ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ 12 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಭಕ್ತರ ಪ್ರವೇಶದ ಕಾರಿಡಾರ್‌ನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಪ್ರಮುಖರು ದೀಪ ಬೆಳಗಿ ಲೋಕಾರ್ಪಣೆಗೊಳಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ ದೇವಾಲಯದಲ್ಲಿ ಭಕ್ತರ ಅನುಕೂಲಕ್ಕಾಗಿ ನೂತನ ಮೇಲ್ಚಾವಣಿಯನ್ನು ನಿರ್ಮಿಸಲಾಗಿರುವುದು ಸಂತೋಷದ ವಿಷಯವಾಗಿದೆ. ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್, ದಾನಿ ತೀತಿರ ರೋಶನ್ ಅಪ್ಪಚ್ಚು ಅವರ ಸಹಕಾರದಿಂದ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆದಿದ್ದು ಭಕ್ತರಿಗೆ ಅನುಕೂಲವಾಗಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ವಿವಿಧ ಕಾಮಗಾರಿಗಳ ಮೂಲಕ ದೇವಾಲಯ ಅಭಿವೃದ್ಧಿಯನ್ನು ಕಾಣುತ್ತಿದೆ. ಇನ್ನು ಮುಂದೆ ಹೆಚ್ಚಿನ ಅಭಿವೃದ್ಧಿ ಆಗಿ ಕೊಡಗಿನ ಜನತೆಗೆ ದೇವರ ಆಶೀರ್ವಾದ ಸದಾ ಲಭಿಸಲಿ ಎಂದರು. ಈ ಸಂದರ್ಭ ದೇವಾಲಯದ ಅಭಿವೃದ್ಧಿಗಾಗಿ ಶಾಸಕ ಪೊನ್ನಣ್ಣ ಅವರಲ್ಲಿ ಭಕ್ತ ಜನ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಅರ್ಚಕ ಕುಶಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಭಕ್ತಜನ ಸಂಘದ ಉಪಾಧ್ಯಕ್ಷ ಕಲಿಯಾಟಂಡ ರಾಜಾ ಅಪ್ಪಣ್ಣ, ಕಾರ್ಯದರ್ಶಿ ಬಟ್ಟೀರ ಚೋಧಮ್ಮ, ಖಜಾಂಜಿ ಅಂಜಪರವoಡ ಕುಶಾಲಪ್ಪ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್, ದಾನಿ ತೀತಿರ ರೋಶನ್ ಅಪ್ಪಚ್ಚು, ಶ್ರೀಮತಿ ಅಪ್ಪಚ್ಚು, ಪ್ರಮುಖರಾದ ಡಾ.ಸಣ್ಣುವಂಡ ಕಾವೇರಪ್ಪ, ಬಟ್ಟಿಕಾರಂಡ ಮುತ್ತಣ್ಣ, ಪಾಂಡಂಡ ನರೇಶ್, ಬಾಚಮಂಡ ಪುವಣ್ಣ , ಪರದಂಡ ಡಾಲಿ, ರಮೇಶ, ಪ್ರಿನ್ಸ್ ತಮ್ಮಯ್ಯ, ಕಲಿಯಂಡ ಸಂಪನ್ ಅಯ್ಯಪ್ಪ, ಬಾಚಮಂಡ ಲವ ಚಿಣ್ಣಪ್ಪ, ಕುಲೇಟಿರ ಅರುಣ್ ಬೇಬ, ಬೊಳ್ಳಂಡ ಶರಿ, ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.ಅನಂತರ ಆಗಮಿಸಿದ ಸಂಸದ ಯದುವೀರ ಕೃಷ್ಣರಾಜ ಒಡೆಯರ್ ದೇವಾಲಯದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೊಡಗಿನ ಕುಲದೇವರಾದ ಇಗ್ಗುತ್ತಪ್ಪ ದೇವಾಲಯದ ತಾಣದಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಕಾರಿಡಾರನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ದೇವಾಲಯದ ಅಭಿವೃದ್ಧಿಗಾಗಿ ಸಂಸದ ಯದುವೀರ ಕೃಷ್ಣರಾಜ ಒಡೆಯರ್ ಅವರಲ್ಲಿ ಭಕ್ತ ಜನ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .