ಪೆಹಲ್ಗಾಮ್ ದಾಳಿ ಹೇಡಿಗಳು ನಡೆಸಿದ ಕೃತ್ಯ

| Published : Apr 27 2025, 01:34 AM IST

ಸಾರಾಂಶ

ಪೆಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ಭಾರತದ ಪ್ರವಾಸಿಗರ ಮೇಲೆ ನಡೆಸಿರುವುದು ಖಂಡನೀಯ. ಇದೊಂದು ಹೇಡಿಗಳ ಕೃತ್ಯ. ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ವಿಕೃತ ಆನಂದ ಪಡುತ್ತಿದೆ. ಭಾರತವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂಬುದನ್ನು ಪಾಕಿಸ್ತಾನ ಮರೆತಂತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಂನಲ್ಲಿ ನಡೆಸಿದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಶನಿವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಟೌನ್ ಹಾಲ್ ವೃತ್ತದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಗಂಗಮ್ಮ ಗುಡಿ ರಸ್ತೆ ಬಜಾರ್ ರಸ್ತೆ ಎಂಜಿ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣಿಗೊಂಡು ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.ಪಾಕ್‌ ವಿರುದ್ಧ ಘೋಷಣೆ

ಮೆರವಣಿಗೆ ಉದ್ದಕ್ಕೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಾಕಿಸ್ತಾನದ ಕೃತ್ಯವನ್ನು ಖಂಡಿಸಿ ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಮೊಳಗಿಸಿದರು.ಈ ವೇಳೆ ಮಾತನಾಡಿದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಂದೀಪ್.ಬಿ.ರೆಡ್ಡಿ, ಪೆಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ಭಾರತದ ಪ್ರವಾಸಿಗರ ಮೇಲೆ ನಡೆಸಿರುವುದು ಖಂಡನೀಯ. ಇದೊಂದು ಹೇಡಿಗಳ ಕೃತ್ಯ. ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ವಿಕೃತ ಆನಂದ ಪಡುತ್ತಿದೆ. ಭಾರತವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂಬುದನ್ನು ಪಾಕಿಸ್ತಾನ ಮರೆತಂತಿದೆ. ಅತಿ ಶೀಘ್ರದಲ್ಲೇ ಉಗ್ರರ ಹೆಡೆಮುರಿ ಕಟ್ಟುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳಿಂದ ಗೇಲಿಪೆಹಲ್ಗಾಮ್ ನಲ್ಲಿ ನಡೆದಿರುವ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತಿದೆ. ವಿಪರ್ಯಾಸವೆಂದರೆ ವಿರೋಧ ಪಕ್ಷಗಳು ಗುಪ್ತಚರ ಇಲಾಖೆ ವೈಫಲ್ಯ ಎಂದು ಗೇಲಿ ಮಾಡುತ್ತಿವೆ. ದೇಶವು ಗಂಡಾಂತರ ಪರಿಸ್ಥಿತಿ ಎದುರಿಸುವಾಗ ಜವಾಬ್ದಾರಿಯುತ ವಿರೋಧ ಪಕ್ಷಗಳು ಸರ್ಕಾರದೊಟ್ಟಿಗೆ ಕೈಜೋಡಿಸಬೇಕು ಆ ಮೂಲಕ ಉಗ್ರರ ಶಮನಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.ಹಿಂದೂಪರ ಸಂಘಟನೆಗಳು ನಡೆಸಿದ ಪಂಜಿನ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮೀಯರು ಭಾಗವಹಿಸಿ ಉಗ್ರರ ಕೃತೃತ್ವವನ್ನು ಖಂಡಿಸಿದರು.