ಹೊರಗಿನಿಂದ ಬಂದವರು ಕನ್ನಡ ಭಾಷೆಗೆ ಗೌರವ ಕೊಡಬೇಕು: ಅಶೋಕ್‌

| Published : Mar 31 2024, 02:07 AM IST

ಸಾರಾಂಶ

ಬದುಕು ರೂಪಿಸಲು ಭಾಷಾವಾರು ಪ್ರಾಂತ್ಯಗಳನ್ನು ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಹೊರಗಿನಿಂದ ಯಾರೇ ಬಂದರೂ ಕನ್ನಡ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟು ಬದುಕುವಂತಾಗಬೇಕು. ಆದರೆ ಈಗ ವಿವಿಧ ಹುದ್ದೆ ಅಲಂಕರಿಸಬೇಕೆಂದರೆ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ನಾವು ನಿಜವಾಗಿಯೂ ಗೋಕಾಕ್ ಚಳುವಳಿ ಮಾಡಿದ್ದೇವಾ ಎಂಬ ಪ್ರಶ್ನೆ ನಮ್ಮಲ್ಲೇ ಮೂಡುತ್ತದೆ ಎಂದು ಚಲನಚಿತ್ರ ನಟ ಅಶೋಕ್ ಹೇಳಿದರು.

