ಸಾರಾಂಶ
ನೆಲಜಿ ಗ್ರಾಮದ ದವಸ ಭಂಡಾರದ ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ಸಹಕಾರ ದವಸ ಭಂಡಾರದ (ನಂ.94ನೇ) ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಾಳೆಯಡ ಪಿ ರಾಜ ಕುಂಞಪ್ಪ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಬದಂಜೆಟ್ಟಿರ ಬಿ. ದೇವಿ ದೇವಯ್ಯ, ಕಾರ್ಯದರ್ಶಿಯಾಗಿ ಮಾಳೆಯಂಡ ಸಿ. ಈರಪ್ಪ ಆಗಿದ್ದಾರೆ. ನಿರ್ದೇಶಕರಾಗಿ ಅಪ್ಪುಮಣಿಯಂಡ ಎಂ.ನವೀನ ಉತ್ತಯ್ಯ, ಚೀಯಕಪೂವಂಡ ಎಂ.ತಮ್ಮನಿ ಅಪ್ಪಚ್ಚು, ಕೋಟೆರ ಎಂ ಪ್ರಸಾದ್ ಜೋಯಪ್ಪ, ಚೀಯಕಪೂವಂಡ ಸುಜಾ ಪೆಮ್ಮಯ್ಯ, ಕೈಬುಲಿರ ಎಸ್. ಉಮೇಶ್ ಉತ್ತಪ್ಪ, ಮಡಿವಾಳರ ಬಿ. ಬೆಳ್ಳಿಯಪ್ಪ, ಕೈಬುಲಿರ ಜಿ .ಭಾರತಿ, ಚೀಯಕಪೂವಂಡ ಎ. ಚಂಪ ಸೀತವ್ವ ಆಯ್ಕೆಯಾಗಿದ್ದಾರೆ. ಸಂಘದ ಚುನಾವಣಾ ಅಧಿಕಾರಿಯಾಗಿ ಪ್ರದೀಪ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಜರುಗಿತು.