ಮಾಲೀಕರೇ ನಾಯಿ ಮಲ ತೆಗೆವ ನಿಯಮ ಅನುಷ್ಠಾನಕ್ಕೆ ಅರಿವು

| Published : Mar 25 2024, 01:49 AM IST

ಸಾರಾಂಶ

ರಾಜಧಾನಿಯ ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ನಾಯಿಯನ್ನು ವಾಕಿಂಗ್‌ ಕರೆದೊಯ್ಯುವಾಗ ನಾಯಿ ಮಲವಿಸರ್ಜನೆ ಮಾಡಿದರೆ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ನಿಯಮವಿದ್ದು, ಈ ಬಗ್ಗೆ ಶ್ವಾನಗಳ ಮಾಲೀಕರಿಗೆ ವ್ಯಾಪಕ ಅರಿವು ಮೂಡಿಸಲು ಬಿಬಿಎಂಪಿ ಪಶುಸಂಗೋಪನಾ ವಿಭಾಗ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿಯ ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ನಾಯಿಯನ್ನು ವಾಕಿಂಗ್‌ ಕರೆದೊಯ್ಯುವಾಗ ನಾಯಿ ಮಲವಿಸರ್ಜನೆ ಮಾಡಿದರೆ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ನಿಯಮವಿದ್ದು, ಈ ಬಗ್ಗೆ ಶ್ವಾನಗಳ ಮಾಲೀಕರಿಗೆ ವ್ಯಾಪಕ ಅರಿವು ಮೂಡಿಸಲು ಬಿಬಿಎಂಪಿ ಪಶುಸಂಗೋಪನಾ ವಿಭಾಗ ಮುಂದಾಗಿದೆ.

ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ಎಲ್ಲೆಂದರಲ್ಲಿ ನಾಯಿ ತ್ಯಾಜ್ಯ ಹೆಚ್ಚಾದ ಕಾರಣ ಮನುಷ್ಯರ ಆರೋಗ್ಯದ ದೃಷ್ಟಿಯಿಂದ ಈ ನಿಯಮವನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ನಾಯಿಗಳನ್ನು ವಾಕಿಂಗ್‌ಗೆ ಕರೆತರುವಾಗ ಜೊತೆಯಲ್ಲಿ ಬ್ಯಾಗ್‌ ಸಹ ತರಬೇಕು. ನಾಯಿ ಮಲವಿಸರ್ಜನೆ ಮಾಡಿದರೆ ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂದು ಅರಿವು ಮೂಡಿಸಲು ಈಗಾಗಲೇ ಬಿಬಿಎಂಪಿಯಿಂದ ಹಲವೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಷ್ಟು ದಿವಸ ಈ ನಿಯಮವನ್ನು ಕಬ್ಬನ್‌ ಪಾರ್ಕ್‌ನಲ್ಲಿ ಮಾತ್ರ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ನಾಗರಿಕರು ಮತ್ತು ಇತರ ಪ್ರಾಣಿಗಳ ಆರೋಗ್ಯದ ಹಿತದೃಷ್ಟಿಯಿಂದಾಗಿ ನಗರದ ಶ್ವಾನಗಳ ಮಾಲೀಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮುಂದಾಗಿದೆ.