ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಾದ್ಯಂತ ಭತ್ತ ನಾಟಿ ಕಾರ್ಯ ಬಹುತೇಕ ಮುಗಿದಿದ್ದು, ನಾಟಿ ಮಾಡಿ 30 ರಿಂದ 40 ದಿನಗಳಾಗಿರುವ ಈ ಸಂದರ್ಭದಲ್ಲಿ ಭತ್ತದ ಗದ್ದೆಗಳಲ್ಲಿ ಅಲ್ಲಲ್ಲಿ ಬೆಂಕಿ ರೋಗ ಮತ್ತು ಎಲೆ ಸುರುಳಿ ಹುಳುವಿನ ಭಾದೆ ಕಂಡು ಬಂದಿರುವುದರಿಂದ ಕೃಷಿ ಇಲಾಖಾ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ ಸಂಸ್ಥೆಯ ವಿಜ್ಞಾನಿಗಳ ತಂಡದೊಂದಿಗೆ ಜಂಟಿಯಾಗಿ ತಾಲೂಕಿನ ವಿವಿಧ ಗ್ರಾಮಗಳ ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿರುತ್ತದೆ. ಅದರಂತೆ ಕೀಟ/ ರೋಗ ಬಾದೆ ಕಂಡುಬಂದಿರುವ ರೈತರು ತುರ್ತಾಗಿ ಹತೋಟಿ ಕಾರ್ಯ ಕೈಗೊಳ್ಳುವಂತೆ ರೈತರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಮಡಿಕೇರಿ: ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಾದ್ಯಂತ ಭತ್ತ ನಾಟಿ ಕಾರ್ಯ ಬಹುತೇಕ ಮುಗಿದಿದ್ದು, ನಾಟಿ ಮಾಡಿ 30 ರಿಂದ 40 ದಿನಗಳಾಗಿರುವ ಈ ಸಂದರ್ಭದಲ್ಲಿ ಭತ್ತದ ಗದ್ದೆಗಳಲ್ಲಿ ಅಲ್ಲಲ್ಲಿ ಬೆಂಕಿ ರೋಗ ಮತ್ತು ಎಲೆ ಸುರುಳಿ ಹುಳುವಿನ ಭಾದೆ ಕಂಡು ಬಂದಿರುವುದರಿಂದ ಕೃಷಿ ಇಲಾಖಾ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ ಸಂಸ್ಥೆಯ ವಿಜ್ಞಾನಿಗಳ ತಂಡದೊಂದಿಗೆ ಜಂಟಿಯಾಗಿ ತಾಲೂಕಿನ ವಿವಿಧ ಗ್ರಾಮಗಳ ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿರುತ್ತದೆ. ಅದರಂತೆ ಕೀಟ/ ರೋಗ ಬಾದೆ ಕಂಡುಬಂದಿರುವ ರೈತರು ತುರ್ತಾಗಿ ಹತೋಟಿ ಕಾರ್ಯ ಕೈಗೊಳ್ಳುವಂತೆ ರೈತರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.ಬೆಂಕಿ ರೋಗದ ಲಕ್ಷಣಗಳು: ಭತ್ತದ ಬೆಳೆಯ ಎಲೆಗಳ ಮೇಲೆ ಪ್ರಾರಂಭದಲ್ಲಿ ಕಂದು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ. ನಂತರ ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗಿ ಗರಿಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳುಳ್ಳ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲು ಕಂದು ಬಣ್ಣವಾಗುತ್ತಾ, ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಎಲೆಯು ಸುಟ್ಟು ಹೋದಂತೆ ಕಂಡುಬರುತ್ತದೆ.ಎಲೆ ಸುರುಳಿ ಹುಳು: ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಹುಳುವಿನ ಭಾದೆ ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿದ್ದರೆ, ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಪೈರು ಬೆಳ್ಳಗೆ ಬಿಳಿಚಿ ಕೊಂಡಂತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ. ಆದ್ದರಿಂದ ರೈತ ಬಾಂಧವರು ಈ ಕೀಟ ಭಾದೆಯ ಲಕ್ಷಣಗಳು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡುಬಂದಿದ್ದರೆ, ಹಲವು ಕ್ರಮಗಳನ್ನು ಕೂಡಲೆ ಅನುಸರಿಸಬೇಕೆಂದು ರೈತರಲ್ಲಿ ಮನವಿ ಮಾಡಲಾಗಿದೆ. ಎಲೆ ಸುರುಳಿ ಹುಳುವಿನ ಭಾದೆ ಮೋಡ ಕವಿದ ವಾತಾವರಣ, ತುಂತುರು ಮಳೆ ಹನಿ, ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆ ಈ ಹುಳುವಿನ ಭಾದೆ ತೀವ್ರವಾಗಿ ಹರಡಲು ಕಾರಣಗಳಾಗಿವೆ.
ಪತಂಗವು ತಿಳಿ ಹಳದಿ ಬಣ್ಣ ಹೊಂದಿದ್ದು ರೆಕ್ಕೆಗಳ ಮೇಲೆ ತೆಳುವಾದ ಕಪುö್ಪ ಅಡ್ಡ ಗೆರೆಗಳಿರುತ್ತವೆ. ಹೆಣ್ಣು ಪತಂಗ ಸುಮಾರು 300 ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರ ರೇಖೆಯಲ್ಲಿ ಇಡುತ್ತದೆ. 4 ರಿಂದ 7 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು 15 ರಿಂದ 27 ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ಕೋಶಾವಸ್ಥೆ ಸೇರುತ್ತವೆ. ಆದರಿಂದ ಎಂಟು ದಿನಗಳವರೆಗೆ ಕೋಶಾವಸ್ಥೆಯಲ್ಲಿದ್ದು ತದನಂತರ ಪ್ರೌಢಕೀಟವು ಹೊರ ಬರುತ್ತದೆ. ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಸೋಮಶೇಖರ್ ಡಿ.ಎಸ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ವೀರೇಂದ್ರ ಕುಮಾರ್, ದೊರೈರಾಜ್ ಎನ್, ಸಹಾಯಕ ಕೃಷಿ ನಿರ್ದೇಶಕರು,(ವಿಷಯ ತಜ್ಞ), ಗೌರಿ ಆರ್, ಸಹಾಯಕ ಕೃಷಿ ನಿರ್ದೇಶಕರು, ವಿರಾಜಪೇಟೆ ತಾಲ್ಲೂಕು, ಮೀರಾ ಎ.ಪಿ, ಕೃಷಿ ಅಧಿಕಾರಿ, ಆತ್ಮ ಸಿಬ್ಬಂದಿಗಳಾದ ಸಲ್ಮ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು, ಮತ್ತು ಕಿರಣ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಇದ್ದರು.