ಸಾರಾಂಶ
ಧರ್ಮ ಪ್ರಸರಣ ಸಮಿತಿ (ವಿಎಚ್‌ಪಿ) ವತಿಯಿಂದ ಶುಕ್ರವಾರ ನಗರದ ಜಾಲಿ ನಗರದಲ್ಲಿ ಸಾಧು ಸಂತರ ಪಾದಯಾತ್ರೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಪಾದಯಾತ್ರೆಯಲ್ಲಿ ಯರಗುಂಟೆಯ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಶ್ರೀ ಪರಮೇಶ್ವರ ಮಹಾಸ್ವಾಮಿಗಳು ಜಾಲಿ ನಗರದ ಬೀದಿಗಳಲ್ಲಿ ಪಾದಯಾತ್ರೆ ಮಾಡಿ 10 ಮನೆಗಳಲ್ಲಿ ಪಾದಪೂಜೆ ನೆರವೇರಿಸಿದರು.
ದಾವಣಗೆರೆ: ಧರ್ಮ ಪ್ರಸರಣ ಸಮಿತಿ (ವಿಎಚ್‌ಪಿ) ವತಿಯಿಂದ ಶುಕ್ರವಾರ ನಗರದ ಜಾಲಿ ನಗರದಲ್ಲಿ ಸಾಧು ಸಂತರ ಪಾದಯಾತ್ರೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಪಾದಯಾತ್ರೆಯಲ್ಲಿ ಯರಗುಂಟೆಯ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಶ್ರೀ ಪರಮೇಶ್ವರ ಮಹಾಸ್ವಾಮಿಗಳು ಜಾಲಿ ನಗರದ ಬೀದಿಗಳಲ್ಲಿ ಪಾದಯಾತ್ರೆ ಮಾಡಿ 10 ಮನೆಗಳಲ್ಲಿ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭ ಶ್ರೀಗಳು ''ಧರ್ಮ ಜಾಗೃತಿ ಮತ್ತು ಮತಾಂತರ ಪಿಡುಗುಗಳು'' ಕುರಿತು ಮಾತನಾಡಿ, ಹಿಂದೂ ಧರ್ಮದ ಭಕ್ತಾದಿಗಳಲ್ಲಿ ಜಾಗೃತಿ ಮೂಡಿಸಿದರು. ಧಾರ್ಮಿಕ ಮಾರ್ಗದಲ್ಲಿ ಪ್ರಾಮಾಣಿಕತೆ, ಸೇವೆ ಮನೋಭಾವ ಇದ್ದರೆ ಧರ್ಮ ಕಲ್ಯಾಣ ಮತ್ತು ಲೋಕಕಲ್ಯಾಣ ಸಾಧ್ಯ. ಧರ್ಮ ಮತ್ತು ಧರ್ಮವನ್ನು ಅನುಸರಿಸುವ ಭಕ್ತಾದಿಗಳು ಉಳಿದರೆ ಮಾತ್ರ ಮಠ ಮಂದಿರಗಳು ಉಳಿಯಲು ಸಾಧ್ಯ. ಈ ಕಾರಣದಿಂದ ಎಲ್ಲರೂ ಧರ್ಮ ಜಾಗೃತಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.ಜಿ.ರವೀಂದ್ರ ಮಾತನಾಡಿ, ಧರ್ಮ ಜಾಗೃತಿಗಾಗಿ ಸಮಾಜದ ಬಂಧುಗಳು ಸಮಯ ನೀಡಬೇಕು. ಇಲ್ಲದಿದ್ದಲ್ಲಿ ಹಿಂದೂ ಧರ್ಮದ ಅವನತಿ ಆಗುವಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರಾದ ಸಜ್ಜನ್ ವರ್ಣೇಕರ್, ಎಸ್.ಎಸ್. ಬಸವರಾಜ, ಜಿ. ರವೀಂದ್ರ, ಎಸ್‌ಒಜಿ ಹನುಮಂತಪ್ಪ, ಮೇದಾರ್ ಹುಲ್ಕಂಟಪ್ಪ, ಪಂಪಣ್ಣ, ಚೇತನ ಶಿವಕುಮಾರ, ಭಕ್ತರು ಪಾಲ್ಗೊಂಡಿದ್ದರು.- - - -14ಕೆಡಿವಿಜಿ34ಃ:
ದಾವಣಗೆರೆಯಲ್ಲಿ ಧರ್ಮ ಪ್ರಸರಣ ಸಮಿತಿಯಿಂದ ಸಾಧು ಸಂತರ ಪಾದಯಾತ್ರೆ ನಡೆಯಿತು.