ಕಾವೇರಿ ತೀರ್ಥೋದ್ಭವ ಬಳಿಕ ಕೊಡಗಿನ ಸಾಂಪ್ರದಾಯಿಕ ಐನ್-ಮನೆಗಳಲ್ಲಿ ನೆರವೇರುವ ಕಣಿಪೂಜೆಯ ದಿನದಿಂದ ಸತತ 10ನೇ ದಿನದಂದು ಅಂದರೆ, ಅ. 27ರಂದು ಕಕ್ಕಬೆ ಪಾಡಿ ಶ್ರೀ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಸಾಂಪ್ರದಾಯಿಕ ‘ಪತ್ತಾಲೋಧಿ’ (ತೊಲೆಯಾರ್ ಪತ್ತ್) ಆರಾಧನಾ ಮಹೋತ್ಸವ ಜರುಗಲಿದೆ.
ನಾಪೋಕ್ಲು : ಕಾವೇರಿ ತೀರ್ಥೋದ್ಭವ ಬಳಿಕ ಕೊಡಗಿನ ಸಾಂಪ್ರದಾಯಿಕ ಐನ್-ಮನೆಗಳಲ್ಲಿ ನೆರವೇರುವ ಕಣಿಪೂಜೆಯ ದಿನದಿಂದ ಸತತ 10ನೇ ದಿನದಂದು ಅಂದರೆ, ಅ. 27ರಂದು ಕಕ್ಕಬೆ ಪಾಡಿ ಶ್ರೀ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಸಾಂಪ್ರದಾಯಿಕ ‘ಪತ್ತಾಲೋಧಿ’ (ತೊಲೆಯಾರ್ ಪತ್ತ್) ಆರಾಧನಾ ಮಹೋತ್ಸವ ಜರುಗಲಿದೆ. ಈ ದಿನದಂದು ಪಾಡಿ, ಪೇರೂರು ಹಾಗೂ ನೆಲಜಿ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ಜರುಗಲಿವೆ.
ಆಯಾ ಪುಣ್ಯಕ್ಷೇತ್ರಗಳಿಗೆ ಸಂಬಂಧಿಸಿದ ತಕ್ಕ ಮುಖ್ಯಸ್ಥರ ಐನ್-ಮನೆಗಳಿಂದ ‘ಪಾಲ್ ಬೈವಾಡ್’ ಆಗಮನ ಆಗಮಿಸಲಿದೆ. ಪಾಡಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಐನ್-ಮನೆ ಹಾಗೂ ಇತರ ತಕ್ಕ ಕುಟುಂಬಗಳಿಂದ ‘ಪಾಲ್ ಬೈವಾಡ್’ ಬರಲಿದ್ದು, ಸಂಪ್ರದಾಯದಂತೆ ‘ ತೊಲೆಯಾರ್ ಪತ್ತ್ ಆರಾಧನೆ’ ನೆರವೇರಲಿದೆ. ವಿಶೇಷ ಪೂಜಾ ಕಾರ್ಯ ಹಾಗೂ ತುಲಾಭಾರ ಸೇವೆಗಳು, ಅನ್ನ ಸಂತರ್ಪಣೆ ನಡೆಯಲಿವೆ. ನಾಟ್ಯ ಸುತ್ತುಗಳೊಂದಿಗೆ ಉತ್ಸವ ಮೂರ್ತಿಯ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.