ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆ ಎಸ್. ಸುನಿಲ್ ನೇತೃತ್ವದ ತಂಡ 12 ಕ್ಕೆ 12 ಸ್ಥಾನವನ್ನೂ ತನ್ನದಾಗಿಸಿಕೊಂಡು ಹೊಸ ಇತಿಹಾಸ ಸೃಷ್ಠಿಸಿದೆ.
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆ ಎಸ್. ಸುನಿಲ್ ನೇತೃತ್ವದ ತಂಡ 12 ಕ್ಕೆ 12 ಸ್ಥಾನವನ್ನೂ ತನ್ನದಾಗಿಸಿಕೊಂಡು ಹೊಸ ಇತಿಹಾಸ ಸೃಷ್ಠಿಸಿದೆ. ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸ್ತುತ ಸಾಲಿನ ಆಡಳಿತ ಮಂಡಳಿಯ ಚುನಾವಣೆಯು ನ.30 ರ ಭಾನುವಾರದಂದು ಮಾಯಸಂದ್ರದ ಸರ್ಕಾರಿ ಶಾಲೆಯಲ್ಲಿ ನಡೆಯಿತು.ಒಟ್ಟು 1983 ಮತದಾರರ ಪೈಕಿ 1650 ಮಂದಿ ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸಿದರು. ಶೇಕಡ 85 ರಷ್ಟು ಮತದಾನ ನಡೆಯಿತು. ಚುನಾವಣಾ ಕಣದಲ್ಲಿ 23 ಮಂದಿ ಸ್ಪರ್ಧಿಸಿದ್ದರು. ಜೆ.ಎಸ್. ಸುನಿಲ್ ಕುಮಾರ್ ನೇತೃತ್ವದ ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ 11 ಮಂದಿ ಸ್ಪರ್ಧಿಗಳು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಓರ್ವ ಸೇರಿದಂತೆ ಒಟ್ಟಾರೆ 12 ಮಂದಿ ಚುನಾಯಿತರು ಗೆಲುವು ಸಾಧಿಸುವ ಮೂಲಕ ಇತಿಹಾಸ ದಾಖಲಿಸಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದವರು - ಅಶೋಕ್ ಕುಮಾರ್ ಡಿ.ಎಸ್. (ಸಾ) ಢಣನಾಯಕನಪುರ 855 ಮತಗಳು. ಗಿಡ್ಡಯ್ಯ ಕೆ.ಎಂ. (ಬಿಸಿಎಂ) ಎ. ಮಾಯಸಂದ್ರ 940 ಮತಗಳು. ನಂದಿನಿ ಮಂಜುನಾಥ್ (ಮಹಿಳಾ ಮೀಸಲು) ಮಾಯಸಂದ್ರ 862 ಮತಗಳು. ಪದ್ಮ ಎಸ್. ಕೆ. (ಮಹಿಳಾ ಮೀಸಲು) ಜಡೆಯ 838 ಮತಗಳು. ಬಾಲರಾಜು ಕೆ ಆರ್ (ಸಾ) ಕಲ್ಲುನಾಗತಿಹಳ್ಳಿ 789 ಮತಗಳು. ಯೋಗೇಶ್ ಎಚ್.ಟಿ. (ಬಿಸಿಎಂ) ಬಿ ಹೊಣಕೆರೆ 863 ಮತಗಳು. ರಘು ಕೆ. (ಸಾ) ಟಿ.ಬಿ. ಕ್ರಾಸ್ 884 ಮತಗಳು. ರಂಗನಾಥ ಎಂ ಆರ್ (ಸಾ) ಮಾಯಸಂದ್ರ 878 ಮತಗಳು. ಲೋಕೇಶ್ ಎಂ.ಎಲ್. (ಪರಿಶಿಷ್ಟ ಜಾತಿ) ಮಾಯಸಂದ್ರ 911 ಮತಗಳು. ಶಿವರಾಜು ಎಮ್. ಎಸ್. (ಪರಿಶಿಷ್ಟ ಪಂಗಡ) ಮಾಯಸಂದ್ರ 747 ಮತಗಳು. ಸುನಿಲ್ ಜೆ ಎಸ್ (ಸಾ) ಜಡೆಯ 1011 ಮತಗಳನ್ನು ಗಳಿಸಿದರು. ಸಾಲಗಾರರಲ್ಲದ ಕ್ಷೇತ್ರದಿಂದ ಜನಾರ್ದನಪುರದ ವೆಂಕಟೇಶ್ ಜೆ.ಆರ್. 552 ಮತಗಳನ್ನು ಗಳಿಸಿದರು. ಜಯಭೇರಿ ಗಳಿಸಿದ ತಂಡದ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣಾ ಅಧಿಕಾರಿಗಳಾಗಿ ಸಿಡಿಓ ಡಿ.ಎಚ್. ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ಎಸೈ ಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾಯಸಂದ್ರ ಪ್ರಾಥಮಿಕ ಕೃಷಿ ಸಂಘದ ಸಿಇಒ ಮಮತಾ ಮತ್ತು ಸಿಬ್ಬಂದಿ ವರ್ಗದವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.