ಸಾರಾಂಶ
ಸಸ್ಯಗಳ ಸಂರಕ್ಷಣೆ ಮಾಡುವುದರಿಂದ ಆಮ್ಲಜನಕದ ಕೊರತೆ ನೀಗಿಸಲು ಸಾಧ್ಯ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ಉಪನ್ಯಾಸಕ ಪ್ರೊ. ಕೆ.ಎಂ. ಮರಡಿ ಬಣಕಾರ ಹೇಳಿದರು.
ರಾಣಿಬೆನ್ನೂರು: ಸಸ್ಯಗಳ ಸಂರಕ್ಷಣೆ ಮಾಡುವುದರಿಂದ ಆಮ್ಲಜನಕದ ಕೊರತೆ ನೀಗಿಸಲು ಸಾಧ್ಯ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ಉಪನ್ಯಾಸಕ ಪ್ರೊ. ಕೆ.ಎಂ. ಮರಡಿ ಬಣಕಾರ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಸಸ್ಯಗಳನ್ನು ಬೆಳೆಸಿ ಪರಿಸರದ ಮಾಲಿನ್ಯ ಸರಿದೂಗಿಸಲು ಸಹಕರಿಸಬೇಕು ಹಾಗೂ ಸಮಾಜದಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಂ.ಎನ್. ಸೂರಣಗಿ, ಸಂಗೀತಾ ಸಾಲಗೇರಿ, ಗೌರಿ, ನೇತ್ರಾ ಮಲಗೌಡ್ರ, ಅಶ್ವಿನಿ ಹಾದಿಮನಿ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.