ಪ್ರಧಾನಿ ಮೋದಿ- ಟ್ರಂಪ್‌ ಭಾವಚಿತ್ರಗಳನ್ನು ದಹಿಸಿ ಆಕ್ರೋಶ

| Published : Aug 14 2025, 01:00 AM IST

ಪ್ರಧಾನಿ ಮೋದಿ- ಟ್ರಂಪ್‌ ಭಾವಚಿತ್ರಗಳನ್ನು ದಹಿಸಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ-ಯುಕೆ ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ (ಸಿಇಟಿಎ)ವನ್ನು ತೀವ್ರವಾಗಿ ವಿರೋಧಿಸಿ ಕ್ವಿಟ್‌ ಇಂಡಿಯಾ ಚಳವಳಿಯ ನೆನಪಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ನಿನಾದದೊಂದಿಗೆ ಸಂಯುಕ್ತ ಹೋರಾಟ-ಕರ್ನಾಟಕ (ಎಸ್‌ಕೆಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಪ್‌ ಹೊರಡಿಸಿದ ಸುಂಕ ಬೆದರಿಕೆಗಳು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಸಹಿ ಮಾಡಿದ ಕಾರ್ಪೋರೇಟ್‌ ಪರ ಭಾರತ-ಯುಕೆ ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ (ಸಿಇಟಿಎ)ವನ್ನು ತೀವ್ರವಾಗಿ ವಿರೋಧಿಸಿ ಕ್ವಿಟ್‌ ಇಂಡಿಯಾ ಚಳವಳಿಯ ನೆನಪಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ನಿನಾದದೊಂದಿಗೆ ಸಂಯುಕ್ತ ಹೋರಾಟ-ಕರ್ನಾಟಕ (ಎಸ್‌ಕೆಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಮುಖಂಡರು ರೈತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಸುಂಕರಹಿತ ಒಪ್ಪಂದ ಪ್ರತಿಗಳು ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮೇರಿಕಾ ಆಧ್ಯಕ್ಷ ಡೊನಾಲ್ಡ್‌ ಟ್ರಪ್ ಅವರ ಭಾವಚಿತ್ರಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಮೆರಿಕ ಜೊತೆ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಹಾಗೂ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು. ಆಮೇರಿಕಾ ವಿಧಿಸಿರುವ ಶೇ.25 ರಷ್ಟು ಆಮದು ಸುಂಕವನ್ನು ತಿರಸ್ಕರಿಸಬೇಕು, ಬ್ರಿಟನ್‌ ಜೊತೆಗಿನ ಸಮಗ್ರ ಅರ್ಥಿಕ, ವಾಣಿಜ್ಯ ಒಪ್ಪಂದವನ್ನು ಕೈ ಬಿಡಬೇಕು, ಎನ್‌ಪಿಎಫ್‌ಎಎಂ ಹಾಗೂ ಎನ್‌ಸಿಪಿಗಳನ್ನು ರದ್ದು ಪಡಿಸಬೇಕು, ರೈತರ ಎಲ್ಲಾ ಬೆಳೆಗಳಿಗೂ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಸೇರಿಸಿ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಯನ್ನು ಸರ್ಕಾರ ಖಾತರಿ ಸೇರಿದಂತೆ 18 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಸ್‌ಕೆಎಂನ ಮುಖಂಡರಾದ ಕೆ.ಜಿ.ವಿರೇಶ, ಡಿ.ಎಸ್.ಶರಣಬಸವ, ಜಿಂದಪ್ಪ ವಡ್ಲೂರು, ಪ್ರಭಾಕರ ಪಾಟೀಲ್ ಇಂಗಳಧಾಳ, ಬಸಲಿಂಗಪ್ಪ ಹೀರೆನಗನೂರು, ಬೂದಯ್ಯಸ್ವಾಮಿ ಗಬ್ಬೂರು, ರಂಗನಾಥ, ಅಸ್ಲಂಪಾಷ, ಅಂಜಿನೇಯ್ಯ ಕುರುಬದೊಡ್ಡಿ, ಮಲ್ಲನಗೌಡ, ಆನಂದ, ಮುದ್ದಕಪ್ಪ ನಾಯಕ, ಜಿಲಾನಿ ಪಾಷ, ಶ್ರೀನಿವಾಸ್ ಕಲವಲದೂಡ್ಡಿ, ಮಹೇಶ ಚೀಕಲಪರ್ವಿ, ವೆಂಕಟಸ್ವಾಮಿ ಸೇರಿ ಇತರರು ಇದ್ದರು.