ನಟ ಕಮಲ್‌ ಹಾಸನ್ ಕ್ಷಮೆ ಕೇಳುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಮಿಳಿನಿಂದ ಕನ್ನಡ ಹುಟ್ಟಿದೆಯೆಂದು ವಿವಾದಾತ್ಮಕವಾಗಿ ಮಾತನಾಡಿರುವ ನಟ ಕಮಲ್‌ ಹಾಸನ್ ನಟಿಸಿರುವ

ಥಗ್‍ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ

ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. 8 ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ ಎಂಬ ಸಾಮಾನ್ಯ ಜ್ಞಾನವಿಲ್ಲದ ನಟ ಕಮಲಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದು ಸರಿಯಲ್ಲ. ಕೂಡಲೆ

ಕಮಲ್‌ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು 5ನೇ ತಾರೀಖಿನಂದು ರಾಜ್ಯದಲ್ಲಿ ಬಿಡುಗಡೆಗೆ

ಸಿದ್ದಗೊಂಡಿರುವ ಥಗ್‍ಲೈಫ್ ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ತಾಲೂಕು ಅಧ್ಯಕ್ಷ ರಾಜಪ್ಪ ಜಿ.ಪ್ರಧಾನ ಸಂಚಾಲಕ ಎಸ್.ಬಿ.ಗಣೇಶ್ ಉಪಾಧ್ಯಕ್ಷ ಆರ್.ಬಿ.ಲಕ್ಷ್ಮಣ, ತಾಲೂಕು ಪ್ರಧಾನ ಕಾರ್ಯದರ್ಶಿ ನೀಲಕಂಠ, ಘನಶ್ಯಾಮ್, ಪ್ರಸಾದ್‍ಮಲ್ಲ, ರಮೇಶ್, ರಾಮು, ಅನಿಲ್, ರಾಮಕೃಷ್ಣಪ್ಪ, ದಾದಾಪೀರ್ ಗೋ.ಬಸವರಾಜ್, ಜಾಫರ್, ಜಾಕೀರ್, ಚಂದ್ರಕಲಾ, ದ್ರಾಕ್ಷಾಯಿಣಿ, ಮಂಜುಳ, ಸುಮ, ಅಂಬಿಕ, ಮನು, ಮಹದೇವಯ್ಯ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.