315 ಟ್ಯಾಂಕರ್‌ ಬಾಡಿಗೆಗೆ ಲಭ್ಯ

| Published : Mar 07 2024, 01:52 AM IST

ಸಾರಾಂಶ

ಬೆಂಗಳೂರು ಜಲ ಮಂಡಳಿಗೆ ನೀರಿನ ಟ್ಯಾಂಕರ್‌ ಬಾಡಿಗೆಗೆ ನೀಡಲು ಮಾಲಿಕರು ಒಪ್ಪಿಗೆ ನೀಡಿದ್ದಾರೆ. ಇದರಿಂದ ನೀರು ಪೂರೈಕೆ ಸರಾಗ ಆಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಬುಧವಾರದವರೆಗೆ ನೀರು ಪೂರೈಕೆ ಮಾಡುವ 966 ಟ್ಯಾಂಕರ್‌ ಮಾಲೀಕರು ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೇವಲ 315 ಟ್ಯಾಂಕರ್‌ ಮಾಲೀಕರು ಮಾತ್ರ ಪಾಲಿಕೆಗೆ ಟ್ಯಾಂಕರ್‌ಗಳನ್ನು ಬಾಡಿಗೆಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ನೀರು ಪೂರೈಕೆ ಮಾಡುವ ಟ್ಯಾಂಕರ್‌ ಮಾಲೀಕರು ಸ್ವಯಂ ನೋಂದಣಿಗೆ ಮಾ.1ರಿಂದ 7ರ ವರೆಗೆ ಬಿಬಿಎಂಪಿ ಆನ್‌ ಲೈನ್‌ ವ್ಯವಸ್ಥೆ ಕಲ್ಪಿಸಿದೆ. ಬುಧವಾರವರೆಗೆ ಒಟ್ಟು 73.72 ಲಕ್ಷ ಲೀಟರ್‌ ನೀರು ಪೂರೈಕೆಯ ವಿವಿಧ ಗಾತ್ರದ 966 ಟ್ಯಾಂಕರ್‌ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 23.38 ಲಕ್ಷ ಲೀಟರ್‌ ವಿವಿಧ ಸಾಮರ್ಥ್ಯದ 315 ಟ್ಯಾಂಕರ್ ಮಾಲೀಕರು ಬಾಡಿಗೆ ಆಧಾರದಲ್ಲಿ ಟ್ಯಾಂಕರ್‌ ಬಾಡಿಗೆ ನೀಡಲು ಒಪ್ಪಿದ್ದಾರೆ. 50.34 ಲಕ್ಷ ಲೀಟರ್‌ ನೀರಿನ ವಿವಿಧ ಸಾಮರ್ಥ್ಯದ 651 ಟ್ಯಾಂಕರ್‌ ಮಾಲೀಕರು ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಇಂದು ನೋಂದಣಿಗೆ ಕಡೆಯ ದಿನ

ಗುರುವಾರ ಸಂಜೆವರೆಗೆ ನೋಂದಣಿಗೆ ಅವಕಾಶ ಇದೆ. ಬಿಬಿಎಂಪಿಯ https://bbmp.oasisweb.in/TankerManagement/SelfRegistration.aspx ಪೋರ್ಟಲ್‌ನಲ್ಲಿ ತಮ್ಮ ಹೆಸರು, ವಿಳಾಸ, ವಲಯ, ಪಿನ್ ಕೋಡ್, ಮೊಬೈಲ್ ಸಂಖ್ಯೆ, ಟ್ಯಾಂಕರ್ ವಾಹನದ ಸಂಖ್ಯೆ, ಟ್ಯಾಂಕರ್ ಸಾಮರ್ಥ್ಯ, ಚಾಲಕನ ಹೆಸರು, ಚಾಲಕನ ಡ್ರೈವಿಂಗ್ ಲೈಸನ್ಸ್ ಮಾಹಿತಿಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು. ತಕ್ಷಣ ಆನ್‌ಲೈನ್‌ನಲ್ಲಿಯೇ ಪ್ರಮಾಣ ಪತ್ರ ಸಿಗುತ್ತದೆ. ಪ್ರಮಾಣ ಪತ್ರದ ಪ್ರತಿಯನ್ನು ಟ್ಯಾಂಕರ್‌ ವಾಹನ ಚಾಲಕ ಬಳಿ ಇಟ್ಟುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ಯಾರೇ ಎನ್ನದ ಮಾಲೀಕರು

ನಗರದಲ್ಲಿ ಸುಮಾರು 3500ಕ್ಕೂ ಅಧಿಕ ಟ್ಯಾಂಕರ್‌ಗಳಿದ್ದು, ಎಲ್ಲ ಟ್ಯಾಂಕರ್‌ ಮಾಲೀಕರು ನೋಂದಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದ್ದರೂ ಬಹುತೇಕ ಟ್ಯಾಂಕರ್‌ ಮಾಲೀಕರು ನೋಂದಣಿ ಮಾಡಿಕೊಂಡಿಲ್ಲ.ಬಾಕ್ಸ್‌ನೋಂದಣಿಯಾದ ಟ್ಯಾಂಕರ್ ವಿವರ(ಬುಧವಾರ)ವಲಯಟ್ಯಾಂಕರ್‌ ನೊಂದಣಿ ಸಂಖ್ಯೆಬಾಡಿಗೆ ನೀಡಲು ಒಪ್ಪಿಗೆಬಾಡಿಗೆ ನೀಡಲ್ಲ

ಬೊಮ್ಮನಹಳ್ಳಿ772354ದಾಸರಹಳ್ಳಿ60 4 56ಪೂರ್ವ248121127ಮಹದೇವಪುರ17836142

ಆರ್‌ಆರ್‌ನಗರ48840ದಕ್ಷಿಣ24792155ಪಶ್ಚಿಮ431726ಯಲಹಂಕ651451ಒಟ್ಟು966315651