ನ್ಯಾಮತಿ ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 34ನೇ ವರ್ಷದ ಪಡಿಪೂಜೆ ಮತ್ತು ದೀಫೋತ್ಸವ ಕಾರ್ಯಕ್ರಮಗಳು ಜ.9ರಿಂದ 14ರವರೆಗೆ ಜರುಗಲಿವೆ.
- ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಸಾನ್ನಿಧ್ಯ
- - -ನ್ಯಾಮತಿ: ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 34ನೇ ವರ್ಷದ ಪಡಿಪೂಜೆ ಮತ್ತು ದೀಫೋತ್ಸವ ಕಾರ್ಯಕ್ರಮಗಳು ಜ.9ರಿಂದ 14ರವರೆಗೆ ಜರುಗಲಿವೆ.
ಶ್ರೀ ಭಗವಾನ್ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಹಾಗೂ ಗೋವಿನಕೋವಿ ಶ್ರೀ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ಜರುಗುವುವು. ಜ.9ರಂದು ಬೆಳಗ್ಗೆ ಶ್ರೀ ಸ್ವಾಮಿಯ ಧ್ವಜಾರೋಹಣ ಹಾಗೂ ರಾತ್ರಿ ಶನಿ ಪುರಾಣ, ಜ.11ರಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಜ.12ರಂದು ಕುಂಬಾಭಿಷೇಕ, ಸಂಜೆ 18 ಮೆಟ್ಟಿಲುಗಳ (ಪಡಿ)ಪೂಜೆ, ಜ.13ನೇ ಮಂಗಳವಾರ ಬೆಳಗಿನ ಜಾವ ಶ್ರೀ ಅಯ್ಯಪ್ಪಸ್ವಾಮಿಗೆ ರುದ್ರಾಭಿಷೇಕ, ಗಣಹೋಮ ಮತ್ತು ತುಪ್ಪದ ಅಭಿಷೇಕ, ಪೂಜೆ ನಡೆಯಲಿವೆ.ಈ ಪೂಜಾ ಕೈಂಕರ್ಯಗಳು ಅರ್ಚಕ ಕೋಹಳ್ಳಿ ಹಿರೇಮಠದ ಎನ್.ಕೆ. ವಿಶ್ವಾರಾಧ್ಯ ಶಾಸ್ತ್ರಿ ಮತ್ತು ಪ್ರಧಾನ ಅರ್ಚಕ ಸುಬ್ರಮಣ್ಯ ಸ್ವಾಮಿ ಅವರಿಂದ ನಡೆಯಲಿದೆ. ಸಂಜೆ ಪ್ರಮುಖ ರಾಜಬೀದಿಗಳಲ್ಲಿ ಉತ್ಸವ ನಂತರ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಜ.14ರಂದು ನ್ಯಾಮತಿ ತಾಲೂಕಿನ ಪುಣ್ಯಕ್ಷೇತ್ರ ತೀರ್ಥರಾಮೇಶ್ವರ ದೇವಸ್ಥಾನದಿಂದ ತಿರುವಾಭರಣದ ಪೂಜಾ ಕಾರ್ಯಕ್ರಮ ನೆರವೇರಿಸಲಾಗುವುದು. ಅಲ್ಲಿಂದ ಪಾದಯಾತ್ರೆಯಲ್ಲಿ ಬೆಳಗುತ್ತಿ, ಮಲ್ಲಿಗೇನಹಳ್ಳಿ, ಕೆಂಚಿಕೊಪ್ಪ, ಆರೂಮಡಿ ಗ್ರಾಮಗಳ ಮುಖಾಂತರ ನ್ಯಾಮತಿ ಪಟ್ಟಣಕ್ಕೆ ಪ್ರವೇಶಿಸಲಾಗುವುದು. ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀ ಅಯ್ಯಪ್ಪಸ್ವಾಮಿ ತಲುಪಿದ ನಂತರ ಶ್ರೀ ಸ್ವಾಮಿಗೆ ವಿಶೇಷ ಆಭರಣ ಅಲಂಕಾರ ಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಇರಲಿದೆ. ತಿರುವಾಭರಣ ಅಲಂಕಾರದ ದರ್ಶನ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ತಿಳಿಸಿದೆ.
- - -(ಸಾಂದರ್ಭಿಕ ಚಿತ್ರ)