ಸಾರಾಂಶ
ನಾಡೋಜ ಡಾ.ಮಹೇಶ ಜೋಶಿ ಅವರನ್ನು ಕಸಾಪ ಅಧ್ಯಕ್ಷರ ಚುನಾವಣೆ ಸಂಬಂಧಿಸಿದ ನಿಬಂಧನೆಗಳ ತಿದ್ದುಪಡಿ ಸಲಹಾ ಉಪ ಸಮಿತಿ ಸಭೆಯ ಸದಸ್ಯ ಪಿ.ಆನಂದ್ ಅಭಿನಂದಿಸಿದರು.
ಗುಂಡ್ಲುಪೇಟೆ: ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಎಂ.ಪುಟ್ಟರಂಗನಾಯಕ್ ಅವರ ಪುತ್ರ ಪಿ.ಆನಂದ್ ಕಸಾಪ ಅಧ್ಯಕ್ಷರ ಚುನಾವಣೆ ಸಂಬಂಧಿಸಿದ ನಿಬಂಧನೆಗಳ ತಿದ್ದುಪಡಿ ಸಲಹಾ ಉಪ ಸಮಿತಿ ಸಭೆಯ ಸದಸ್ಯರಾಗಿ ನೇಮಕಗೊಂಡಿದ್ದಾರೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದರು.
ಮಾ.1 ರಂದು ಬೆಂಗಳೂರು ಚಾಮರಾಜಪೇಟೆ ಕೇಂದ್ರ ಕಸಾಪ ಅಧ್ಯಕ್ಷ ಕಚೇರಿ ಆವರಣದ ಪಂಪ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳ ತಿದ್ದುಪಡಿ ಸಲಹಾ ಉಪ ಸಮಿತಿಯ ಮೊದಲ ಸಭೆಯಲ್ಲಿ ಭಾಗವಹಿಸಿ ಸಕ್ತ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ನಾಡೋಜ ಡಾ.ಮಹೇಶ ಜೋಶಿ ಕೋರಿದ್ದಾರೆ.ಉಪ ಸಮಿತಿ ವಿವಿರ:
ನಿಬಂಧನೆ ತಿದ್ದುಪಡಿ ಸಲಹಾ ಸಮಿತಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪುರೆ, ಸಮಿತಿ ಸದಸ್ಯರಾಗಿ ನಿವೃತ್ತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಬಿ.ಶಿವಲಿಂಗೇಗೌಡ, ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ, ನಿವೃತ್ತ ಸಹಕಾರ ಸಂಘಗಳ ಪರ ನಿಬಂಧಕರಾದ ಎಚ್.ಎಸ್.ನಾಗರಾಜಯ್ಯ, ಅಶ್ವತ್ಥಯ್ಯ, ವಕೀಲ ಪಿ.ಆನಂದ್, ಹಾಸನ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ತುಮಕೂರು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕಸಾಪ ಪರಿಶಿಷ್ಠ ಜಾತಿ ಪ್ರತಿನಿಧಿ ಎಲ್.ಕೃಷ್ಣಮೂರ್ತಿ, ಹಿಂದುಳಿದ ವರ್ಗದ ಪ್ರತಿನಿಧಿ ಸುನೀಲ್ ಹೆಳವರ, ಕಸಾಪ ಮಹಿಳಾ ಪ್ರತಿನಿಧಿ ಶ್ರೀರಂಜಿನಿ,ವಿಶೇಷ ಆಹ್ವಾನಿತರಾಗಿ ಕಸಾಪ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ಎನ್ಸಾಫ್ಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಸುಬ್ರಹ್ಮಣ್ಯ, ಕಸಾಪ ಬೆಂಗಳೂರು ಸಂಚಾಲಕ ಡಾ.ಡಿ.ಕೆ.ನಟರಾಜ್, ಎನ್.ಕೇಶವಮೂರ್ತಿ ನೇಮಕಗೊಂಡಿದ್ದಾರೆ.