ಮೂಡಿಗೆರೆ ಅಂಡ್ಯತಾಯ ರಂಗಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿಮತ

--

- ನಿಜವಾಗಿಯೂ ಗೋಕಾಕ್ ಚಳುವಳಿ ಮಾಡಿದ್ದೇವಾ ಎಂಬ ಪ್ರಶ್ನೆ ನಮ್ಮಲ್ಲೇ ಮೂಡುತ್ತದೆ

- ಇವತ್ತು ಚುನಾವಣೆ, ರಾಜಕೀಯ, ಮಾಧ್ಯಮಗಳು ದಾರಿ ತಪ್ಪಿವೆ

-ನಾವು ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿದ್ದೇವೆ

- ರಾಜಕೀಯ ಚಳುವಳಿಗೆ ಸೇರುವ ಜನ ಸಾಂಸ್ಕೃತಿಕ ಚಳುವಳಿಗೆ ಬರಲ್ಲ

- ಭವಿಷ್ಯದಲ್ಲಿ ಕನ್ನಡಕ್ಕೆ ಕಂಟಕ ಬರುವ ಸಾಧ್ಯತೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಬದುಕು ರೂಪಿಸಲು ಭಾಷಾವಾರು ಪ್ರಾಂತ್ಯಗಳನ್ನು ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಹೊರಗಿನಿಂದ ಯಾರೇ ಬಂದರೂ ಕನ್ನಡ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟು ಬದುಕುವಂತಾಗಬೇಕು. ಆದರೆ ಈಗ ವಿವಿಧ ಹುದ್ದೆ ಅಲಂಕರಿಸಬೇಕೆಂದರೆ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ನಾವು ನಿಜವಾಗಿಯೂ ಗೋಕಾಕ್ ಚಳುವಳಿ ಮಾಡಿದ್ದೇವಾ ಎಂಬ ಪ್ರಶ್ನೆ ನಮ್ಮಲ್ಲೇ ಮೂಡುತ್ತದೆ ಎಂದು ಚಲನಚಿತ್ರ ನಟ ಅಶೋಕ್ ಹೇಳಿದರು.ಮೂಡಿಗೆರೆ ಅಂಡ್ಯತಾಯ ರಂಗಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಭಾಗವಹಿಸಿದ್ದ ಅವರು, ಕನ್ನಡ ಚಳುವಳಿ-ಪರಿಣಾಮಗಳು ಗೋಷ್ಠಿಯಲ್ಲಿ ಮಾತನಾಡಿದರು. ಇವತ್ತು ಚುನಾವಣೆ, ರಾಜಕೀಯ, ಮಾಧ್ಯಮಗಳು ದಾರಿ ತಪ್ಪಿವೆ. ಇದು ಅಪಾಯ. ನಾವು ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿದ್ದೇವೆ. ಇವೆಲ್ಲವನ್ನು ಪ್ರಶ್ನಿಸಿ ಉತ್ತರ ಪಡೆಯದಿದ್ದರೆ ಕನ್ನಡ ಭಾಷೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಅವರು ಕನ್ನಡ ಚಳುವಳಿ ಅಂದು-ಇಂದು ವಿಷಯ ಕುರಿತು ಮಾತನಾಡಿ, ರಾಜಕೀಯ ಚಳುವಳಿಗೆ ಲಕ್ಷಾಂತರ ಜನ ಸೇರುತ್ತಾರೆ. ಆದರೆ ಸಾಂಸ್ಕೃತಿಕ ಚಳುವಳಿಗೆ ಜನ ಸೇರುವುದಿಲ್ಲ. ಚಳುವಳಿಗಳು ವ್ಯಕ್ತಿ ಚಳುವಳಿಯಾಗಿ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ ಎಂದರು.ದ.ರಾ. ಬೇಂದ್ರೆ, ಪುತಿನ, ಮಾಸ್ತಿ, ಡಿವಿಜಿ, ನಾ ಕಸ್ತೂರಿ ಕನ್ನಡಿಗರಲ್ಲ. ಅಷ್ಟೆ ಅಲ್ಲ. ಬೇರೆ ರಾಜ್ಯದ ಜನರು ಕೂಡ ಅದ್ಭುತ ಕನ್ನಡ ಮಾತನಾಡುತ್ತಾರೆ. ಆದರೆ, ಕನ್ನಡಿಗರ ಬಾಯಲ್ಲಿ ಕನ್ನಡ ಭಾಷೆ ಬಾರದಿರುವುದು ದುರಂತ. ಕರ್ನಾಟಕ ಉಳಿಸಿ ಕೊಳ್ಳಲು 8 ಕ್ಕೂ ಹೆಚ್ಚು ಅಕಾಡೆಮಿಗಳಿವೆ. ಅವು ಎಲ್ಲಿಗೆ ಹೋಗಿದೆ ಎಂಬುದು ಪ್ರಶ್ನೆಯಾಗಿದೆ. ಸಮ್ಮೇಳನಗಳ ಸ್ಥಿತಿ ಗಮನಿಸಿದರೆ ಭವಿಷ್ಯದಲ್ಲಿ ಕನ್ನಡಕ್ಕೆ ಕಂಟಕ ಬರುವ ಸಾಧ್ಯತೆಯಿದೆ. ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಇಲ್ಲ ವಾಗಿಸುವಂತೆ ಹುನ್ನಾರ ನಡೆಯುತ್ತಿದ್ದು, ಮತ್ತೊಂದು ಚಳುವಳಿಗೆ ಮುಂದಾಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಕಣಿವೆ ವಿನಯ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಜಿ.ಕೆ.ಸತ್ಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್, ಬಿ.ಪ್ರಕಾಶ್, ಇಮ್ರಾನ್ ಅಹಮದ್ ಬೇಗ್, ಬಿ.ಆರ್.ಜಗದೀಶ್, ಜಯಂತಿ ಶಿವಾಜಿ, ಕೆ.ಎನ್.ಪುಂಡಲೀಕರಾಮ್, ಎಚ್.ಡಿ.ವಿನಯ್ ಉಪಸ್ಥಿತರಿದ್ದರು.

30 ಕೆಸಿಕೆಎಂ 5ಮೂಡಿಗೆರೆಯಲ್ಲಿ ಏರ್ಪಡಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಚಳುವಳಿಗಳು-ಪರಿಣಾಮಗಳು ಗೋಷ್ಠಿಯಲ್ಲಿ ಚಲನಚಿತ್ರ ನಟ ಅಶೋಕ್ ಮಾತನಾಡಿದರು.