ಸಾರಾಂಶ
ಒನಕೆ ಓಬವ್ವ ಜಯಂತಿ ಸಂದರ್ಭದಲ್ಲಿ ರೋಲ್ ಕಾಲ್ ಗಿರಾಕಿಗಳು ದುಡ್ಡು ಕೊಡದೆ ಇದ್ದ ಕಾರಣಕ್ಕೆ ಮಾತನಾಡುತ್ತಾರೆ. ಅವರೊಬ್ಬರೇ ದಲಿತರಲ್ಲ ಎಂಬ ಹೇಳಿಕೆ ಶಾಸಕ ಪ್ರದೀಪ್ ಈಶ್ವರ್ ನೀಡಿದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಾಸಕರಾದ ಪ್ರದೀಪ ಈಶ್ವರ್ ಅವರು ಪರಿಶಿಷ್ಟರ ಬಗ್ಗೆ ರೋಲ್ ಕಾಲ್ ಗಿರಾಕಿಗಳು ದುಡ್ಡು ಕೊಡದೆ ಇದ್ದರೆ ಇಂಥ ಹೇಳಿಕೆ ಕೊಡುತ್ತಾರೆ ಎಂಬ ಹೇಳಿಕೆ ನೀಡಿದ್ದು, ಯಾರು ದುಡ್ಡು ಕೇಳಿದರು ಎಂದು ಬಹಿರಂಗಪಡಿಸಲು ಒನಕೆ ಓಬವ್ವ ಜಯಂತ್ಯೋತ್ಸವ ಸಮಿತಿ ಸಂಚಾಲಕ ಜಿ.ಸಿ.ವೆಂಕಟರಮಣಪ್ಪ ಹೇಳಿದ್ದಾರೆ.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಒನಕೆ ಓಬವ್ವ ಜಯಂತ್ಯೋತ್ಸವ ಸಮಿತಿ ವತಿಯಿಂದ ಗುರುವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕಳೆದ 11ರಂದು ನಗರದಲ್ಲಿ ಒನಕೆ ಓಬವ್ವ ಜಯಂತಿ ಸಂದರ್ಭದಲ್ಲಿ ರೋಲ್ ಕಾಲ್ ಗಿರಾಕಿಗಳು ದುಡ್ಡು ಕೊಡದೆ ಇದ್ದ ಕಾರಣಕ್ಕೆ ಮಾತನಾಡುತ್ತಾರೆ. ಅವರೊಬ್ಬರೇ ದಲಿತರಲ್ಲ ಎಂಬ ಹೇಳಿಕೆ ನಮ್ಮ ಮನಸ್ಸಿಗೆ ತುಂಬಾ ಘಾಸಿಯಾಗಿದೆ ಎಂದು ಹೇಳಿದ್ದಾರೆ.ಒನಕೆ ಓಬವ್ವ ಜಯಂತ್ಯೋತ್ಸವ ಸಮಿತಿಯಲ್ಲಿ 20 ಜನರು ಇದ್ದು, ಅವರಾಗಲಿ ಅಥವಾ ಜಿಲ್ಲೆಯ ಯಾರೇ ಆಗಲಿ ನಿಮ್ಮ ಬಳಿ ಬಂದು ಕೇವಲ ಒಂದು ರೂಪಾಯಿ ಕೇಳಿದ್ದರೆ, ನಿಮ್ಮ ಬಳಿ ಯಾರೇ ಬಂದಿದ್ದರು ಅದಕ್ಕೆ ನೇರ ಹೊಣೆ ನಾವೇ, ಅವರ ಹೆಸರು ಬಹಿರಂಗಪಡಿಸಿದರೆ ನಾವು ನಿಮಗೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇವೆ ಎಂದು ಹೇಳಿದರು.
ನಾವು ನಿಮ್ಮಿಂದ ಯಾವುದೇ ಹಣ ಕೇಳಿಲ್ಲಾ. ನಾವೇನಾದರೂ ಹಣ ಕೇಳಿದ್ದರೆ ಬಹಿರಂಗ ಚರ್ಚೆಗೆ ನಾವು ಸಿದ್ದ. ಬಹಿರಂಗ ಚರ್ಚೆಗೆ ಆಹ್ವಾನ ನೀಡಿ, ಹಣ ಕೇಳಿದವರ ಹೆಸರು ಬಹಿರಂಗಪಡಿಸಿ, ಇಲ್ಲದಿದ್ದಲ್ಲಿ ಕಾನೂನು ರಿತ್ಯಾ ಮಾನನಷ್ಟ ಮೊಕ್ಕದ್ದಮೆ ಹೂಡುತ್ತೇವೆ ಶಾಸಕರಿಗೆ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ಒನಕೆ ಓಬವ್ವ ಜಯಂತ್ಯೋತ್ಸವ ಸಮಿತಿಯ ಕೆ.ವಿ.ರಮೇಶ್, ಪಿ. ತ್ಯಾಗರಾಜು, ನಾರಾಯಣಪ್ಪ, ವೆಂಕಟೇಶಪ್ಪ, ಈಶ್ವರಪ್ಪ ಮತ್ತಿತರರು ಇದ್ದರು.ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಒನಕೆ ಓಬವ್ವ ಜಯಂತ್ಯೋತ್ಸವ ಸಮಿತಿ ಸಂಚಾಲಕ ಜಿ.ಸಿ.ವೆಂಕಟರಮಣಪ್ಪ ಮಾತನಾಡಿದರು