ತಾಲೂಕಿನ ಡಿ. ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಡಿ.ಪಿ.ರಾಜು ರವರ ಬಣ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಡಿ. ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಡಿ.ಪಿ.ರಾಜು ರವರ ಬಣ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9 ಮಂದಿ ಡಿ.ಪಿ.ರಾಜು ರವರ ತಂಡ ಗೆಲುವು ಸಾಧಿಸಿದೆ. ಸಾಲಗಾರರ ಕ್ಷೇತ್ರದಿಂದ ಒಟ್ಟು 22 ಮಂದಿ ಸ್ಪರ್ಧಿಸಿದ್ದರು. ಸಾಲಪಡೆಯದವರ ಕ್ಷೇತ್ರದಿಂದ ಪಾಂಡುರಂಗಯ್ಯ ಎಂಬುವವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಕಲ್ಕೆರೆಯ ನೂತನ ನಿರ್ದೇಶಕರಾಗಿ ಡಿ.ಪಿ ರಾಜು ಬಣದಿಂದ, ಡಿ.ಪಿ.ರಾಜು. ಕೆ.ವಿ.ದಂಡೇಗೌಡ, ರಾಮಲಿಂಗೇಗೌಡ, ವನಜ ರಾಜು, ಲಕ್ಷ್ಮಮ್ಮ, ಚಿಕ್ಕನಾಗಯ್ಯ, ಕೆ.ಸೋಮಶೇಖರ್, ಕೆ.ಎಚ್.ನಾಗರಾಜು, ನಂಜಪ್ಪ ಆಯ್ಕೆ ಆಗಿದ್ದಾರೆ. ವಿರೋಧಿ ತಂಡದಿಂದ ಎ.ಬಿ.ಉಮೇಶ್, ಕೆ.ವಿ.ಮೃತ್ಯುಂಜಯ, ಎನ್.ಪಾಂಡುರಂಗಯ್ಯ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು.