ಆಕ್ಸಿಜನ್ ದುರಂತ: ವಿದ್ಯಾರ್ಹತೆಗೆ ತಕ್ಕಂತೆ ಖಾಯಂ ಉದ್ಯೋಗ ನೀಡಿ

| Published : Feb 01 2024, 02:00 AM IST

ಆಕ್ಸಿಜನ್ ದುರಂತ: ವಿದ್ಯಾರ್ಹತೆಗೆ ತಕ್ಕಂತೆ ಖಾಯಂ ಉದ್ಯೋಗ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ೩೨ ಜನರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರ ಫೆ.೧ ರಿಂದ ನೀಡಿರುವ ಗುತ್ತಿಗೆ ಆಧಾರದ ಮೇಲಿನ ಉದ್ಯೋಗಗಳ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಂತ್ರಸ್ಥ ಕುಟುಂಬದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

ಕನ್ನಡಪ್ರಭ ವಾರ್ತೆ ಚಾಮರಾಜನಗರಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ೩೬ ಕುಟುಂಬಗಳ ಸದಸ್ಯರಿಗೆ ಸರ್ಕಾರ ಈಗ ೩೨ ಕುಟುಂಬಗಳ ಸದಸ್ಯರೊಬ್ಬರಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಿದೆ. ಅದು ಹೆಚ್ಚಾಗಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಅಡಿಗೆಯವರು ಮತ್ತು ಅಡುಗೆ ಸಹಾಯಕರು. ಇದು ನಮಗೆ ಬೇಡ, ನಮಗೆ ಸ್ಪಷ್ಟತೆ ಬೇಕು, ವಿದ್ಯಾರ್ಹತೆಗೆ ತಕ್ಕಂತೆ ಖಾಯಂ ಉದ್ಯೋಗಬೇಕು, ಪರಿಹಾರ ವಿತರಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ೩೨ ಜನರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರ ಫೆ.೧ ರಿಂದ ನೀಡಿರುವ ಗುತ್ತಿಗೆ ಆಧಾರದ ಮೇಲಿನ ಉದ್ಯೋಗಗಳ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಂತ್ರಸ್ಥ ಕುಟುಂಬದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಜ.೨೬ರ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ, ಫೆ.೧ ರಿಂದ ಸಂತ್ರಸ್ಥ ೩೨ ಕುಟುಂಬಗಳ ಸದಸ್ಯರೊಬ್ಬರಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗುವುದು ಎಂದು ಬಹಿರಂಗ ಹೇಳಿಕೆ ನೀಡಿದ್ದು ಸ್ವಾಗಾತರ್ಹ, ನಂತರ ಜಿಲ್ಲಾಡಳಿತ ನಿನ್ನೆಯಿಂದ ದೂರವಾಣಿ ಕರೆ ಮಾಡಿ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಸತಿ ನಿಲಯಗಳಲ್ಲಿ ಅಡಿಗೆಯವರು ಮತ್ತು ಅಡುಗೆ ಸಹಾಯಕರ ಹುದ್ದೆಗಳು ಖಾಲಿಯಿದ್ದು ಹೋಗುವಂತೆ ತಿಳಿಸಿದ್ದಾರೆ.

ಆದರೆ ಇದು ತಾತ್ಕಾಲಿಕ ನಮಗೆ ಖಾಯಂ ಉದ್ಯೋಗದ ಭರವಸೆ ಬೇಕು, ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೇಳಿದಂತೆ ಖಾಯಂ ಸರ್ಕಾರಿ ಉದ್ಯೋಗವನ್ನು ವಿದ್ಯಾರ್ಹತೆಗೆ ತಕ್ಕಂತೆ ನೀಡಬೇಕು, ಘಟನೆಗೆ ಕಾರಣರಾದವರ ಮೇಲೆ ಇಲ್ಲಿಯವರೆಗೂ ಯಾವುದೇ ಕ್ರಮ ಆಗಿಲ್ಲ, ತಕ್ಷಣ ಆಗಬೇಕು, ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕೈ ಬಿಟ್ಟಿರುವ ಇನ್ನು ನಾಲ್ಕು ಕುಟುಂಬಗಳ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಹಾರ್ ಮಾತನಾಡಿ ದುರಂತ ನಡೆದ ದಿನದಿಂದ ಇಲ್ಲಿಯವರೆಗೂ ನಿಮ್ಮ ಜೊತೆಯಲ್ಲಿದ್ದೇವೆ. ಒಳ್ಳೆಯ ಅಂತ್ಯ ಆಗುವವರೆಗೂ ನಾವು ನಿಮ್ಮ ಜೊತೆಯಲ್ಲೇ ಇರುತ್ತೇವೆ, ಇದಕ್ಕ ಸಂಬಂಧಪಟ್ಟಂತೆ ಅಪರ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಮುಂದಿನ ನಡೆ ಬಗ್ಗೆ ತೀರ್ಮಾನಿಸೋಣ ಎಂದರು. ಎಲ್ಲರೂ ಒಟ್ಟಾಗಿ ಇದ್ದು, ಸಮಸ್ಯೆಯನ್ನು ಬಗೆಹರಿಸೋಣ ಎಂದಾಗ ಇದಕ್ಕೆ ಎಲ್ಲರು ಒಪ್ಪಿಗೆ ನೀಡಿದರು.ಸಭೆಯಲ್ಲಿ ಎಸ್‌ಡಿಪಿಐ ಮಹೇಶ್, ಖಲೀಲಾವುಲ್ಲಾ ಸಂತ್ರಸ್ತರಾದ ಸವಿತಾ, ಕವಿತಾ, ಸುಶೀಲ, ಶ್ವೇತಾ, ಲಕ್ಷ್ಮೀ, ರವಿ, ಸಂತೋಷ್, ಮಹದೇವಸ್ವಾಮಿ, ಸುನಿಲ್ ಇತರರು ಇದ್ದರು.