ಸಾರಾಂಶ
ಪೆಟ್ರೋಲ್ ಸೋರಿಕೆ ಆಗಿದ್ದರಿಂದ ಒಂದು ತಾಸಿಗೂ ಹೆಚ್ಚು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಪೊಲೀಸರು, ವಾಹನ ಸಂಚಾರ ತಡೆದು ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು.
ಕಲಘಟಗಿ:
ಚಾಲಕನ ನಿಯಂತ್ರಣ ತಪ್ಪಿ ಉರುಳು ಬಿದ್ದಿ ಪೆಟ್ರೋಲ್ ತುಂಬಿದ ಲಾರಿಯಿಂದ ಅಪಾರ ಪ್ರಮಾಣದ ಪೆಟ್ರೋಲ್ ಸೋರಿಕೆಯಾಗಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮಧ್ಯಾಹ್ನ ಸಂಭವಿಸಿದೆ. ಇದರಿಂದ ಹಲವು ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಸಾಗುತ್ತಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಎದುರು ಜಾನುವಾರುಗಳು ಬಂದಿವೆ. ಅವುಗಳನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗುಂಡಿಗೆ ಟ್ಯಾಂಕರ್ ಉರುಳಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಪೆಟ್ರೋಲ್ ಸೋರಿಕೆಯಾಗಿದೆ.
ಸಂಚಾರಕ್ಕೆ ತೊಂದರೆ:ಪೆಟ್ರೋಲ್ ಸೋರಿಕೆ ಆಗಿದ್ದರಿಂದ ಒಂದು ತಾಸಿಗೂ ಹೆಚ್ಚು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಪೊಲೀಸರು, ವಾಹನ ಸಂಚಾರ ತಡೆದು ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೆಟ್ರೋಲ್ ಸೋರಿಕೆ ಆದಲ್ಲಿ ನೀರು ಹರಿಸಿ ಅಗ್ನಿ ಕಿಡಿ ಎಳದಂತೆ ತಡೆಯುವಲ್ಲಿ ಯಶಸ್ವಿಯಾದರು.
ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್ಐ ಬಸವರಾಜ ಯದ್ದಲಗುಡ್ಡ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಕಾಂತ ಬಂಡಾರಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಅಶೋಕ ವಡ್ಡರ, ಅಗ್ನಿಶಾಮಕರಾದ ಆನಂದ ಮುದಿಯಣ್ಣವರ, ಅಶೋಕ ಲಮಾಣಿ, ಉಮೇಶ ತಂಬದ, ಹನುಮಂತಸಿಂಗ್ ರಜಪೂತ, ಸಂತೋಷ ಉಗ್ನಿಕೇರಿ, ಸಿದ್ಧಿಕ್ ಬಾಷಾ, ನಾಗರಾಜ ಪಾತ್ರೋಟ ಇದ್ದರು.