ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ

| Published : Nov 06 2024, 11:55 PM IST

ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನ ಕ್ರೀಡಾಪಟುಗಳು ಒಟ್ಟು 47 ಚಿನ್ನ, 17 ಬೆಳ್ಳಿ ಮತ್ತು 7 ಕಂಚಿನ ಪದಕಗಳೊಂದಿಗೆ 71 ಪದಕದೊಂದಿಗೆ ನೂತನ ಕೂಟ ದಾಖಲೆಯನ್ನು ನಿರ್ಮಿಸಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮಂಗಳೂರು ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಿತು. ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ತಂಡ ಎರಡೂ ವಿಭಾಗಗಳಲ್ಲೂ ಸಮಗ್ರ ಚಾಂಪಿಯನ್‌ ಪ್ರಶಸ್ತಿ ಪಡೆಯಿತು.

ಕಾಲೇಜಿನ ಕ್ರೀಡಾಪಟುಗಳು ಒಟ್ಟು 47 ಚಿನ್ನ, 17 ಬೆಳ್ಳಿ ಮತ್ತು 7 ಕಂಚಿನ ಪದಕಗಳೊಂದಿಗೆ 71 ಪದಕದೊಂದಿಗೆ ನೂತನ ಕೂಟ ದಾಖಲೆಯನ್ನು ನಿರ್ಮಿಸಿತು. ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಶಸ್ತಿ, ಪ್ರೌಢಶಾಲಾ 14ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಪ್ರೌಢಶಾಲಾ 1 7ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಕ್ರೀಡಾಕೂಟದ ಸಮಗ್ರ ಚಾಂಪಿಯನ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.

ಪ್ರಾಥಮಿಕ ಶಾಲೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯು ಬಾಲಕರ ವಿಭಾಗಗದಲ್ಲಿ ಸುಭಾಷ್ ಎ.ಆರ್., ಬಾಲಕಿಯರ ವಿಭಾಗ ರಕ್ಷಿತಾ ಮತ್ತಪ್ಪ, ಪ್ರೌಢಶಾಲಾ 14 ವರ್ಷ ವಯೋಮಿತಿಯ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಬಾಲಕರ ವಿಭಾಗದಲ್ಲಿ ಕೌಶಿಕ್ ಪಿ. ಶೆಟ್ಟಿಗಾರ್, ಸಮರ್ಥ್ ಸಂಜೀವ ಕುಮಾರ್, ನಾಗಿಣಿ, ಗೋಪಿಕಾ ಜಿ. ಗಳಿಸಿದರು.

ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಫಲಿತಾಂಶ: ಪ್ರೇಕ್ಷಾ 80 ಮೀ. ಹರ್ಡಲ್ಸ್ (ಪ್ರಥಮ), ಎತ್ತರ ಜಿಗಿತ (ದ್ವಿತೀಯ), ರಿಲೇ (ಪ್ರಥಮ), ರಕ್ಷಿತಾ- ಉದ್ದ ಜಿಗಿತ (ಪ್ರಥಮ), ಎತ್ತರ ಜಿಗಿತ (ಪ್ರಥಮ), ರಿಲೇ (ಪ್ರಥಮ), ದೀಪಾ- ರಿಲೇ (ಪ್ರಥಮ), ಕೃತಿಕಾ ರಿಲೇ (ಪ್ರಥಮ), ಸುಭಾಷ್ (ಪ್ರಥಮ), 80 ಮೀ. ಹರ್ಡಲ್ಸ್ (ಪ್ರಥಮ), ಉದ್ದ ಜಿಗಿತ (ದ್ವಿತೀಯ) ಬಹುಮಾನ ಗಳಿಸಿದರು.

ಪ್ರೌಢಶಾಲಾ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ: ವೀಕ್ಷಾ- 100ಮೀ (ದ್ವಿತೀಯ), ಸುಜಾತ – 200 ಮೀ (ಪ್ರಥಮ), ಮೇಘಾ- 400 ಮೀ (ಪ್ರಥಮ), ಅನುಶ್ರೀ- 600 ಮೀ (ಪ್ರಥಮ), ಅಮೂಲ್ಯ- 80 ಮೀ ಹರ್ಡಲ್ಸ್ (ಪ್ರಥಮ), ಸವಿತಾ- ಗುಂಡು ಎಸೆತ (ಪ್ರಥಮ), ಆದರ್ಶ್- 100 ಮೀ (ಪ್ರಥಮ), 200 ಮೀ (ದ್ವಿತೀಯ), ಆದಿತ್ಯ- 400 ಮೀ (ಪ್ರಥಮ), 600 ಮೀ (ಪ್ರಥಮ), ಕೌಶಿಕ್- 80 ಮೀ ಹರ್ಡಲ್ಸ್ (ಪ್ರಥಮ), ಉದ್ದ ಜಿಗಿತ (ಪ್ರಥಮ), ಲೋಹಿತ್ ಗೌಡ – ಗುಂಡು ಎಸೆತ (ಪ್ರಥಮ) ಬಹುಮಾನ ಗಳಿಸಿದರು.

