ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ 2ನೇ ದಿನ ಇಂದು ವಿಧಾನ ಪರಿಷತ್ ಕಾರ್ಯಕಲಾಪದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ನೇಕಾರರು ಅನುಭವಿಸುತ್ತಿರುವ ಬವಣೆಗಳ ಕುರಿತು ಧ್ವನಿ ಎತ್ತಿದರು.
ಸುವರ್ಣ ವಿಧಾನಸೌಧ ಬೆಳಗಾವಿ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ 2ನೇ ದಿನ ಇಂದು ವಿಧಾನ ಪರಿಷತ್ ಕಾರ್ಯಕಲಾಪದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ನೇಕಾರರು ಅನುಭವಿಸುತ್ತಿರುವ ಬವಣೆಗಳ ಕುರಿತು ಧ್ವನಿ ಎತ್ತಿದರು.ಸರ್ಕಾರದ ದ್ವಂದ್ವ ನೀತಿ ಹಾಗೂ ಗೊಂದಲಮಯ ಯೋಜನೆಗಳಿಂದಾಗಿ ನೇಕಾರಿಕೆಯನ್ನೇ ಜೀವಾಳವಾಗಿ ಬದುಕುತ್ತಿರುವವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಜಗತ್ತಿಗೆ ಮಾನ ಮುಚ್ಚುವ ನೇಕಾರರ ಬದುಕು ಬೀದಿಗೆ ಬರುತ್ತಿದೆ. ಮಾರುಕಟ್ಟೆ ಏರಿಳಿತ ತೆರಿಗೆ ಭಾರ, ಸರ್ಕಾರದ ಉದಾಸೀನ ಮನೋಭಾವ ಹೀಗೆ ಹತ್ತಾರು ಸಮಸ್ಯೆಗಳಿಂದ ಬಸವಳಿದಿದ್ದು, ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಸುಮಾರು ₹10 ಲಕ್ಷ ನೇಕಾರರ ಕುಟುಂಬಗಳ ಬದುಕು ಅತಂತ್ರವಾಗಿದೆ.
ಸರ್ಕಾರದಿಂದ ವಿದ್ಯುತ್ ಮಗ್ಗಗಳು ಹಾಗೂ ಕೈಮಗ್ಗ ನೇಕಾರರ ಮಧ್ಯೆ ತಾರತಮ್ಮ ಧೋರಣೆ ಇರುವುದನ್ನು ಸರ್ಕಾರದ ಗಮನಕ್ಕೆ ತಂದ ಪಿ.ಎಚ್. ಪೂಜಾರಿ, ಮೊದಲು ವಿದ್ಯುತ್ ಮಗ್ಗಗಳಿಂದ ವಿದ್ಯಾ ವಿಕಾಸ ಯೋಜನೆಗೆ 50 ರಿಂದ 60 ಲಕ್ಷ ಮೀಟರ್ ಬಟ್ಟೆ ಪಡೆಯುತ್ತಿದ್ದರು, ನಂತರ ಅದನ್ನು 10 ಲಕ್ಷ ಮೀಟರ್ ಗೆ ಇಳಿಸಿರುವುದು ವಿಪರ್ಯಾಸ. ಕಳೆದ 3 ವರ್ಷಗಳಿಂದ ಈ ಯೋಜನೆಯನ್ನೇ ಸ್ಥಗಿತಗೊಳಿಸಲಾಗಿದೆ.ನನೆಗುದಿಗೆ ಬಿದ್ದ ಜವಳಿ ಪಾರ್ಕ್ ಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಹಾಗೂ ನೇಕಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ನೇಕಾರರು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಆರ್ಥಿಕ ಪರಿಹಾರ ನೀಡಿ, ನೇಕಾರ ಕುಟುಂಬಗಳಿಗೆ ಧೈರ್ಯ ತುಂಬಬೇಕಿದೆ. ಆದ್ದರಿಂದ ರಾಜ್ಯದ ನೇಕಾರರ ಬದುಕಿನ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ನೇಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.