ಸಾರಾಂಶ
ಖಾನಾಪುರ: ಸ್ಥಳೀಯ ಬ್ರಾಹ್ಮಣ ಸಮಾಜ ಮತ್ತು ಹರಿಪ್ರಿಯಾ ಭಜನಾ ಮಂಡಳಿ ವತಿಯಿಂದ ಭಾನುವಾರ ಪಟ್ಟಣದಿಂದ ತಾಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿಗಳ ಮಠದವರೆಗೆ ಪಾದಯಾತ್ರೆಯ ಮೂಲಕ ತೆರಳಿದರು. ಬಳಿಕ ರಾಯರ ಮಠದಲ್ಲಿ ರಾಘವೇಂದ್ರ ರಾಯರ ವೃಂದಾವನಕ್ಕೆ ವಿವಿಧ ಧಾರ್ಮಿಕಸೇವೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಸ್ಥಳೀಯ ಬ್ರಾಹ್ಮಣ ಸಮಾಜ ಮತ್ತು ಹರಿಪ್ರಿಯಾ ಭಜನಾ ಮಂಡಳಿ ವತಿಯಿಂದ ಭಾನುವಾರ ಪಟ್ಟಣದಿಂದ ತಾಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿಗಳ ಮಠದವರೆಗೆ ಪಾದಯಾತ್ರೆಯ ಮೂಲಕ ತೆರಳಿದರು. ಬಳಿಕ ರಾಯರ ಮಠದಲ್ಲಿ ರಾಘವೇಂದ್ರ ರಾಯರ ವೃಂದಾವನಕ್ಕೆ ವಿವಿಧ ಧಾರ್ಮಿಕಸೇವೆ ಸಲ್ಲಿಸಿದರು.ಪಟ್ಟಣದ ಚೌರಾಶಿ ದೇವಾಲಯದಿಂದ ಶುರುವಾದ ಪಾದಯಾತ್ರೆ ದೇವಲತ್ತಿ, ಪಾರಿಶ್ವಾಡ ಮಾರ್ಗವಾಗಿ ಗಾಡಿಕೊಪ್ಪ ತಲುಪಿ ಅಲ್ಲಿಯ ರಾಯರ ಮಠದಲ್ಲಿ ಅಂತ್ಯಗೊಂಡಿತು. ಮಠದಲ್ಲಿ ಮಠದ ಪ್ರಧಾನ ಅರ್ಚಕ ಅಚ್ಯುತಾಚಾರ್ಯ ಪಾಟೀಲ ಮತ್ತು ನಿತ್ಯಾನಂದ ಕುಲಕರ್ಣಿ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಅಷ್ಟೋತ್ತರ ಪಠಣ, ರಥೋತ್ಸವ, ಮಹಾನೈವೇದ್ಯ ಮತ್ತಿತರ ಸೇವೆಗಳು ಜರುಗಿದವು. 15ನೇ ವರ್ಷದ ಪಾದಯಾತ್ರೆ ಮತ್ತು ಮಠದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ದೇವಲತ್ತಿ, ಗುಂಜಿ, ಪಾರಿಶ್ವಾಡ, ಗಾಡಿಕೊಪ್ಪ, ಬೋಗೂರು ಗ್ರಾಮಗಳ 60ಕ್ಕೂ ಹೆಚ್ಚು ರಾಯರ ಭಕ್ತರು ಭಾಗವಹಿಸಿದ್ದರು. ಕೆ.ವಿ ಕುಲಕರ್ಣಿ, ವಿಠ್ಠಲ ಕುಲಕರ್ಣಿ, ಪ್ರವೀಣ ಕುಲಕರ್ಣಿ, ಉತ್ತಮ ಪಾಟೀಲ, ದ್ವಾರಕಾನಾಥ ಪಾಟೀಲ, ಸುಂದರ ಕುಲಕರ್ಣಿ, ಡಾ.ಸುರೇಶ ಕುಲಕರ್ಣಿ, ಶಿವಶಂಕರ ಕಟ್ಟೀಮನಿ ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು, ಭಜನಾ ಮಂಡಳ ಸದಸ್ಯರು, ಸೇವಾಕರ್ತರು ಇದ್ದರು.