ಸಾರಾಂಶ
ಪಾಕಿಸ್ತಾನಿ ಬೆಂಬಲಿತ ಧರ್ಮಾಂಧ ಉಗ್ರರು ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿರುವ ಪೈಶಾಚಿಕ ಕೃತ್ಯ ಹ್ಯೇಯವಾಗಿದೆ. ಇಂತವರಿಗೆ ಮತ್ತು ಉಗ್ರವಾದವನ್ನು ಬೆಂಬಲಿಸುವವರಿಗೆ ತಕ್ಕಪಾಠ ಕಲಿಸುವ ಸಮಯ ಬಂದಿದೆ.
ಅಳ್ನಾವರ: ಕಾಶ್ಮೀರದ ಪಹಲ್ಗಾಂ ಪ್ರದೇಶದಲ್ಲಿ ಉಗ್ರರು ದಾಳಿ ಮಾಡಿ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯಕ್ಕೆ ಎಲ್ಲರೂ ಬೆಂಬಲಿಸಬೇಕಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಿ ಬೆಂಬಲಿತ ಧರ್ಮಾಂಧ ಉಗ್ರರು ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿರುವ ಪೈಶಾಚಿಕ ಕೃತ್ಯ ಹ್ಯೇಯವಾಗಿದೆ. ಇಂತವರಿಗೆ ಮತ್ತು ಉಗ್ರವಾದವನ್ನು ಬೆಂಬಲಿಸುವವರಿಗೆ ತಕ್ಕಪಾಠ ಕಲಿಸುವ ಸಮಯ ಬಂದಿದೆ. ಈ ಸಂದರ್ಭದಲ್ಲಿ ರಾಜಕೀಯ ಮಾಡದೆ ಎಲ್ಲರೂ ಸರ್ಕಾರದ ಪರವಾಗಿ ನಿಲ್ಲಬೇಕು ಎಂದಿದ್ದಾರೆ.370ನೇ ವಿಧಿಯನ್ನು ರದ್ದು ಮಾಡಿದ ನಂತರ ಅಸಹಾಯಕವಾಗಿರುವ ಒಂದು ಗುಂಪು ಇಂತಹ ಕೃತ್ಯಗಳನ್ನು ನಡೆಸಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ನಾವೆಲ್ಲ ಸಂಘಟಿತರಾಗಿ ಉಗ್ರವಾದದ ನಿರ್ಮೂಲನೆಗೆ ಕೈ ಜೋಡಿಸಬೇಕಾಗಿದೆ. ಜಾತಿ- ಧರ್ಮದ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳದೆ ಭಾರತೀಯರು ಎನ್ನುವ ಮನೋಭಾವನೆ ನಮ್ಮಲ್ಲಿ ಬಲಗೊಳ್ಳಬೇಕು. ಆಗ ಮಾತ್ರ ಮೋದಿ ಅವರ ಕೈ ಗಟ್ಟಿಗೊಳ್ಳಲು ಸಾಧ್ಯವಿದೆ. ಉಗ್ರವಾದದ ವಿರುದ್ಧ ಹೋರಾಟ ನಮ್ಮಿಂದ ಪ್ರಾರಂಭವಾಗಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಅಳ್ನಾವರ ಮಂಡಳ ಅಧ್ಯಕ್ಷ ಯಲ್ಲಪ್ಪ ಹುಲೆಪ್ಪನವರ, ಶಕ್ತಿ ಕೇಂದ್ರದ ಅಧ್ಯಕ್ಷ ಲಖನ್ ಬರಗುಂಡಿ, ನಾರಾಯಣ ಮೋರೆ, ಕರೆಪ್ಪ ಅಮ್ಮಿನಭಾವಿ, ಶಿವಾಜಿ ಡೊಳ್ಳಿನ, ಪ್ರವೀಣ ಪವಾರ, ಲಿಂಗರಾಜ ಮೂಲಿಮನಿ ಸೇರಿದಂತೆ ಹಲವರಿದ್ದರು.ಉಗ್ರರ ದಾಳಿ ಖಂಡಿಸಿ ತಹಸೀಲ್ದಾರ್‌ಗೆ ಮನವಿಕುಂದಗೋಳ:
ಕಾಶ್ಮೀರದಲ್ಲಿ ಉಗ್ರರಿಂದ ನಡೆದ ದಾಳಿಯನ್ನು ಖಂಡಿಸಿ ಕುಂದಗೋಳ ಅಂಜುಮನ್ ಸಂಸ್ಥೆ ಹಾಗೂ ಮುಸ್ಲಿಂ ಸಮಾಜ ಬಾಂಧವರು ತಹಸೀಲ್ದಾರ್ ರಾಜು ಮಾವರಕರ ಮೂಲಕ, ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಖಯುಂ ನಾಲಬಾಂದ. ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ರಾಯೇಸಾಬ್ ಕಳ್ಳಿಮನಿ. ಹಿರಿಯರಾದ ಎ.ಟಿ. ಹುಬ್ಬಳ್ಳಿ, ಮೌಲಾಸಾಬ್ ಶರೆವಾಡ, ಮೌಲಾನಾ ಅಬ್ದುಲ್ ರೈಮಾನ್, ಉಪಾಧ್ಯಕ್ಷರಾದ ಆಸೀಫ್ ಹರಪನಳ್ಳಿ, ಹಜರತಲಿ ಕರ್ಜಗಿ, ಜಾಕೀರ್ ಹುಸೇನ್ ಯರಗುಪ್ಪಿ, ಮಹ್ಮದ್ ರಫೀಕ್ ಶರೆವಾಡ, ಇಮಾಮಸಾಬ್ ಜಾನವಾಡ, ಬಾಬುಸಾಬ್ ಮಿಶ್ರಿಕೋಟಿ, ಮಮ್ಮುಷಾ ನಾಸವಾಲೆ, ಎಂ.ಎಚ್. ಕಳ್ಳಿಮನಿ, ಅಯೂಬ್ ಕಲೆಗಾರ, ಶರೀಫಸಾಬ್ ನೀಲಗಾರ, ಅಸ್ಲಂ ಶೇಕ್. ಇಬ್ರಾಹಿಂ ಕಲೆಗಾರ. ಫಾರೂಕ್ ಮುಲ್ಲಾ , ಖಾಜೇಸಾಬ್ ದವಡಿ ಮತ್ತು ಸಮಾಜದ ಹಿರಿಯರು ಯುವ ಮಿತ್ರರು ಉಪಸ್ಥಿತರಿದ್ದರು.