ಸಾರಾಂಶ
-ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಸಂಸದ ಗೋವಿಂದ ಕಾರಜೋಳ
-----ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಜಿಲ್ಲೆಯ ಹೊರವಲಯ ಗೋನೂರು ಮಾರ್ಗದಲ್ಲಿ ರೇಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ಭಯಾನಕ ಸನ್ನಿವೇಶ ಸೃಷ್ಟಿಸುವ ದೃಶ್ಯಾವಳಿಯ ಸಂಸದ ಗೋವಿಂದ ಕಾರಜೋಳ ಖುದ್ದು ವೀಕ್ಷಿಸಿ ತೀವ್ರ ಅಸಮಧಾನ ವ್ಯಕ್ತಪಡಿಸಿದರು.ರೈಲ್ವೆ ಕೆಳಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಸೇತುವೆ ಕೆಳಗೆ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಸಾರ್ವಜನಿಕ ದೂರುಗಳ ಆಧರಿಸಿ ಖುದ್ದು ಸ್ಥಳಕ್ಕೆ ಭೇಡಿ ನೀಡಿದ ಸಂಸದ ಗೋವಿಂದ ಕಾರಜೋಳ ವೀಕ್ಷಿಸಿ ರೇಲ್ವೆ ಅದಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅವ್ಯವಸ್ಥೆಯ ತಕ್ಷಣವೇ ಸರಿಪಡಿಸುವಂತೆ ತಾಕೀತು ಮಾಡಿದರು.
ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ನಡೆದ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರೈಲ್ವೆ ಕೆಳಸೇತುವೆಗಳ ಬಳಿ ನೀರು ಜಮಾವಣೆಯಾಗುತ್ತಿದ್ದು, ಇಂತಹ ಸೇತುವೆಗಳನ್ನು ಪಟ್ಟಿ ಮಾಡಿದ್ದ ಗೋವಿಂದ ಕಾರಜೋಳ ಅಧಿಕಾರಿಗಳ ಗಮನ ಸೆಳೆದಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಸಾಕಷ್ಟು ಸೇತುವೆಗಳ ಬಳಿ ನೀರು ಜಮಾವಣೆಯಾಗುತ್ತಿದ್ದು, ಕೂಡಲೇ ಇವುಗಳನ್ನು ಸರಿಪಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಂಸದರು ಸೂಚನೆ ನೀಡಿದ ಮೇಲೂ ರೇಲ್ವೆ ಅಧಿಕಾರಿಗಳು ಕಣ್ಣೆತ್ತಿ ನೋಡಿರಲಿಲ್ಲ. ರೇಲ್ವೆ ಅಂಡರ್ ಪಾಸ್ ನಲ್ಲಿ ನೀರು ಸಂಗ್ರಹವಾದ ದೃಶ್ಯ ಕಾರಜೋಳ ಅವರಲ್ಲಿ ಸಿಟ್ಟು ಬರಿಸಿತ್ತು. ತಕ್ಷಣವೇ ದುರಸ್ತೆ ಕಾರ್ಯ ಕೈಗೊಂಡು ತೊಂದರೆ ಆಗದಂತೆ ನೋಡಿಕೊಳ್ಳದಿದ್ದರೆ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಎಚ್ಚರಿಸಿದರು.
----------------ಪೋಟೋ: ಸಂಸದ ಗೋವಿಂದ ಕಾರಜೋಳ ಚಿತ್ರದುರ್ಗ ಹೊರವಲಯ ಗೋನೂರು ರಸ್ತೆ ರೇಲ್ವೆ ಅಂಡರ್ ಪಾಸ್ ನಲ್ಲಿ ನೀರು ಸಂಗ್ರಹವಾಗಿರುವುದನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
-------ಫೋಟೋ: 9 ಸಿಟಿಡಿ4