ಪಿಎಸಿಎಸ್ ನಲ್ಲಿ ಅವ್ಯವಹಾರ: ನಡೆಯದ ಚರ್ಚೆ

| Published : May 13 2025, 01:17 AM IST

ಸಾರಾಂಶ

ಪ್ರತಿವಾದಿಗಳು ಸಾಬೀತಿಗೆ ಉತ್ತರಿಸದೇ ಪಲಾಯನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸೀಗೇಹಳ್ಳಿ ಪಿಎಸಿಎಸ್ ನ ಮಾಜಿ ನಿರ್ದೇಶಕ ಹರಳಕೆರೆ ಪುಟ್ಟೇಗೌಡ ಕಿಡಿ

ತುರುವೇಕೆರೆ: ತಾಲೂಕಿನ ಸೀಗೇಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಗಿದೆ ಎನ್ನಲಾದ ಅವ್ಯವಹಾರಗಳ ಕುರಿತು ತಾವು ದಾಖಲೆ ಸಹಿತ ಸಾಬೀತು ಪಡಿಸಲು ಸಿದ್ಧವಿರುವಾಗ ಪ್ರತಿವಾದಿಗಳು ಸಾಬೀತಿಗೆ ಉತ್ತರಿಸದೇ ಪಲಾಯನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸೀಗೇಹಳ್ಳಿ ಪಿಎಸಿಎಸ್ ನ ಮಾಜಿ ನಿರ್ದೇಶಕ ಹರಳಕೆರೆ ಪುಟ್ಟೇಗೌಡ ಕಿಡಿಕಾರಿದ್ದಾರೆ.

ಶೆಟ್ಟಿಗೊಂಡನಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸೀಗೇಹಳ್ಳಿಯ ಸೊಸೈಟಿಯಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಠಾಚಾರವನ್ನು ಸಾಕ್ಷಿ ಸಹಿತ ಸಾಬೀತುಪಡಿಸಲು ಸೋಮವಾರ ಸಿದ್ಧವಿರುವುದಾಗಿ ತಾವು ಬಹಿರಂಗ ಹೇಳಿಕೆ ನೀಡಿದ್ದೆವು. ಈ ಸವಾಲನ್ನು ಸ್ವೀಕರಿಸಬೇಕಿತ್ತು. ಅಲ್ಲದೇ ಈ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂಬುದನ್ನು ಪ್ರತಿವಾದಿಗಳೂ ಸಹ ಸಾಬೀತುಪಡಿಸಬೇಕಿತ್ತು. ಆದರೆ ಈ ಬಹಿರಂಗ ಸವಾಲನ್ನು ಸ್ವೀಕರಿಸದೇ ಸೊಸೈಟಿ ಮುಂಭಾಗ ಯಾವುದೇ ವೇದಿಕೆ ಸೃಷ್ಠಿ ಮಾಡಬಾರದೆಂದು ಪೋಲಿಸ್ ಮೂಲಕ ಹೇಳಿಸಿ ಪಲಾಯನ ಮಾಡಿದ್ದಾರೆಂದು ಆಪಾದಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯ ಎಂ.ಬಿ. ಬೆಟ್ಟಸ್ವಾಮಿಗೌಡ , ಸದಸ್ಯರಾದ ಅಭಿಕುಮಾರ್, ಸಿ.ವಿ.ತಮ್ಮಯ್ಯ(ಗುಂಡಣ್ಣ), ತಿಮ್ಮೇಗೌಡ, ಸುರೇಶ್, ಮಗ್ಗನಪಾಳ್ಯದ ಎಂ.ಆರ್.ಕೃಷ್ಣ, ವೀರಭದ್ರಯ್ಯ, ಸಿದ್ದನಹಟ್ಟಿಯ ಶಿವರಾಜು, ಹಾಲೇಗೌಡ, ಗುಡ್ಡೇನಹಳ್ಳಿಯ ಗೋವಿಂದಯ್ಯ, ಮಲ್ಲೂರು ರಾಜಣ್ಣ, ಸೀಗೇಹಳ್ಳಿಯ ಕೃಷ್ಣಣ್ಣ ಉಪಸ್ಥಿತರಿದ್ದರು.