ಸಾರಾಂಶ
ಮಂಗಳೂರು ತಾಲೂಕು ಪಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಸುಮಾರು 24 ವರ್ಷದ ಬಳಿಕ ಪಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುಪ್ರೀತ್ ರೈ ಪಡು ಮಾತನಾಡಿ, ಕೇವಲ ಮೂರು ತಿಂಗಳ ಅಂತರದಲ್ಲಿ ದೇವಾಲಯ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷೆ ಮೀರಿ ಯಶಸ್ವಿಯಾಗಿ ನಡೆಯುತ್ತಿವೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಮಾದರಿಯಾಗಿ ನಡೆಸಬೇಕಿದೆ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ತಾರನಾಥ ಭಟ್, ಪವಿತ್ರಪಾಣಿ ಉದಯಪ್ರಕಾಶ್ ಭಟ್, ನೀರುಮಾರ್ಗ ಗ್ರಾ.ಪಂ. ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ತಿರುವೈಲುಗುತ್ತು ಮನೆ ಯಜಮಾನ ನವೀನ್‌ಚಂದ್ರ ಆಳ್ವ, ಬದಿನಡಿ ಅರಸು ಮುಂಡಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ಪದ್ಮನಾಭ ಕೋಟ್ಯಾನ್, ಮಾಜಿ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಭಂಡಾರಿ ಮಜಲು, ಕಿರಣ್ ಪಕ್ಕಳ ಪೆರ್ಮಂಕಿ, ಗೌರವಾಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಪಡುಪಳ್ಳಿ, ಉಪಾಧ್ಯಕ್ಷರಾದ ಸನತ್ ಕುಮಾರ್ ರೈ, ಸಚಿನ್ ಹೆಗ್ಡೆ ಹೊಸಮನೆ, ಪದ್ಮನಾಭ ಆಳ್ವ, ವಿಜಯ್ ಕೋಟ್ಯಾನ್ ಪಡು, ನವೀನ್ ಚೌಟ, ಕಲ್ಲುಡೇಲು ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ತಿಮಿಗುತ್ತು ನಾಗರಾಜ್ ರೈ, ಸುರೇಶ್ ಶೆಟ್ಟಿ ಕಾಪೆಟ್ಟುಗುತ್ತು, ಸತೀಶ್ ಶೆಟ್ಟಿ ಪಡುಪಳ್ಳಿ, ಪ್ರಕಾಶ್ ಆಳ್ವ ಮಲ್ಲೂರು, ಅಶ್ವಿನಿ ರೈ ಬೊಂಡಂತಿಲ, ಚಂದ್ರಹಾಸ ಶೆಟ್ಟಿಕಾಪೆಟ್ಟುಗುತ್ತು ಇದ್ದರು.ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಗೋಕುಲ್‌ದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಸಚಿನ್ ಹೆಗ್ಡೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ನಿರೂಪಿಸಿದರು.