ಸಾರಾಂಶ
ಚಿಕ್ಕಮಗಳೂರು: ವಿಷಯುಕ್ತ ಆಹಾರದ ಜೊತೆಗೆ ಉಸಿರಾಟದ ಆಮ್ಲಜನಕವೂ ವಿಷಾನಿಲವಾಗಿ ಪರಿಣಾಮಿಸಿ, ಮಾನವ ಸಂಕುಲ ಹೃದ್ರೋಗ ಹಾಗೂ ಮಾರಕ ಕಾಯಿಲೆಗಳಿಗೆ ತುತ್ತಾಗಿ ಸರ್ವ ನಾಶ ದತ್ತ ಹೆಜ್ಜೆಹಾಕುತ್ತಿವೆ ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಸುಂದರಗೌಡ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ತೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಹಾಗೂ ಗ್ರಾ.ಪಂ. ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಪ್ಲಾಸ್ಟಿಕ್ ಮುಕ್ತ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಸಸಿ ನೆಟ್ಟು ಶುಕ್ರವಾರ ಮಾತನಾಡಿದರು.ಪ್ರಪಂಚದಲ್ಲಿ ಪ್ಲಾಸ್ಟಿಕ್ ಸುಡುವುದು ಹಾಗೂ ಕಾಡ್ಗಿಚ್ಚಿನಿಂದ ೩೫೦ ಕೋಟಿ ಟನ್‌ನಷ್ಟು ವಿಷಅನಿಲ ಹೊರ ಸೂಸಿ ಜೀವ ಸಂಕುಲಕ್ಕೆ ಸ್ವಚ್ಚಂದ ಆಮ್ಲಜನಕ ಸಿಗುತ್ತಿಲ್ಲ. ಸ್ವರ್ಗದಂತ ಭೂಮಿಯಲ್ಲಿ ಕಾರ್ಖಾನೆಗಳ ವಿಷಾನಿಲಯ, ಪ್ಲಾಸ್ಟಿಕ್ ಸುಡುವುದ ರಿಂದ ಮನುಷ್ಯ ಅಲ್ಪಾಯುಷ್ಯಿನಲ್ಲೇ ಹೃದಯಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.ಹಬ್ಬ-ಹರಿದಿನಗಳಲ್ಲಿ ಮಾನವರು ರಸವನ್ನು ಕಸವನ್ನಾಗಿ ಮಾರ್ಪಾಡಿಸಿ ಪರಿಸರ ಕಲುಷಿತಗೊಳಿ ಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ನಾವುಗಳು ಕಸದಿಂದ ರಸ ತಯಾರಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡಿದೆ ಹಾಗೂ ಸ್ವಚ್ಚಂಧ ಆಮ್ಲಜನಕ ಉತ್ಪಾದಿಸಲು ಎಲ್ಲೆಡೆ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.ಹಂತ ಹಂತವಾಗಿ ಪರಿಸರ ಕೈಜಾರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ವಾಗುತ್ತಿವೆ. ವೃದ್ಧರ ಕಣ್ಮಂದೆ ಮಕ್ಕಳು, ಮೊಮ್ಮಕ್ಕಳು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವೀಡಾಗುತ್ತಿದ್ದಾರೆ. ಹೀಗಾಗಿ ಪ್ರತಿ ಯೊಬ್ಬರು ಜವಾಬ್ದಾರಿ ಹೊತ್ತು ನಮ್ಮ ಭೂಮಿ, ನಮ್ಮ ರಕ್ಷಣೆ ಎಂಬ ಧ್ಯೇಯ ದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ತೇಗೂರು ಗ್ರಾ.ಪಂ. ಅಧ್ಯಕ್ಷೆ ರಾಧಾ ಮಾತನಾಡಿ ಭವಿಷ್ಯದಲ್ಲಿ ನಾಡನ್ನು ಸೌಗಂಧ ಭರಿತವಾಗಿ ಉಳಿಸುವ ನಿಟ್ಟಿನಲ್ಲಿ ಮಾನವ ಇಂದಿನಿಂದಲೇ ಸಸಿಗಳನ್ನು ನೆಡಬೇಕು. ಅಲ್ಲದೇ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಪರಿಸರಕ್ಕೆ ಪೂರಕ ಕಾರ್ಯಕ್ರಮ ಹಮ್ಮಿಕೊಂಡರೆ ಯುವಪೀಳಿಗೆಗೆ ಆಸರೆ ಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಜಯಶ್ರೀ, ನಾರಾಯಣ್, ವೇಣುಗೋಪಾಲ್, ಮಹೇಶ್ ಕುಮಾರ್, ಗಣೇಶರಾಜು, ಮನುಜ, ಪವನ್, ಬೀಬಿಜಾನ್, ಸುಧಾ, ದೇ ವಮ್ಮ, ರಂಗನಾಥ್, ಶಿವಪ್ರಸಾದ್, ಸ್ವಾಗತಿ, ಶೇಖರ್, ಪಿಡಿಓ ಮತ್ತಿತರರು ಉಪಸ್ಥಿತರಿದ್ದರು.