ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಮಂದಿ ನಮಗೆ ಗೃಹ ಜ್ಯೋತಿಯಡಿ ನೀಡಲಾಗುವ ಉಚಿತ ವಿದ್ಯುತ್ ಬೇಡ ಎಂದು ಸ್ವಇಚ್ಚೆಯಿಂದ ಸರ್ಕಾರ ನಡೆಸಲಾಗುತ್ತಿರುವ ಗೃಹ ಜ್ಯೋತಿ ಪರಿಶೀಲನೆ ವೇಳೆ ತಿಳಿಸಿದ್ದಾರೆ.
ಮೆಸ್ಕಾಂ ಅಧಿಕ್ಷಕ ಎಂಜಿನಿಯರ್ ಮಂಜುನಾಥ್ ಮಾಹಿತಿ । ಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಮಂದಿ ನಮಗೆ ಗೃಹ ಜ್ಯೋತಿಯಡಿ ನೀಡಲಾಗುವ ಉಚಿತ ವಿದ್ಯುತ್ ಬೇಡ ಎಂದು ಸ್ವಇಚ್ಚೆಯಿಂದ ಸರ್ಕಾರ ನಡೆಸಲಾಗುತ್ತಿರುವ ಗೃಹ ಜ್ಯೋತಿ ಪರಿಶೀಲನೆ ವೇಳೆ ತಿಳಿಸಿದ್ದಾರೆ.
ಈ ಮೂಲಕ ಯೋಜನೆಯಿಂದ ಹೊರಗೆ ಉಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಚಿಕ್ಕಮಗಳೂರು ಮೆಸ್ಕಾಂ ಅಧಿಕ್ಷಕ ಎಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.ಶುಕ್ರವಾರ ಜಿಲ್ಲಾ ಗ್ಯಾರಂಟಿ ಕಚೇರಿಯಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ವಿವರಿಸಿದ ಮಂಜುನಾಥ್, ಗೃಹಜ್ಯೋತಿ ಪರಿಷ್ಕರಣೆ ಶೇ. ೯೦ ರಷ್ಟು ನಡೆದಿದ್ದು, 3 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಸ್ವಇಚ್ಚೆಯಿಂದ ಯೋಜನೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದರು.
೮ ರಿಂದ ೧೦ ಸಾವಿರ ಮನೆಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಒದಗಿಸಲಾಗುತ್ತಿದೆ. ಪರಿಷ್ಕರಣೆ ಸಮಯದಲ್ಲಿ ಡೋರ್ಲಾಕ್ ಇತ್ಯಾದಿ ಕಾರಣಗಳಿಗೆ ಪರಿಷ್ಕರಣೆ ಆಗಿಲ್ಲವೋ ಅವರು ಸೆ. ೩೦ ರೊಳಗೆ ಇಲಾಖೆ ಸಂಪರ್ಕದೊಂದಿಗೆ ಪರಿಷ್ಕರಣೆ ಮಾಡಿಸಬೇಕೆಂದು ಮಂಜುನಾಥ್ ಸಭೆಗೆ ವಿವರಿಸಿದರು.೩.೨೨ ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಯೋಜನೆಯಡಿ ಸರ್ಕಾರ ₹೪೩೩ ಕೋಟಿ ಭರಿಸಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ ಇ-ಕೆವೈಸಿ ಮಾಡಿಸಲು ಅ.೨೦ ರವರೆಗೆ ಸಮಯ ನೀಡಲಾಗಿದ್ದು, ಈಗಾಗಲೇ ಇ-ಕೆವೈಸಿ ಯಾರಿಗೆಲ್ಲ ಮಾಡಿಸಬೇಕೆಂಬ ಮಾಹಿತಿ ಪಡಿತರ ವಿತರಣಾ ಶಾಖೆಗಳ ಮೂಲಕ ತಿಳಿಸಲಾಗಿದೆ. ಕೆಲಸ ಮತ್ತು ಶಾಲೆಗಳಿಗೆ ಹೋದವರಿಗೆ ತೊಂದರೆ ಆಗಬಾರದೆಂದು ರಾತ್ರಿ ೮ ಗಂಟೆವರೆಗೆ ಇ-ಕೆವೈಸಿ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಯೋಗಾನಂದ ಮಾಹಿತಿ ನೀಡಿದರು. ಈವರೆಗೆ ೮.೨೬ ಲಕ್ಷ ಫಲಾನುಭವಿಗಳಿಗೆ ₹೩೯೬ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಅಧಿಕಾರಿ ಪ್ರದೀಪ್ ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಈವರೆಗೆ ೭.