ಬರ ಪರಿಸ್ಥಿತಿಯಲ್ಲಿ ಸಾಲ ಮರುಪಾತಿಗೆ ನೋಟಿಸ್‌ ನೀಡಿದ್ದಕ್ಕೆ ಬ್ಯಾಂಕ್‌ ವಿರುದ್ಧ ಆಕ್ರೋಶ

| Published : Apr 05 2024, 01:00 AM IST

ಬರ ಪರಿಸ್ಥಿತಿಯಲ್ಲಿ ಸಾಲ ಮರುಪಾತಿಗೆ ನೋಟಿಸ್‌ ನೀಡಿದ್ದಕ್ಕೆ ಬ್ಯಾಂಕ್‌ ವಿರುದ್ಧ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಸ್ಥಿತಿ ಇದ್ದರೂ ಗುಬ್ಬಿ ತಾಲೂಕಿನ ರೈತರಿಗೆ ಬ್ಯಾಂಕ್ ಗಳು ನೋಟಿಸ್ ಜಾರಿ ಮಾಡುತ್ತಿರುವುದು ಸರಿಯಲ್ಲ. ಈ ಜೊತೆಗೆ ಕೊಬ್ಬರಿ, ರಾಗಿ ಖರೀದಿ ಕೇಂದ್ರದ ಮೂಲಕ ರೈತನ ಖಾತೆಗೆ ಬಂದ ಹಣವನ್ನು ಸಾಲಕ್ಕೆ ಜಮಾ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗೆ ರೈತರಿಗೆ ತೊಂದರೆ ನೀಡುವ ಬ್ಯಾಂಕ್ ಗಳ ವಿರುದ್ಧ ರೈತ ಸಂಘ ಉಗ್ರ ಹೋರಾಟ ಮಾಡಲಿದೆ ಎಂದು ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಎಚ್ಚರಿಕೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಗುಬ್ಬಿಬರ ಪರಿಸ್ಥಿತಿ ಇದ್ದರೂ ಗುಬ್ಬಿ ತಾಲೂಕಿನ ರೈತರಿಗೆ ಬ್ಯಾಂಕ್ ಗಳು ನೋಟಿಸ್ ಜಾರಿ ಮಾಡುತ್ತಿರುವುದು ಸರಿಯಲ್ಲ. ಈ ಜೊತೆಗೆ ಕೊಬ್ಬರಿ, ರಾಗಿ ಖರೀದಿ ಕೇಂದ್ರದ ಮೂಲಕ ರೈತನ ಖಾತೆಗೆ ಬಂದ ಹಣವನ್ನು ಸಾಲಕ್ಕೆ ಜಮಾ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗೆ ರೈತರಿಗೆ ತೊಂದರೆ ನೀಡುವ ಬ್ಯಾಂಕ್ ಗಳ ವಿರುದ್ಧ ರೈತ ಸಂಘ ಉಗ್ರ ಹೋರಾಟ ಮಾಡಲಿದೆ ಎಂದು ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಎಚ್ಚರಿಕೆ ನೀಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರ ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಗುಬ್ಬಿ ತಾಲೂಕು ಸೇರಿರುವ ಬಗ್ಗೆ ಮಾಹಿತಿ ಎಲ್ಲಾ ಬ್ಯಾಂಕ್ ಗಳಿಗೂ ತಿಳಿದಿದೆ. ಆದರೂ ಮಾರ್ಚ್ ತಿಂಗಳು ಎಂದು ಕಾರಣ ನೀಡಿ ರೈತರಿಂದ ಸಾಲ ವಸೂಲಿಗೆ ನೋಟಿಸ್ ತಂತ್ರ ಬಳಸಿದ್ದಾರೆ. ಕಳೆದ ಬಾರಿ ಕೊಬ್ಬರಿ ಮಾರಾಟ ಮಾಡಿದ ರೈತರೊಬ್ಬರ ಖಾತೆಯಲ್ಲಿದ್ದ ಕೊಬ್ಬರಿ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂ ಡ ವಿಷಯದಿಂದ ತಾಲೂಕಿನ ಹಲವು ರೈತರಲ್ಲಿ ಆತಂಕ ಮೂಡಿದೆ ಎಂದರು.