ಅ.4ರಂದು ವಂಚಕರು ಗುಜರಾತ್ ರಾಜ್ಯ ಬರೋಡಾದ ಶಿವಾನಂದ್ ಇಂಟಿಯಿರರ್ ಓಪಿಸಿ ಪ್ರೈ.ಲಿ.ಗೆ 9 ಲಕ್ಷ ರು., ರೋಜಿನಾ ಕಾತುನ ಬಿಬಿ ಅವರ ಖಾತೆಗೆ 1 ಲಕ್ಷ ರು. ವರ್ಗಾಯಿಸಿದ್ದಾರೆ. ನಂತರ ಮತ್ತೆ 5 ಲಕ್ಷ ರು. ಹಣ ನೀಡಬೇಕೆಂದು ಆಗ ಮಾತ್ರ ನಿಮ್ಮನ್ನು ದೇಶದ್ರೋಹ ಕೇಸ್‌ನಿಂದ ಹೊರಗೆ ತರುತ್ತೇನೆಂದು ಶಿಲ್ಪಾ ಅವರನ್ನು ಹೆದರಿಸಿದ್ದಾನೆ.ಅ.7ರಂದು 5 ಲಕ್ಷ ಹಣವನ್ನು ಆರ್ ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದು, ಒಟ್ಟು 15 ಲಕ್ಷ ರು.ಗಳನ್ನು ವಂಚಕರು ಮೋಸ ಮಾಡಿದ್ದಾರೆ. ಈ ವಿಚಾರವಾಗಿ ಶಿಲ್ಪಾ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.