೩೮ ಲಕ್ಷ ಟ್ರಿಪ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಅದಕ್ಕಾಗಿ ಸರ್ಕಾರ ₹೨೯೦ ಕೋಟಿ ಭರಿಸಿದೆ ಎಂದರು. ಯುವನಿಧಿ ಯೋಜನೆ ಬಗ್ಗೆ ಇಲಾಖಾ ಅಧಿಕಾರಿಗಳಾದ ಖಲಂದರ್ ಸಭೆಗೆ ಮಾಹಿತಿ ನೀಡುತ್ತಾ ಜಿಲ್ಲೆಯ ಸುಮಾರು ೨೦೦೦ ಪದವಿ ಹಾಗೂ ಡಿಪ್ಲೂಮಾ ಪದವೀಧರರಿಗೆ ಈವರೆಗೆ ₹೧೮ ಕೋಟಿಯನ್ನು ಸರ್ಕಾರ ನೀಡಿದೆ. ಅವರಿಗೆ ಮಾಹಿತಿ ಹಾಗೂ ತರಬೇತಿ ನಡೆಸುವ ಕೆಲಸ ಇಲಾಖೆ ಮಾಡುತ್ತಿರುವುದಾಗಿ ವಿವರಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಎಚ್.ಎಸ್.ಕೀರ್ತನಾ ಭಾರತ್ ಜೋಡೋ ಯುವಕ ಸಂಘಗಳ ರಚನೆಯಲ್ಲಿ ಗ್ರಾಮ ಪಂಚಾ ಯಿತಿ ಮತ್ತು ವಾರ್ಡ್ ಗ್ಯಾರಂಟಿ ಸಮಿತಿಗಳ ಸದಸ್ಯರು ಹೆಚ್ಚು ಕಾಳಜಿಯಿಂದ ಮುಂದಾಗಬೇಕು. ಈ ಸಂಘಗಳು ಯುವ ಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಅತೀ ಮುಖ್ಯವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಡಾ.ಸಿ.ರಮೇಶ್ ಸಂಘಗಳ ರಚನೆ ಇತ್ಯಾದಿ ವಿಚಾರವನ್ನು ಸಭೆಗೆ ತಿಳಿಸಿದರು.ಒಟ್ಟಾರೆ ಜಿಲ್ಲೆಗೆ ಕಳೆದ ೩ ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು ೧೦ ಲಕ್ಷ ಫಲಾನುಭವಿಗಳಿಗೆ ₹೨೭೬೫ ಕೋಟಿ ರಾಜ್ಯ ಸರ್ಕಾರದಿಂದ ಕೊಡ ಮಾಡಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್ ತಿಳಿಸಿದರು.ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಮೀವುಲ್ಲಾ, ಮಂಜುನಾಥ, ಕೃಷ್ಣೇಗೌಡ, ಚಂದ್ರಮೌಳಿ, ಹೇಮಾವತಿ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಸೇರಿದಂತೆ ಮೊದಲಾದವರಿದ್ದರು.-- ಬಾಕ್ಸ್ --
ಶೀಘ್ರದಲ್ಲಿ ಗೃಹಲಕ್ಷ್ಮಿ ಪರಿಷ್ಕರಣೆ: ಶಿವಾನಂದ ಸ್ವಾಮಿಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ಶೀಘ್ರ ಆರಂಭವಾಗಲಿದೆ. ಫಲಾನುಭವಿಗಳಲ್ಲಿ ಆತಂಕ ಬೇಡ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.
ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಈಗಾಗಲೇ ೧೮೭೭ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಕೆಲವು ಇಲಾಖಾಧಿಕಾರಿಗಳನ್ನು ಪರಿವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರೊಂದಿಗೆ ಜಿಲ್ಲೆಯ ೨೦೦೦ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ, ವಾರ್ಡ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಸೇರಿ ಪರಿಷ್ಕರಣೆ ಆರಂಭಿಸಲಿದ್ದಾರೆ. ಪರಿಷ್ಕರಣೆಗೆ ಬರುವ ಮುನ್ನವೇ ಫಲಾನುಭವಿಗಳು ಸಲ್ಲಿಸಬೇಕಾದ ದಾಖಲಾತಿ ಮತ್ತಿತರ ವಿಷಯಗಳನ್ನು ತಿಳಿಸಲಾ ಗುವುದು. ಜಿಲ್ಲೆಯ ೨.೬೨ ಲಕ್ಷ ಯಜಮಾನಿಯರ ಮನೆ ಮನೆಗೆ ತೆರಳಿ ಪರಿಷ್ಕರಣೆ ನಡೆಸಲಾಗುವುದು ಎಂದರು.