ಸಾರಾಂಶ
ಲಕ್ಷ್ಮೇಶ್ವರ: ಗೋವಿನಜೋಳವನ್ನು ಬೆಂಬಲ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಭಾನುವಾರ ರೈತರು ಗೋವಿನಜೋಳವನ್ನು ರಸ್ತೆಗೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಕಳೆದ ಒಂಬತ್ತು ದಿನಗಳಿಂದ ಬೆಂಬಲ ಬೆಲೆ ಕೇಂದ್ರ ತೆರೆಯಲು ಆಗ್ರಹಿಸಿ ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರವು ದಿನದಿಂದ ದಿನಕ್ಕೆ ಉಗ್ರ ರೂಪ ತಾಳುತ್ತಿದೆ. ಶನಿವಾರ ಪಾಳಾ ಬಾದಾಮಿಯ ರಾಜ್ಯ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.ರೈತರು ತಾವು ಬೆಳೆದ ಗೋವಿನಜೋಳವನ್ನು ರಸ್ತೆಯಲ್ಲಿ ಸುರಿದು ಪ್ರತಿಭಟಿಸಿದರು. ಮುಂದಿನ ನಾಲ್ಕೈದು ದಿನಗಳಲ್ಲಿ ಗೋವಿನ ಜೋಳ ಖರೀದಿ ಕೇಂದ್ರ ತೆರೆಯದಿದ್ದರೆ ಧರಣಿ ಸತ್ಯಾಗ್ರಹ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಮಂಜುನಾಥ ಮಾಗಡಿ ಹಾಗೂ ರವಿಕಾಂತ ಅಂಗಡಿ ಮಾತನಾಡಿ, ಮಠಾಧೀಶರು ಉಪವಾಸವನ್ನು ಬಿಡಿಸುವ ಸಲುವಾಗಿ ಅಧಿಕಾರಿಗಳು ಈ ನಾಟಕವನ್ನು ಮಾಡಿದರೆ ಅದು ಸಲ್ಲದು. ರೈತರು ರೊಚ್ಚಿಗೆದ್ದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆ ಎಂದರು.ಈ ವೇಳ ಶರಣು ಗೋಡಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡರ, ಬಸಣ್ಣ ಬೆಂಡಿಗೇರಿ, ಪೂರ್ಣಾಜೆ ಖರಾಣೆ, ಮಹೇಶ ಹೊಗೆಸೊಪ್ಪಿನ, ಚೆನ್ನಪ್ಪ ಷಣ್ಮುಖಿ, ನಾಗರಾಜ ಗೌರಿ, ಸುರೇಶ ಹಟ್ಟಿ, ನಾಗಪ್ಪ ಓಂಕಾರಿ, ಶಿವಾನಂದ ಲಿಂಗಶೆಟ್ಟಿ, ಯಲ್ಲಪ್ಪ ದೇವಪ್ಪ ಮಾಳಗಿಮನಿ, ಟಾಕಪ್ಪ ಸಾತಪೊತೆ, ಗುರಪ್ಪ ಮುಳಗುಂದ, ನೀಲಪ್ಪ ಶೆರಸೂರಿ ಸೇರಿದಂತೆ ಅನೇಕರು ಇದ್ದರು.ಪ್ರತಿಭಟನಾ ವೇದಿಕೆಯಲ್ಲಿ ಪಶುಪತಿಹಾಳ ಗ್ರಾಮದ ಸಿದ್ಧಾರೂಢ ಜಾನಪದ ಕಲಾ ತಂಡದವರು ರೈತಗೀತೆ, ಜಾನಪದ ಹಾಡು, ಲಾವಣಿ ಪದ, ಕ್ರಾಂತಿ ಗೀತೆಗಳು, ಸಾಮಾಜಿಕ ವಿಡಂಬನೆಯ ಕುರಿತ ಹಾಡುಗಳನ್ನು ಹಾಡಿ ರೈತರ ಹೋರಾಟಕ್ಕೆ ಉತ್ಸಾಹ ತುಂಬಿದರು.
;Resize=(128,128))
;Resize=(128,128))