ಭತ್ತದ ಗದ್ದೆಗಳು ಕೇವಲ ಕ್ರೀಡಾಕೂಟಕ್ಕೆ ಸಿಮೀತವಾಗದೆ ಆಹಾರ ಉತ್ಪಾದನೆಗೆ ಬಳಕೆಯಾಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಸುಂಟಿಕೊಪ್ಪ: ಭತ್ತದ ಗದ್ದೆಗಳು ಕೇವಲ ಕ್ರೀಡಾಕೂಟಕ್ಕೆ ಸಿಮೀತವಾಗದೆ ಆಹಾರ ಉತ್ಪಾದನೆಗೆ ಬಳಕೆಯಾಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು. ಭಾನುವಾರ ಸಂಜೆ ಇಲ್ಲಿಗೆ ಸಮೀಪದ ಗದ್ದೆಹಳ್ಳದಲ್ಲಿ ಗದ್ದೆಯ ಆಟ ತಂಡದ ವತಿಯಿಂದ 2ನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಭತ್ತದ ಗದ್ದೆಗಳು ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದ್ದು, ದುರದೃಷ್ಟವಶಾತ್ ಭತ್ತದ ಗದ್ದೆಗಳಲ್ಲ ಮನೆ ನಿವೇಶನದ ಬಡಾವಣೆಗಳಾಗಿ ಅಡಕೆ ತೋಟಗಳಾಗಿ ಮಾರ್ಪಡಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಸಾಧಕರಿಗೆ ಸನ್ಮಾನ: ಕ್ರೀಡಾ ಕ್ಷೇತ್ರ ಮತ್ತು ದೇಶ ಸೇವೆಯ ನಿವೃತ್ತಿ ನಂತರ ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮಾಗಲು ವಸಂತ, ಕ್ರೀಡಾಪಟುಗಳಾದ ಪಟ್ಟೆಮನೆ ನವನೀತಾ, ಶಾಯಿಲ್ ಉಸ್ಮಾನ್, ಶಿಕ್ಷಣ ಕ್ಷೇತ್ರದ ಸಾಧಕರಿಗೆ ಶಾಸಕ ಡಾ. ಮಂತರ್ ಗೌಡ, ಅತಿಥಿಗಳು ಗೌರವಿಸಿದರು. ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷ ಯಂಕನ ಉಲ್ಲಾಸ್ ಅವರು ಉದ್ಘಾಟಿಸಿದರು. ಕಾಫಿ ಬೆಳೆಗಾರ ಪಟ್ಟೆಮನೆ ಉದಯ ಕುಮಾರ್ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕಾಫಿ ಬೆಳೆಗಾರರಾದ ಪಟ್ಟೆಮನೆ ಗೋಪಾಲಕೃಷ್ಣ, ಪಟ್ಟೆಮನೆ ರಾಧಕೃಷ್ಣ, ಪಟ್ಟೆಮನೆ ಪ್ರಸನ್ನ, ಯಂಕನ ಎಲ್. ಶೇಖರ್, ಯಂಕನ ವಿಮಲ, ಬೆಂಗಳೂರಿನ ಎಚ್‌ಡಿಎಫ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಪಟ್ಟೆಮನೆ ಹರ್ಷಿತ, ನಾಕೂರು ಶಿರಂಗಾಲ ಗ್ರಾಪಂ ಮಾಜಿ ಅಧ್ಯಕ್ಷ ಮಂಡೋಡಿ ಜಗನ್ನಾಥ್, ಹೇರೂರು ಕಾಫಿ ಬೆಳೆಗಾರರಾದ ಮಂಡೋಡಿ ದಯನ್, ಮಂಡೋಡಿ ಹೇಮಚಂದ್ರ, ಮೊಟ್ಟನ ಕರುಣ,ಹೇರೂರು ಸರಾಯು ರೆಸಾರ್ಟ್ ನ ಕುರುಂಜಿ ದಯನ್, ಬಳ್ಳಾರಿಯ ಆನೆರ ಮಾಲಾ ಕಿರಣ್, ಬೆಂಗಳೂರಿನ ಪರಿವಾರ ನಮಿತಾ, ಟಿಂಬರ್ ವ್ಯಾಪಾರಿ ವಿಲಿಯಂ, ಗ್ರಾಪಂ ಮಾಜಿ ಸದಸ್ಯರಾದ ಎಚ್.ಯು. ರಫೀಕ್ ಖಾನ್, ಎಂ.ಎಸ್. ಜಿನಾಸುದ್ದೀನ್ ಹಾಗೂ ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.