ಸಂಭ್ರಮದಿಂದ ಜರುಗಿದ ಪದ್ಮಾವತಿ ದೇವಿ ರಥೋತ್ಸವ

| Published : Apr 03 2024, 01:37 AM IST

ಸಂಭ್ರಮದಿಂದ ಜರುಗಿದ ಪದ್ಮಾವತಿ ದೇವಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಡಲಗೇರಿ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿರುವ ಮಹಾಲಕ್ಷ್ಮೀ ಪದ್ಮಾವತಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನ ಹಡಲಗೇರಿ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿರುವ ಮಹಾಲಕ್ಷ್ಮೀ ಪದ್ಮಾವತಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.

ವೇಳೆ ಜೈನ ಸಮಾಜ ಬಾಂಧವರು ಸೇರಿದಂತೆ ತಾಲೂಕಿನ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಜೈ ಪದ್ಮಾವತಿ ಜೈಜೈ ಎಂದು ಘೋಷಣೆ ಕೂಗಿ ಉತ್ತತ್ತಿ, ಬಾಳೆ ಹಣ್ಣು ಸೇರಿದಂತೆ ಇತರೆ ಧವಸ ಧಾನ್ಯಗಳನ್ನು ರಥೋತ್ಸವಕ್ಕೆ ಸಮರ್ಪಿಸಿ ಭಕ್ತಿ ಮೆರೆದರು. ಪಾರ್ಶ್ವನಾಥ ಪದ್ಮಾವತಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಭಿನಂದನ ಗೋಗಿ, ಕಮಿಟಿ ಉಪಾಧ್ಯಕ್ಷ ತೀರ್ಥಂಕರ, ಗೊಮ್ಮಟೇಶ ಸಗರಿ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಜಿನದತ್ತ ಅಲದಿ, ಕಮಿಟಿ ಕಾರ್ಯದರ್ಶಿ ಮಾಣಿಕಚಂದ ದಂಡಾವತಿ ವಿವಿಧ ಕ್ಷೇತ್ರಗಳ ಸಾಧಕರಾದ ಅಜಿತ ವಂದಕುದರಿ, ಅನಿಲಕುಮಾರ ಇರಾಜ, ವಿದ್ಯಾಧರ ಯಾದಗಿರಿ, ಚೂಡಪ್ಪ ಮುತ್ತಿನ, ಸಮ್ಮೇದ ವಂಟಕುದರಿ,

ಚಲನಾ ದಂಡಾವತಿ, ಭಾವನಾ ದಂಡಾವತಿ ಜಿನಸ್ಕೃತಿ, ಮೇಘಾ ದಂಡಾವತಿ, ಅಶೋಕ ಮಣಿ ಪ್ರಾಸ್ತಾವಿಕ ಮಾತನಾಡಿದರು. ಶೈಲಾ ಗೊಂಗಡಿ ನಿರೂಪಿಸಿದರು. ಕಮಿಟಿ ಖಜಾಂಚಿ ಬಾಹುಬಲಿ ಗೋಗಿ ವಂದಿಸಿದರು.