ಸಾರಾಂಶ
ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ
ಗೋಕಾಕ: ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ, ತೆರಿಗೆ ಹೆಚ್ಚಳ, ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹಿರವಾಗಿ ನೀಡಿದ ಕಾಮಗಾರಿಗಳ ಮೀಸಲಾತಿ ಆಕ್ಷೇಪಿಸಿ, ಎಸ್ಸಿ-ಎಸ್ಟಿ ಮೀಸಲು ಹಣದ ದುರ್ಬಳಕೆ ಖಂಡಿಸಿ ಮತ್ತು ಬಿಜೆಪಿ 18 ಶಾಸಕರ ಅಮಾನತು ವಿರೋಧಿಸಿ ಇಲ್ಲಿನ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗೋಕಾಕ ನರಗ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನರಗಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡರುಗಳಾದ ಲಕ್ಷ್ಮಣ ತಪಸಿ, ಅಬ್ಬಾಸ ದೇಸಾಯಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ, ಬಸವರಾಜ ಆರೆನ್ನವರ, ಬಸವರಾಜ ಮಾಳಗಿ, ಬಾಬು ಮುಳಗುಂದ, ಲಕ್ಷ್ಮಣ ತಳ್ಳಿ, ಸುರೇಶ ಪತ್ತಾರ, ಮಂಜುನಾಥ ಮಾವರಕರ, ವಿರೇಂದ್ರ ಯಕ್ಕೇರಿಮಠ ಸೇರಿದಂತೆ ಅನೇಕರು ಇದ್ದರು.