ಸಾರಾಂಶ
ವೀರಕೇಸರಿ ಬೆಳ್ತಂಗಡಿ ತಂಡದ 200ನೇ ಮಹತ್ವಕಾಂಕ್ಷಿ ಯೋಜನೆಯಾದ 8ನೇ ‘ಆಸರೆ’ ಮನೆ ಗೃಹಪ್ರವೇಶ ಇತ್ತೀಚೆಗೆ ನಡೆಯಿತು. ತಂಡದ ಸದಸ್ಯರಾದ ಉದಯ ಗುಡಿಗಾರ್ ಇವರಿಗೆ ಕಲ್ಮಂಜ ಗ್ರಾಮದ ಅಂತರ ಬೈಲು ಪಾದೆಮೇಲು ಎಂಬಲ್ಲಿ ನಿರ್ಮಿಸಿದ ಮನೆ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೆಯ ವಾಕ್ಯ ಇಟ್ಟುಕೊಂಡಿರುವ ವೀರಕೇಸರಿ ಬೆಳ್ತಂಗಡಿ ತಂಡದ 200ನೇ ಮಹತ್ವಕಾಂಕ್ಷಿ ಯೋಜನೆಯಾದ 8ನೇ ‘ಆಸರೆ’ ಮನೆ ಗೃಹಪ್ರವೇಶ ಇತ್ತೀಚೆಗೆ ನಡೆಯಿತು. ತಂಡದ ಸದಸ್ಯರಾದ ಉದಯ ಗುಡಿಗಾರ್ ಇವರಿಗೆ ಕಲ್ಮಂಜ ಗ್ರಾಮದ ಅಂತರ ಬೈಲು ಪಾದೆಮೇಲು ಎಂಬಲ್ಲಿ ನಿರ್ಮಿಸಿದ ಮನೆಯನ್ನು ಸತ್ಯನಾರಾಯಣ ಪೂಜೆ, ಗಣಹೋಮ ಗೃಹ ಪ್ರವೇಶವದ ಮೂಲಕ ಹಸ್ತಾಂತರಿಸಲಾಯಿತು.ಶ್ರೀನಾಗಸಾಧು ತಪೋನಿಧಿ ಬಾಬಾ ಶ್ರೀವಿಠ್ಠಲ್ ಗಿರಿ ಜಿ ಮಹಾರಾಜ್
ಅಘೋರಿ ಶ್ರೀ ಭಾರ್ಗವ್ ರಾಮ್ ಜೀ ಮಹಾರಾಜ್ ಉಪಸ್ಥಿತರಿದ್ದು ಆಶೀರ್ವದಿಸಿದರು. ಶಾಸಕ ಹರೀಶ ಪೂಂಜ, ಉದ್ಯಮಿಗಳಾದ ಮೋಹನ್ ಕುಮಾರ್, ಕಿರಣ್ ಚಂದ್ರ, ಪ್ರವೀಣ್ ಫೆರ್ನಾಂಡಿಸ್, ಸುನೀಲ್, ಶೀತಲ್ ಜೈನ್, ರಾಜೇಶ್, ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷರ ಅರ್ಜುನ್ ಭಂಡಾರ್ಕರ್, ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲ, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಅಧ್ಯಕ್ಷ ರವೀಂದ್ರ ಗುಡಿಗಾರ್, ಬೆಂಗಳೂರು ವಿಶ್ವ ಪಾಂಡವರ ಸೇನೆಯ ಶ್ರೀರಾಮು, ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು ಮಧುಗಿರಿ ತುಮಕೂರು ಜಿಲ್ಲೆ ಶ್ರೀ ಕೃಷ್ಣಮೂರ್ತಿ ಮಧುಗಿರಿ ತುಮಕೂರು, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಸಮಾಜ ಸೇವಕ ಪ್ರಭಾಕರ ಸಿ.ಜಿ. ಕನ್ಯಾಡಿ, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಸಂಚಾಲಕ ಹರ್ಷೇಂದ್ರ ಗುಡಿಗಾರ್, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಹರೀಶ್ ಸುವರ್ಣ, ಸಂಚಾಲಕ ಸತೀಶ್ ಶೆಟ್ಟಿ, ಸಂಘಟಕ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.