ಪ್ರೌಢಶಾಲಾ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ: ಗೋಪಿಕಾ ಜಿ -100 ಮೀ (ಪ್ರಥಮ), 200 ಮೀ (ಪ್ರಥಮ), ರಿಲೇ (ಪ್ರಥಮ), ನಯೋನಿಕಾ ರಿಲೇ (ಪ್ರಥಮ), ಚಿನ್ಮಯಿ 100 ಮೀ ರಿಲೇ (ಪ್ರಥಮ), ಸಹನಾ ರಿಲೇ (ಪ್ರಥಮ), ಪ್ರಾರ್ಥನಾ 400 ಮೀ. (ದ್ವಿತೀಯ), 4*400ಮೀ ರಿಲೇ (ಪ್ರಥಮ), ನಾಗಿಣಿ- 800ಮೀ (ಪ್ರಥಮ), 1500 ಮೀ (ಪ್ರಥಮ), ಪ್ರಿಯಾಂಕ- 800ಮೀ (ದ್ವಿತೀಯ), 3000 ಮೀ (ಪ್ರಥಮ), ರಿಲೇ (ಪ್ರಥಮ), ಜಿ. ಕಿರಣ- 1500 ಮೀ (ದ್ವಿತೀಯ), ಅಂಜಲಿ- 3000 ಮೀ (ತೃತೀಯ), ಪ್ರೀತಿ- 400 ಮೀ. ಹರ್ಡಲ್ಸ್ (ಪ್ರಥಮ), ರಿಲೇ (ಪ್ರಥಮ), ವರ್ಷ - 400 ಮೀ. ಹರ್ಡಲ್ಸ್ (ದ್ವಿತೀಯ), ರಿಲೇ (ಪ್ರಥಮ), ಪೂಜಾ- ಉದ್ದ ಜಿಗಿತ (ತೃತೀಯ), ತ್ರಿವಿಧ ಜಿಗಿತ (ತೃತೀಯ), ಯಾಶಿನಿ - ಚಕ್ರ ಎಸೆತ (ಪ್ರಥಮ), ಚಸ್ಮಿತಾ- ಚಕ್ರ ಎಸೆತ (ದ್ವಿತೀಯ), ಪ್ರೇಕ್ಷಿತಾ- ಜಾವೆಲಿನ್ ಎಸೆತ (ದ್ವಿತೀಯ), ಜಾಸ್ಮಿನ - ಹ್ಯಾಮರ್ ಎಸೆತ (ಪ್ರಥಮ), ಸ್ಫೂರ್ತಿ - ಹ್ಯಾಮರ್ ಎಸೆತ (ದ್ವಿತೀಯ), ಸಾಹಿಲ್ - 100ಮೀ (ದ್ವಿತೀಯ), 200ಮೀ (ದ್ವಿತೀಯ), ಸಮರ್ಥ್ – 800ಮೀ (ಪ್ರಥಮ), 1500ಮೀ (ಪ್ರಥಮ), 3000ಮೀ (ಪ್ರಥಮ), ರಿಲೇ (ತೃತೀಯ), ಆಕಾಶ್- 110ಮೀ ಹರ್ಡಲ್ಸ್ (ಪ್ರಥಮ), 400 ಮೀ ಹರ್ಡಲ್ಸ್ (ಪ್ರಥಮ), ರಿಲೇ (ಪ್ರಥಮ), ರಿಲೇ (ತೃತೀಯ), ಗೌತಮ್- 110ಮೀ ಹರ್ಡಲ್ಸ್ (ದ್ವಿತೀಯ), ಪ್ರಥ್ವಿಕ್- ತ್ರಿವಿಧ ಜಿಗಿತ (ದ್ವಿತೀಯ), ಧನುಷ್- ಗುಂಡು ಎಸೆತ (ಪ್ರಥಮ), ಚಕ್ರ ಎಸೆತ (ಪ್ರಥಮ), ಮೈಲಾರಿ- ಚಕ್ರ ಎಸೆತ (ದ್ವಿತೀಯ), ವಿಜಯ್ ಕುಮಾರ್- ಜಾವಲೆನ್ ಎಸೆತ (ದ್ವಿತೀಯ), ಪ್ರಕಾಶ್- ಹ್ಯಾಮರ್ ಎಸೆತ (ತೃತೀಯ), ಪ್ರಶಾಂತ್- ರಿಲೇ (ತೃತೀಯ), ರಾಜ್- ರಿಲೇ (ಪ್ರಥಮ) ಬಹುಮಾನ ಗಳಿಸಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.