ಸಾರಾಂಶ
ಕರ್ನಾಟಕ ಪ್ರಾಂತ ರೈತ ಸಂಘ ಜೋಯಿಡಾ ತಾಲೂಕು ಸಮಿತಿಯಿಂದ ಗಡಿ ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಎರಡು ದಿನದ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.
ಜೋಯಿಡಾ:
ಕರ್ನಾಟಕ ಪ್ರಾಂತ ರೈತ ಸಂಘ ಜೋಯಿಡಾ ತಾಲೂಕು ಸಮಿತಿಯಿಂದ ಗಡಿ ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಎರಡು ದಿನದ ಪಾದಯಾತ್ರೆಗೆ ಕಾಳಿ ಉಗಮನಾಡು ಡಿಗ್ಗಿ ಗೌಳಾದೇವಿ ಸಭಾ ಭವನದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಭೂ ಸೂಧಾರಣಾ ಕಾಯ್ದೆ, ರೈತ ಚಳವಳಿ ಮಾಡಲಾಗಿದೆ. ಈ ಪಾದಯಾತ್ರೆ ಹೋರಾಟ ಅಧ್ಯಾಯ ಬರೆಯಲಿದೆ ಎಂದರು.ಸಿಸೈ ಗ್ರಾಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಪಾದಯಾತ್ರೆ ಪಕ್ಷಾತಿತವಾಗಿದೆ. ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಹೋರಾಟ ಮಾಡಲಾಗಿದೆ. ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಜಯಸಿಕ್ಕಿದೆ. ಇನ್ನು ಆಗಬೇಕಿದೆ. ಇವುಗಳಿಗಾಗಿ ಹೋರಾಟ ಅನಿವಾರ್ಯ. ಅನೇಕ ಹೋರಾಟಗಾರರ ಬೆಂಬಲವನ್ನು ನೆನಪಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಮನಾಥ ನಾಯ್ಕ ಮಾತನಾಡಿ, ಪಟ್ಟಣಗಳ ಅಭಿವೃದ್ಧಿ ಜತೆಯಲ್ಲಿ ಗ್ರಾಮಿಣ ಭಾಗದ ಅಭಿವೃದ್ಧಿ ಆಗಬೇಕು. ಹೋರಾಟ ಅಭಿವೃದ್ಧಿಗೆ ಪಾಠ ಕಲಿಸುತ್ತದೆ ಎಂದರು.ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಪ್ರೇಮಾನಂದ ವೆಳಿಪ, ಕಾರ್ಯದರ್ಶಿ ರಾಜೇಶ ಗಾವಡಾ, ವಾಸು ಮಿರಾಶಿ, ಶಂಕರ್ ಮಿರಾಶಿ, ದೇವಿದಾಸ ಮಿರಾಶಿ, ಸುಭಾಷ್ ಮಿರಾಶಿ, ದಿಗಂಬರ ದೇಸಾಯಿ, ರತ್ನಾಕರ್ ದೇಸಾಯಿ, ಸುಭಾಷ ಬೊಂಡೇಲಿ, ಖೇಮು ಮಿರಾಶಿ, ವಿಠೋಬಾ ಮಿರಾಶಿ, ಮಾದೇವ ಮಿರಾಶಿ, ಶಾಂತಾ ಮಿರಾಶಿ, ಪ್ರಕಾಶ್ ಮಿರಾಶಿ, ದತ್ತಾ ಮಿರಾಶಿ ಇದ್ದರು. ರಾಮನಗರ ಪೋಲಿಸರು ಸಹಕರಿಸಿದರು.